






ಪುತ್ತೂರು: ಗೇರು ಹಣ್ಣಿನ ಕನಿಷ್ಠ ಸಂಸ್ಕರಣೆಯ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವು ಕರ್ನಾಟಕದ ಪುತ್ತೂರಿನಐಸಿಎಆರ್–ಗೇರುಸಂಶೋಧನಾ ನಿರ್ದೇಶನಾಲಯದಲ್ಲಿ 2026ರ ಏಪ್ರಿಲ್ 17ರಂದು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಕಾರ್ಯಕ್ರಮವು ಉಪಯೋಗಿಸದೆ ಬಿಸಾಡುವ ಗೇರು ಪೌಷ್ಟಿಕತೆಯುಳ್ಳ ಹಣ್ಣಿನಮೌಲ್ಯವರ್ಧನೆ ಹಾಗೂ ಕೊಯ್ಲಿನ ನಂತರದ ನಿರ್ವಹಣೆ ಕುರಿತು ಹಮ್ಮಿಕೊಂಡಿರುವ ತರಬೇತಿ ಕಾರ್ಯಕ್ರಮವಾಗಿತ್ತು.



ಕಾರ್ಯಕ್ರಮವನ್ನು ಸಂಸ್ಥೆಯ ನಿರ್ದೇಶಕರಾದ ಡಾ. ಜೆ. ದಿನಕರ ಅಡಿಗ ಅವರ ಸಮ್ಮುಖದಲ್ಲಿ ಹಾಗೂ ವಿಶೇಷ ಅತಿಥಿಗಳಾದ ಫುಡ್ ಚೈನ್ ಕ್ಯಾಂಪೇನ್ ಸಂಸ್ಥಾಪಕರಾದ ಯತೀಶ್ ತುಕರಾಮ್ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ವಿಜ್ಞಾನಿಗಳು, ಸಿಬ್ಬಂದಿ ಸದಸ್ಯರು ಹಾಗೂ ವಿವಿಧ ಪ್ರದೇಶಗಳಿಂದ ಆಗಮಿಸಿದ ತರಬೇತಿಗಾರರು ಉಪಸ್ಥಿತರಿದ್ದರು. ತಮ್ಮ ಭಾಷಣದಲ್ಲಿ ನಿರ್ದೇಶಕರು ಗೇರು ಹಣ್ಣಿನ ಬಳಕೆಯ ಮಹತ್ವವನ್ನು ಒತ್ತಿಹೇಳಿ, ಆರೋಗ್ಯಪರ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಅಭಿವೃದ್ಧಿಯಲ್ಲಿ ಇದರ ಅಪಾರ ಸಾಮರ್ಥ್ಯವಿದೆ ಎಂದು ತಿಳಿಸಿದರು. ಇದರಿಂದ ರೈತರ ಆದಾಯ ಹೆಚ್ಚುವುದರ ಜೊತೆಗೆ ಕೊಯ್ಲಿನ ನಂತರದ ನಷ್ಟವನ್ನು ಕಡಿಮೆ ಮಾಡಬಹುದು ಎಂದು ಹೇಳಿದರು. ಆಹಾರ ಭದ್ರತೆ ಕುರಿತು ಮಾತನಾಡಿದ ಶ್ರೀ ತುಕರಾಮ್ ಅವರು ಸಸ್ಥಿರ ಪದ್ಧತಿಗಳ ಮಹತ್ವವನ್ನು ಒತ್ತಿಹೇಳಿ, ಮೌಲ್ಯವರ್ಧನೆ ಮತ್ತು ಆರ್ಥಿಕ ಅಭಿವೃದ್ಧಿಗೆ ಉದ್ಯಮಶೀಲತಾ ಅವಕಾಶಗಳು ಹಾಗೂ ಇಂಕ್ಯುಬೇಷನ್ ಸೌಲಭ್ಯಗಳು ಪ್ರಮುಖ ಚಾಲಕಶಕ್ತಿಗಳಾಗಿವೆ ಎಂದು ತಿಳಿಸಿದರು.




ಈ ತರಬೇತಿ ಕಾರ್ಯಕ್ರಮವನ್ನು ಪ್ರಮುಖ ಸಂಸ್ಕರಣಾ ತಂತ್ರಜ್ಞಾನಗಳ ಕುರಿತು ವೈಜ್ಞಾನಿಕ ಅರಿವಿನೊಂದಿಗೆ ಕೈಗೊಳ್ಳುವ ಪ್ರಾಯೋಗಿಕ ತರಬೇತಿಯನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಯಿತು. ತರಬೇತಿಯಲ್ಲಿಗೇರು ಹಣ್ಣಿನ ಪೂರ್ವಸಂಸ್ಕರಣೆ, ರಸ ಹೊರತೆಗೆದು ಶುದ್ಧೀಕರಣ, ಕಾಜು ಹಣ್ಣಿನ ರಸದ ಪ್ಯಾಶ್ಚರೀಕರಣ ಹಾಗೂ ಪಲ್ಪ್ ತಯಾರಿಕೆ ಮತ್ತು ಸಂರಕ್ಷಣೆ ಸೇರಿದ್ದವು. ಭಾಗವಹಿಸಿದವರಿಗೆ ಗುಣಮಟ್ಟ, ಸ್ವಚ್ಛತೆ ಮತ್ತು ಪೌಷ್ಟಿಕ ಮೌಲ್ಯವನ್ನು ಕಾಪಾಡಿಕೊಂಡು ಕನಿಷ್ಠ ಸಂಸ್ಕರಣಾ ತಂತ್ರಗಳನ್ನು ಅನುಸರಿಸುವ ಬಗ್ಗೆ ಡಾ. ಜ್ಯೋತಿ ನಿಶಾದ್, ವಿಜ್ಞಾನಿ (ಆಹಾರ ತಂತ್ರಜ್ಞಾನ), ಪುತ್ತೂರಿನಐಸಿಎಆರ್–ಗೇರುಗೇರು ಸಂಶೋಧನಾ ನಿರ್ದೇಶನಾಲಯದಿಂದ ತರಬೇತಿ ನೀಡಲಾಯಿತು.

ತರಬೇತಿ ಅವಧಿಯಲ್ಲಿ ಗೇರುಹಣ್ಣಿನ ಗೃಹಮಟ್ಟದ ಬಳಕೆ ಹಾಗೂ ಅದನ್ನು ವಾಣಿಜ್ಯೀಕರಣದತ್ತ ಹೇಗೆ ವಿಸ್ತರಿಸಬಹುದು ಎಂಬುದರ ಕುರಿತು ಚರ್ಚಿಸಲಾಯಿತು. ತರಬೇತಿಗಾರರಿಗೆ ಉದ್ಯಮಶೀಲತಾ ಅವಕಾಶಗಳನ್ನು ಪರಿಚಯಿಸಿ, ಸಣ್ಣ ಮಟ್ಟದ ಸಂಸ್ಕರಣಾ ಘಟಕಗಳನ್ನು ಆರಂಭಿಸಲು ಹಾಗೂ ಗೇರು ಹಣ್ಣು ಮತ್ತು ಅದರ ಉಪ ಉತ್ಪನ್ನಗಳ ಸಸ್ಥಿರ ಬಳಕೆಯನ್ನು ಉತ್ತೇಜಿಸಲು ಪ್ರೇರೇಪಿಸಲಾಯಿತು.
ಪರಸ್ಪರ ಸಂವಾದ ಮತ್ತು ಪ್ರಾಯೋಗಿಕ ಪ್ರದರ್ಶನಗಳಲ್ಲಿ ಭಾಗವಹಿಸಿದವರಿಗೆ ಸಂಸ್ಕರಣಾ ವಿಧಾನಗಳ ಮೇಲೆ ಆತ್ಮವಿಶ್ವಾಸವನ್ನು ಬೆಳೆಸಲು ಹಾಗೂ ಸಂಗ್ರಹಣೆ ಮತ್ತು ಮೌಲ್ಯವರ್ಧನೆಗೆ ಸಂಬಂಧಿಸಿದ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು. ತರಬೇತಿಗಾರರು ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಸಂಶಯಗಳನ್ನು ನಿವಾರಿಸಿಕೊಂಡು ಹೊಸ ಉತ್ಪನ್ನ ಅಭಿವೃದ್ಧಿಯ ಕುರಿತು ನವೀನ ಆಲೋಚನೆಗಳನ್ನು ಕಲಿತರು.
ತರಬೇತಿಯ ಅಂತ್ಯದಲ್ಲಿ ಭಾಗವಹಿಸಿದವರು ತರಬೇತಿಯ ಸಮಗ್ರತೆ ಮತ್ತು ಅದರ ಪ್ರಾಯೋಗಿಕ ಮಹತ್ವವನ್ನು ಮೆಚ್ಚಿಕೊಂಡು ತಮ್ಮ ಸಕಾರಾತ್ಮಕ ಅಭಿಪ್ರಾಯಗಳನ್ನು ಹಂಚಿಕೊಂಡರು.ಈ ತರಬೇತಿಯಲ್ಲಿ 12 ತರಬೇತಿದಾರರು ಭಾಗವಹಿಸಿದ್ದರು.










