‘ಬದುಕಲ್ಲಿ ಬಂಗಾರ ಅಕ್ಷಯಾವಾಗಲಿ‘

0

ಬರಹ: @ಕೃಷ್ಣ ವೇಣಿ ಪ್ರಸಾದ್ ಮುಳಿಯ

ಸಹಕಾರ:@ವಿಘ್ನೇಶ್ ಭಟ್ ಪಡ್ನೂರ್

ಬಂಗಾರ ನಮ್ಮ ಜೀವನದಲ್ಲಿ ಬಹು ಪ್ರಿಯ ಹಾಗೂ ಶ್ರೇಷ್ಠತೆ ಯನ್ನು ಪಡೆದ ವಿಷೇಶ ವಸ್ತು, ಬಂಗಾರದ ಖರೀದಿಯೊಂದಿಗೆ ಹಲವಾರು ಒಳ್ಳೆ ಕೆಲಸಗಳನ್ನು ಮಾಡಬೇಕು.
ಬಂಗಾರ ಏಕೆ ಶ್ರೇಷ್ಠ ಅಕ್ಷಯ ತೃತೀಯಾದ ದಿನ ಮನೆಗೆ ಬಂಗಾರ ಬಂದ್ರೆ ಅದೇಕೆ ಉನ್ನತಿ ಎಂದರೆ ಬಂಗಾರಕ್ಕೆ ಅದರದ್ದೆ ಆದ ಸ್ಥಾನ ಇದೆ, ರಾಜಲೋಹ ಎಂದರೆ ಅಷ್ಟೊಂದು ಜೀವನಕ್ಕೆ ಆಧಾರ ಈ ಬಂಗಾರ! ಹಿಂದೆ ಖರೀದಿಮಾಡಿದವರೆಲ್ಲ ಇಂದು ಸಂತಸದಿಂದಲೇ ಇದ್ದಾರೆ. ಜೀವನದಲ್ಲಿ ಎಲ್ಲರು ಯಶಸ್ಸು ಕಂಡಿದ್ದಾರೆ, ಬಂಗಾರದಿಂದ ಹಲವಾರು ರೀತಿಯ ಬಳಕೆ ಜೀವನದಲ್ಲಿ ಸಾಧ್ಯ! ಯಾವಾಗ ಬೇಕಾದರೂ ಅದನ್ನು ಹಣವಾಗಿ (ಸಂಪತ್ತಾಗಿ )ಬದಲಾಯಿಸಲು ಸಾಧ್ಯ.

ಧರ್ಮವಿಚಾರ:
ಅಕ್ಷಯ ತೃತೀಯಾ 2026- ಮೂರುವರೆ ಮುಹೂರ್ತಗಳಲ್ಲಿ ಒಂದಾದ ಅಕ್ಷಯ ತೃತೀಯಾ
ಹಿಂದೂ ಧರ್ಮದಲ್ಲಿ ಪ್ರತಿ ವರ್ಷ ವೈಶಾಖ ಶುದ್ಧ ತದಿಗೆಯನ್ನು ಅಕ್ಷಯ ತೃತೀಯಾ ಎಂದು ಆಚರಿಸಲಾಗುತ್ತದೆ. 2026 ರಲ್ಲಿ ಏಪ್ರಿಲ್ 19 ರಂದು ಅಕ್ಷಯ ತೃತೀಯಾವನ್ನು ಆಚರಿಸಲಾಗುವುದು. ಭಾರತೀಯ ಸಂಸ್ಕೃತಿಯಲ್ಲಿ ಈ ದಿನಕ್ಕೆ ಅತ್ಯಂತ ವಿಶೇಷ ಸ್ಥಾನವಿದೆ ಏಕೆಂದರೆ ಇದು ವರ್ಷದ ಮೂರುವರೆ ಅತ್ಯಂತ ಶುಭ ಮುಹೂರ್ತಗಳಲ್ಲಿ ಒಂದು ಪೂರ್ಣ ಮುಹೂರ್ತವಾಗಿದೆ ಈ ದಿನದಂದು ಮಾಡಿದ ದಾನ ಧರ್ಮ ಜಪ ಮತ್ತು ಪುಣ್ಯ ಕಾರ್ಯಗಳು ಎಂದಿಗೂ ಕ್ಷಯಿಸುವುದಿಲ್ಲ ಅಂದರೆ ನಾಶವಾಗುವುದಿಲ್ಲ ಎಂಬ ನಂಬಿಕೆಯಿದೆ ಈ ಕಾರಣದಿಂದಲೇ ಇದನ್ನು ಅಕ್ಷಯ ತೃತೀಯಾ ಎಂದು ಕರೆಯಲಾಗುತ್ತದೆ.

ಅಕ್ಷಯ ತೃತೀಯಾ ಮಹತ್ವ
ಶಾಸ್ತ್ರಗಳ ಪ್ರಕಾರ ಅಕ್ಷಯ ತೃತೀಯಾ ದಿನದಂದು ಕೃತಯುಗ ಅಥವಾ ತ್ರೇತಾಯುಗ ಆರಂಭವಾಯಿತು ಎಂದು ನಂಬಲಾಗಿದೆ ಈ ಪವಿತ್ರ ದಿನದಂದೇ ಭಗವಂತನ ಅವತಾರಗಳಾದ ಹಯಗ್ರೀವ ನರನಾರಾಯಣ ಮತ್ತು ಪರಶುರಾಮರ ಪ್ರಕಟೀಕರಣವಾಯಿತು ಎಂದು ಪುರಾಣಗಳು ತಿಳಿಸುತ್ತವೆ ಈ ದಿನದಂದು ಬ್ರಹ್ಮ ಮತ್ತು ಶ್ರೀವಿಷ್ಣುವಿನ ಸಾತ್ತ್ವಿಕ ಲಹರಿಗಳು ಭೂಮಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ವಾತಾವರಣದಲ್ಲಿ ಸಾತ್ತ್ವಿಕತೆ ಹೆಚ್ಚಾಗಿರುತ್ತದೆ ಈ ಕಾಲಮಹಾತ್ಮೆಯಿಂದಾಗಿ ಈ ದಿನ ಮಾಡುವ ಸ್ನಾನ ದಾನ ಮತ್ತು ದೇವತಾ ಪೂಜೆಯು ಹೆಚ್ಚಿನ ಆಧ್ಯಾತ್ಮಿಕ ಲಾಭವನ್ನು ನೀಡುತ್ತದೆ.

ಧಾರ್ಮಿಕ ವಿಧಿಗಳು ಮತ್ತು ಆಚರಣೆಗಳು
ಅಕ್ಷಯ ತೃತೀಯಾ ದಿನದಂದು ಮುಹೂರ್ತವನ್ನು ನೋಡದೆಯೇ ಯಾವುದೇ ಶುಭ ಕಾರ್ಯಗಳನ್ನು ಮಾಡಬಹುದು ಈ ದಿನದ ಮುಖ್ಯ ಆಚರಣೆಗಳು ಈ ಕೆಳಗಿನಂತಿವೆ.

ಪವಿತ್ರ ಸ್ನಾನ ಮತ್ತು ದೇವತಾ ಪೂಜೆ
ಬೆಳಿಗ್ಗೆ ಬೇಗ ಎದ್ದು ಪವಿತ್ರ ನದಿಗಳಲ್ಲಿ ಅಥವಾ ಮನೆಯಲ್ಲಿಯೇ ಗಂಗೆಯನ್ನು ಸ್ಮರಿಸಿ ಸ್ನಾನ ಮಾಡುವುದು ಶ್ರೇಷ್ಠ ಈ ದಿನದಂದು ವಿಶೇಷವಾಗಿ ಶ್ರೀವಿಷ್ಣುವಿನ ಪೂಜೆ ಜಪ ಮತ್ತು ಹೋಮ ಹವನಗಳನ್ನು ಮಾಡಬೇಕು.

ಪಿತೃ ತರ್ಪಣ
ಅಕ್ಷಯ ತೃತೀಯಾ ದಿನದಂದು ಪಿತೃಗಳನ್ನು ಉದ್ದೇಶಿಸಿ ತರ್ಪಣ ನೀಡುವುದು ಅತ್ಯಂತ ಫಲಪ್ರದವಾಗಿದೆ ಇದು ಪಿತೃ ದೋಷ ನಿವಾರಣೆಗೆ ಮತ್ತು ಪಿತೃಗಳ ಆಶೀರ್ವಾದ ಪಡೆಯಲು ಅತ್ಯಂತ ಸೂಕ್ತ ದಿನವಾಗಿದೆ ಅಪಿಂಡಕ ಶ್ರಾದ್ಧ ಅಥವಾ ಎಳ್ಳು ನೀರು ಬಿಡುವ ಮೂಲಕ ಪಿತೃಗಳಿಗೆ ತರ್ಪಣ ನೀಡಬಹುದು.

ಸತ್ಪಾತ್ರೇ ದಾನ
ಈ ದಿನ ಮಾಡುವ ದಾನವು ಅಕ್ಷಯ ಪುಣ್ಯವನ್ನು ತಂದುಕೊಡುತ್ತದೆ ದಾನವು ಯಾವಾಗಲೂ ಸತ್ಪಾತ್ರರಿಗೆ ಅಂದರೆ ಯೋಗ್ಯ ವ್ಯಕ್ತಿಗಳಿಗೆ ಅಥವಾ ಧರ್ಮದ ಪ್ರಸಾರ ಮಾಡುವ ಸಂಸ್ಥೆಗಳಿಗೆ ನೀಡಬೇಕು ಇದನ್ನು ಸತ್ಪಾತ್ರೇ ದಾನ ಎನ್ನಲಾಗುತ್ತದೆ. ಇದರಿಂದ ದಾನ ನೀಡುವವನ ಆಧ್ಯಾತ್ಮಿಕ ಉನ್ನತಿಯಾಗುತ್ತದೆ.

ಕುಂಭ ದಾನ
ಅಕ್ಷಯ ತೃತೀಯಾ ಬೇಸಿಗೆಯ ಸಮಯದಲ್ಲಿ ಬರುವುದರಿಂದ ಬಾಯಾರಿದವರಿಗೆ ನೀರನ್ನು ಒದಗಿಸುವ ದೃಷ್ಟಿಯಿಂದ ಉದಕ ಕುಂಭ ದಾನಕ್ಕೆ ಅಂದರೆ ನೀರಿನಿಂದ ತುಂಬಿದ ಗಡಿಗೆ ದಾನಕ್ಕೆ ಹೆಚ್ಚಿನ ಮಹತ್ವವಿದೆ. ಇದರೊಂದಿಗೆ ಬೆಲ್ಲ ಹಣ್ಣುಗಳು ಅಥವಾ ಸಕ್ಕರೆಯನ್ನು ದಾನ ಮಾಡುವುದು ಮಂಗಳಕರವಾಗಿದೆ.

ಮೃತ್ತಿಕಾ ಪೂಜೆ ಮತ್ತು ಕೃಷಿ ಚಟುವಟಿಕೆ
ರೈತರು ಈ ದಿನ ಭೂಮಿ ತಾಯಿಯನ್ನು ಅಂದರೆ ಮೃತ್ತಿಕೆಯನ್ನು ಪೂಜಿಸುತ್ತಾರೆ. ಈ ಶುಭ ಮುಹೂರ್ತದಲ್ಲಿ ಬೀಜಗಳನ್ನು ಬಿತ್ತಲು ಪ್ರಾರಂಭಿಸಿದರೆ, ಸಮೃದ್ಧವಾದ ಫಸಲು ಬರುತ್ತದೆ ಎಂಬ ನಂಬಿಕೆಯಿದೆ. ಗಿಡಗಳನ್ನು ನೆಡಲು ಕೂಡ ಇದು ಉತ್ತಮ ದಿನವಾಗಿದೆ.

ಸ್ತ್ರೀಯರಿಗೆ ಮಹತ್ವ
ಮಹಿಳೆಯರು ಚೈತ್ರ ಮಾಸದಲ್ಲಿ ಪ್ರತಿಷ್ಠಾಪಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜಿಸುತ್ತಾರೆ. ಈ ಸಂದರ್ಭದಲ್ಲಿ ಅರಿಶಿನ ಕುಂಕುಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುತ್ತೈದೆಯರಿಗೆ ಅರಿಶಿನ ಕುಂಕುಮ ಮತ್ತು ಹಣ್ಣುಗಳನ್ನು ನೀಡುವುದು ರೂಢಿಯಲ್ಲಿದೆ.

ಉಪಸಂಹಾರ
ಹಿಂದೂ ಧರ್ಮವು ನಮಗೆ ಕಾಲಕಾಲಕ್ಕೆ ಧರ್ಮಾಚರಣೆಯ ಮಹತ್ವವನ್ನು ತಿಳಿಸಿಕೊಟ್ಟಿದೆ ಅಕ್ಷಯ ತೃತೀಯಾ ದಿನ ಚಿನ್ನ ಖರೀದಿಸುವ ದಿನವಾದರೂ, ಒಳ್ಳೆ ಕಾರ್ಯ ಮಾಡುವುದನ್ನು ಮರೆಯದಿರಿ ಜಾಗ, ಬಟ್ಟೆ ಇತರ ಮನೆ ಸಾಮಗ್ರಿಗಳನ್ನು ಖರೀದಿಸಿ ಸಂಭ್ರಮಿಸಿ. ಅಲ್ಲದೆ ಇದು ಆಧ್ಯಾತ್ಮಿಕ ಸಾಧನೆಯನ್ನು ಹೆಚ್ಚಿಸಿಕೊಳ್ಳುವ ಮತ್ತು ಸಮಾಜಕ್ಕೆ ದಾನ ಧರ್ಮ ಮಾಡುವ ಮೂಲಕ ಪುಣ್ಯವನ್ನು ಸಂಗ್ರಹಿಸುವ ಪವಿತ್ರ ದಿನವಾಗಿದೆ ಈ ದಿನದ ಮಹತ್ವವನ್ನು ಅರಿತು ಪ್ರತಿಯೊಬ್ಬ ಹಿಂದೂವು ಶಾಸ್ತ್ರೋಕ್ತವಾಗಿ ಹಬ್ಬವನ್ನು ಆಚರಿಸುವ ಮೂಲಕ ಧರ್ಮದ ಲಾಭವನ್ನು ಪಡೆಯೋಣ. ಶುಭಮಸ್ತು ನಿತ್ಯಮ್

ಕೃಷ್ಣ ವೇಣಿ ಪ್ರಸಾದ್ ಮುಳಿಯ

    LEAVE A REPLY

    Please enter your comment!
    Please enter your name here