






ಪುತ್ತೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯಲ್ಲಿ ಕಡಬ ತಾಲೂಕಿನಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ವಲಯ ಮೇಲ್ವಿಚಾರಕರುಗಳಿಗೆ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಕಡಬ ಇದರ ವತಿಯಿಂದ ಬೀಳ್ಕೊಡುಗೆ ಏ.18ರಂದು ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನ ಸಭಾಂಗಣದಲ್ಲಿ ಜರಗಿತು. ವರ್ಗಾವಣೆಗೊಂಡ ಸವಣೂರು ವಲಯ ಮೇಲ್ವಿಚಾರಕರಾದ ವೀಣಾ ಕೆ, ಆಲಂಕಾರು ವಲಯ ಮೇಲ್ವಿಚಾರಕರಾದ ಸುಜಾತ ಕೆ, ನೆಲ್ಯಾಡಿ ವಲಯ ಮೇಲ್ವಿಚಾರಕರಾದ ಆನಂದ ಡಿ ಬಿ, ಗೋಳಿತೊಟ್ಟುವಲಯ ಮೇಲ್ವಿಚಾರಕರಾದ ಜಯಶ್ರೀ, ಲೆಕ್ಕ ಪರಿಶೋಧಕಿ ಶೀಲಾವತಿರವರನ್ನು ಕಡಬ ಜನ ಜಾಗೃತಿ ವೇದಿಕೆ ವತಿಯಿಂದ ಅಭಿನಂದಿಸಿ ಬೀಳ್ಕೊಡಲಾಯಿತು. ವೇದಿಕೆ ಅಧ್ಯಕ್ಷ ಮಹೇಶ್ ಕೆ ಸವಣೂರು, ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯ ಶಿವಪ್ರಸಾದ್ ರೈ ಮೈಲೇರಿ, ಕಡಬ ವಲಯ ಮೇಲ್ವಿಚಾರಕ ವಿಜೇಶ್ ಜೈನ್, ಬಿಳಿನೆಲೆ ವಲಯ ಮೇಲ್ವಿಚಾರಕ ರವಿ ಪ್ರಸಾದ್ ಕೆ, ಕಡಬ ಯೋಜನಾ ಕಛೇರಿಯ ಸಿಬ್ಬಂದಿಗಳಾದ ಸುಜಾತ, ಸಂತೋಷ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.












