






ಪುತ್ತೂರು: ಸವಣೂರು ಗ್ರಾಮದ ಆರೇಲ್ಪಡಿ ಇರ್ವೆರು ಉಳ್ಳಾಕು, ಕೆಡೆಂಜೋಡಿತ್ತಾಯಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಎ. 22 ಮತ್ತು 23 ರಂದು ನೇಮೋತ್ಸವ ನಡೆಯಲಿದೆ. ನೇಮೋತ್ಸವದ ಹಿನ್ನಲೆಯಲ್ಲಿ ಎ.21ರಂದು ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ರಂಗಪೂಜೆ, ಎ.22ರಂದು ಬೆಳಿಗ್ಗೆ 9ಕ್ಕೆ ದೈವಸ್ಥಾನದಲ್ಲಿ ಗಣಹೋಮ ನಡೆಯಲಿದೆ.



ಗಾಲಿ ಜನಾರ್ದನ ರೆಡ್ಡಿ ಅವರ ಸೇವಾರ್ಥ ಹರಕೆ ನೇಮೋತ್ಸವ: ಎ.22ರಂದು ಸಂಜೆ 6 ಕ್ಕೆ ಭಂಡಾರ ತೆಗೆಯಲಾಗುವುದು. ರಾತ್ರಿ 7ರಿಂದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಸೇವಾರ್ಥವಾಗಿ ಕಡೆಂಜೋಡಿತ್ತಾಯ ದೈವದ ಹರಕೆ ನೇಮೋತ್ಸವ ನಡೆಯಲಿದೆ.



ಸಮುದಾಯ ಭವನ ಉದ್ಘಾಟನೆ: ಎ. 22 ರಂದು ಸಂಜೆ 6.30ಕ್ಕೆ ಸಮುದಾಯ ಭವನದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮಾಜಿ ಸಚಿವ, ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಉದ್ಘಾಟನೆಯನ್ನು ನೇರವೇರಿಸಲಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಕಾಡಿ, ಸಾಮಾಜಿಕ ಕಾರ್ಯಕರ್ತೆ ಲಕ್ಷ್ಮೀ ಜನಾರ್ದನ ರೆಡ್ಡಿ, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ, ಮುಗೋಡಿ ಕನ್ಸ್ಟ್ರಕ್ಷನ್ ಸುಧಾಕರ್ ಶೆಟ್ಟಿ, ನವೀನ್ ಕುಮಾರ್ ಶೆಟ್ಟಿ ಮುಗೇರುಗುತ್ತು, ರಾಜೇಂದ್ರ ರೈ ಮಿಜಾರುಗುತ್ತು, ಶ್ರೀಕ್ಷೇ.ಧ. ಗ್ರಾ.ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕರವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಎ.23 ಉಳ್ಳಾಕುಲು, ಕೆಡೆಂಜೋಡಿತ್ತಾಯ ನೇಮೋತ್ಸವ:
ಎ.23ರಂದು ಬೆಳಿಗ್ಗೆ 6 ಕ್ಕೆ ಉಳ್ಳಾಕು-ನೇಮವಾಗಿ ಸಿರಿಮುಡಿ ಗಂಧಪ್ರಸಾದ ವಿತರಣೆ ನಡೆಯಲಿದೆ. ಬೆಳಿಗ್ಗೆ 9ರಿಂದ ಕೆಡೆಂಜೋಡಿತ್ತಾಯ ನೇಮವಾಗಿ ಸಿರಿಮುಡಿ ಗಂಧಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿದೆ. ಸಂಜೆ 4ಕ್ಕೆ ಇತರ ದೈವಗಳ ನೇಮ ಮತ್ತು ಗಂಧ ಪ್ರಸಾದ ವಿತರಣೆ ನಡೆಯಲಿದೆ.
ಎ.24 ಮಾಂತೂರಿನಲ್ಲಿ ಶಿರಾಡಿ ದೈವದ ನೇಮೋತ್ಸವ: ಎ.24ರಂದು ರಾತ್ರಿ 7ಕ್ಕೆ ಮಾಂತೂರಿನಲ್ಲಿ ಶಿರಾಡಿ ದೈವದ ನೇಮೋತ್ಸವ ನಡೆದು ಸರ್ವೆಯಲ್ಲಿ ಮಾರಿ ಬಿಡುವ ಕಾರ್ಯಕ್ರಮ ಜರಗಲಿದೆ ಎಂದು ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಸುಮನ ಮುರುಳಿಮೋಹನ್ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ ಕಿನಾರ, ಅಧ್ಯಕ್ಷ ದಿನೇಶ್ ಮೆದು, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಪಟ್ಟಿ ಹಾಗೂ ಸದಸ್ಯರು, ಊರ ಭಕ್ತಾಧಿಗಳು ಮತ್ತು ಶ್ರೀ ಉಳ್ಳಾಕುಲು ಕೆಡೆಂಜೋಡಿತ್ತಾಯಿ ಸೇವಾ ಟ್ರಸ್ಟ್ನ ಅಧ್ಯಕ್ಷರು ಮತ್ತು ಸದಸ್ಯರು ತಿಳಿಸಿದ್ದಾರೆ.









