ಅಕ್ಷಯ ಕಾಲೇಜಿನಲ್ಲಿ ‘ಪ್ರಿನ್ಸ್ ಆಂಡ್ ಪ್ರಿನ್ಸೆಸ್’ ಗ್ರ್ಯಾಂಡ್ ಫಿನಾಲೆ

0

ಪ್ರಿನ್ಸ್ ಆಗಿ ಆಯಂಶ್ ಎನ್, ಧನ್ವಿತ್ ಡಿ.ಪಿ, ಅಹಿಲ್ ಹುಸೈನ್
ಪ್ರಿನ್ಸೆಸ್ ಆಗಿ ಮನಸ್ವಿ, ಪ್ರಶ್ವಿ ಎಸ್, ವಿಹಾನಿ ಜಕೆ

ಪುತ್ತೂರು:ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ಷಯ ಕಾಲೇಜು ಇದರ ಫ್ಯಾಷನ್ ಡಿಸೈನ್ ವಿಭಾಗ ಹಾಗೂ ಸಾಂಸ್ಕೃತಿಕ ಮತ್ತು ಲಲಿತಕಲಾ ಸಂಘದ ವತಿಯಿಂದ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ “ಪ್ರಿನ್ಸ್ ಆಂಡ್ ಪ್ರಿನ್ಸೆಸ್” ಫ್ಯಾಶನ್ ಶೋ ಸ್ಪರ್ಧೆ-ಸೀಸನ್ 2ರ ಗ್ರ್ಯಾಂಡ್ ಫಿನಾಲೆ ಏ.20 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಚಿತ್ರ: ನವೀನ್ ರೈ ಪಂಜಳ


ಸಮಾರೋಪ:
ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಜಯಂತ್ ನಡುಬೈಲು ಮಾತನಾಡಿ, ಇಂದು ಮಕ್ಕಳ ನಡೆಯು ಕಾಲೇಜಿನಲ್ಲಿ ಧನಾತ್ಮಕ ವಾತಾವರಣವನ್ನು ಸೃಷ್ಟಿ ಮಾಡಿದೆ. ಅಷ್ಟೇ ಅಲ್ಲ, ಅಕ್ಷಯ ಪದವಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಸಾಧನೆಯು ಸಾಗರದ ಆಚೆಗೂ ವಿಸ್ತರಿಸಿಕೊಂಡಿದೆ. ಅದು ಶಿಕ್ಷಣದ ಜೊತೆಗೆ ಇಂತಹ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ. ಅದನ್ನು ನಮ್ಮ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಯಶಸ್ವಿಯಾಗಿಸಿದ್ದಾರೆ ಎಂದರು.


ಮುಖ್ಯ ಅತಿಥಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇದರ ಸಹನಿರ್ದೇಶಕರಾಗಿರುವ ಆನಂದ ಪಿ.ರವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಅಕ್ಷಯ ಎಂಬ ಶಿಕ್ಷಣ ಸಂಸ್ಥೆ ಅದೆಷ್ಟೋ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ. ಹಾಗಾಗಿ ಈ ವಿದ್ಯಾಸಂಸ್ಥೆಗೆ ನನ್ನ ಸಹಕಾರ ಎಂದಿಗೂ ಇದೆ ಎಂದರು. ಮಂಗಳೂರು ಮರ್ಸಿ ಬ್ಯೂಟಿ ಅಕಾಡೆಮಿ ಇದರ ಸಂಸ್ಥಾಪಕಿ ಶ್ರೀಮತಿ ಮರ್ಸಿ ವೀಣಾ ಡಿಸೋಜ ಮಾತನಾಡಿ, ಸ್ಪರ್ಧಿಗಳು ವೇದಿಕೆಗಳಿಗೆ ಹತ್ತಿದ ಕ್ಷಣವೇ ನೀವು ಗೆದ್ದಂತೆ. ಅದರ ಬಳಿಕ ಪ್ರಯತ್ನಗಳು ನಿಮ್ಮದಾಗಿಸಿಕೊಂಡರೆ ಬದುಕು ಹಸನಾಗುವುದರಲ್ಲಿ ಸಂಶಯವಿಲ್ಲ ಎಂದರು. ಪುತ್ತೂರು ರೆಡ್ ಬುಟಿಕ್ & ಸ್ಟೈಲ್ ಸ್ಟುಡಿಯೋ ಮಾಲಕಿ ಶ್ರೀಮತಿ ಮೋನಿಷ ಕಂಪ ಶುಭ ಹಾರೈಸಿದರು.


ಅಕ್ಷಯ ಪದವಿ ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಕೆ.ಪಕ್ಕಳ ಇವರು ಫೆಸೆರಾ ಅಸೋಸಿಯೇಶನ್ ವತಿಯಿಂದ ಈಗಾಗಲೇ ಅನೇಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದ್ದು, ಇಲ್ಲಿನ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಕೂಡ ಹೆಸರು ಮಾಡಿ ಉದ್ಯೋಗ ಪಡೆದಿರುತ್ತಾರೆ. ಹಾಗಾಗಿ ಇಲ್ಲಿನ ನಿಮ್ಮ ಶ್ರಮಕ್ಕೆ ಶುಭವಾಗಲಿ ಎಂದು ಹಾರೈಸಿದರು. ಅಕ್ಷಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ ಮಾತನಾಡಿ, ಪಿಯುಸಿ ಮತ್ತು ಪದವಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಸಾಧನೆಗಳನ್ನು ತಿಳಿಸುತ್ತಾ ನಮ್ಮ ಕಾಲೇಜಿಗೆ ನಿಮಗೆ ಎಂದಿಗೂ ಸ್ವಾಗತ ಎನ್ನುತ್ತಾ ಶುಭ ಹಾರೈಸಿದರು.


ಕಾಲೇಜಿನ ಆಡಳಿತ ಅಧಿಕಾರಿ ಅರ್ಪಿತ್. ಟಿ.ಎ ಮಾತನಾಡಿ, ಫ್ಯಾಶನ್ ಡಿಸೈನ್ ವಿದ್ಯಾರ್ಥಿಗಳು ಕೇವಲ ಯೂನಿವರ್ಸಿಟಿ ರ‍್ಯಾಂಕ್ ಮಾತ್ರವಲ್ಲದೆ ಮಿ.ಕರ್ನಾಟಕ, ಕೋಸ್ಟಲ್ ಕರ್ನಾಟಕದಂತಹ ಪ್ರಶಸ್ತಿ ಗೆದ್ದು ಹೆಮ್ಮೆ ತಂದಿರುವುದನ್ನು ತಿಳಿಸಿ ಕೋರ್ಸ್‌ಗಳ ಕುರಿತಾಗಿ ಮಾಹಿತಿ ನೀಡಿ ಈ ಕಾರ್ಯಕ್ರಮದ ಯಶಸ್ಸು ನಿಮ್ಮದಾಗಲಿ ಎಂದು ಹಾರೈಸಿದರು.
ಶೈಕ್ಷಣಿಕ ಮಾರ್ಗದರ್ಶಕರಾದ ಅಭಿಲಾಷ್ ಕ್ಷತ್ರಿಯ ಇವರು, ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಮಾನವನ ಯೋಚನೆಗಳು ಬೆಳೆಯಬೇಕು. ಅದಕ್ಕೆ ನಮ್ಮ ಕಾಲೇಜು ಎಲ್ಲಾ ತರದಲ್ಲೂ ಸಿದ್ಧವಾಗಿದೆ ಎಂದರು.


ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು ಹಾಗೂ ಕಾರ್ಯಕ್ರಮದ ಮತ್ತೋರ್ವ ಪ್ರಾಯೋಜಕರಾದ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಮಾಲಕರಾದ ಬಲರಾಮ ಆಚಾರ್ಯ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿನಿಯರಾದ ರಮ್ಯಾ ಮತ್ತು ಮೋಕ್ಷ ಪ್ರಾರ್ಥಿಸಿದರು. ಉಪನ್ಯಾಸಕಿ ಶ್ರೀಮತಿ ವೀಣಾ ಪ್ರಸ್ತಾವನೆಗೈದರು. ಶ್ರೀಮತಿ ಪ್ರಭಾವತಿ ಮತ್ತು ಶ್ರೀಮತಿ ರಶ್ಮಿ ಸ್ವಾಗತಿಸಿ, ಕು.ಶೈಲಶ್ರೀ ಮತ್ತು ಶ್ರೀಮತಿ ಅನುಷಾ ಪ್ರವೀಣ್ ಮತ್ತು ಶ್ರೀಮತಿ ರಶ್ಮಿತಾ.ಎಸ್ ಅತಿಥಿಗಳ ಪರಿಚಯ ಮಾಡಿದರು. ಕು.ಧನ್ಯಶ್ರೀ ಮತ್ತು ವಿದ್ಯಾರ್ಥಿನಿ ಜೆನ್ನಿಫರ್ ಡಿಸೋಜ ವಂದಿಸಿ. ವಿದ್ಯಾರ್ಥಿನಿ ರಝೀನ ಬಾನು ಕಾರ್ಯಕ್ರಮ ನಿರೂಪಿಸಿದರು ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣ ಪತ್ರವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ವಿಜೇತರು..
5 ರಿಂದ 9 ವಿಭಾಗ:

ಪ್ರಿನ್ಸ್-ಆಯಂಶ್ ಎನ್(ವಿನ್ನರ್), ಯಜ್ವಯ್ ಜಿ(ದ್ವಿ), ತನ್ಮಯ್ ಎಸ್.ಪಕ್ಕಳ(ತೃ), ಪ್ರಿನ್ಸೆಸ್-ಮನಸ್ವಿ(ವಿನ್ನರ್), ಸಮೃದ್ಧಿ ಎಸ್(ದ್ವಿ), ರಿಧೀಶಾ ಎಸ್(ತೃ)
10 ರಿಂದ 14 ವಿಭಾಗ:
ಪ್ರಿನ್ಸ್:ಧನ್ವಿತ್ ಡಿ.ಪಿ(ವಿನ್ನರ್), ಅಧೀಶ್ ಎಲ್.ಎಸ್(ದ್ವಿ), ಮೌರ್ಯ(ತೃ), ಪ್ರಿನ್ಸೆಸ್:ಪ್ರಶ್ವಿ ಎಸ್(ವಿನ್ನರ್), ಅಮೃತ ಜೆ.ಎನ್(ದ್ವಿ), ಶೈವಿ ಮರಕ್ಕಡ(ತೃ)
15 ರಿಂದ 18 ವಿಭಾಗ:
ಪ್ರಿನ್ಸ್:ಅಹಿಲ್ ಹುಸೈನ್(ವಿನ್ನರ್), ಹಬೀಬ್ ಜರಾರ್(ದ್ವಿ), ಸ್ಲಾಹುದ್ದಿನ್(ತೃ), ಪ್ರಿನ್ಸೆಸ್:ವಿಹಾನಿ ಜಕೆ(ವಿನ್ನರ್), ಮಿಸ್ಟ ಆನ್ನ ಡಿ’ಸೋಜ(ದ್ವಿ), ಮೌಲ್ಯ ಪೂಜಾರಿ(ತೃ)

ಉದ್ಘಾಟನೆ..
ಶಂಕರ್ ಗ್ರೂಪ್ ಪುತ್ತೂರು ಇದರ ವ್ಯವಸ್ಥಾಪಕ ನಿರ್ದೇಶಕ ಸತ್ಯ ಶಂಕರ್ ಭಟ್‌ರವರು ಕಾರ್ಯಕ್ರಮದ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸ್ಪರ್ಧಾಳುಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ನೀಡಿರುವ ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು, ಸತತ ಪ್ರಯತ್ನಗಳ ಮೂಲಕ ಶ್ರಮಿಸಿದರೆ ಗೆಲುವು ಶತಸಿದ್ಧ ಎಂದು ಹೇಳಿ ಕಾಲೇಜಿನ ಪ್ರಗತಿ ಬಗ್ಗೆ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಕಲಾವತಿ ಜಯಂತ್ ಮಾತನಾಡಿ,ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಛಲ ಎಂಬುದು ಅತ್ಯಗತ್ಯ. ಮಾಡುವ ಕೆಲಸದಲ್ಲಿ ಪ್ರೀತಿ ಮತ್ತು ನಿಖರ ಗುರಿ ಅತ್ಯಗತ್ಯ ಎಂದು ಹೇಳಿದರು. ಮುಖ್ಯ ಅತಿಥಿ ಅಂತರಾಷ್ಟ್ರೀಯ ರೂಪದರ್ಶಿ ಶ್ರೀಮತಿ ತಷ್ಮಾ ಚೇತನ್‌ರವರು ಮಶತನಾಡಿ, ಪದವಿ ಮತ್ತು ಫ್ಯಾಶನ್ ಸಹಸಂಬಂಧ ಹೊಂದಿದ್ದು ಇದು ಖಂಡಿತ ಮುಂದಿನ ದಿನಗಳಲ್ಲಿ ಉತ್ತಮ ಬದುಕು ಕೊಡುತ್ತದೆ. ಅದಕ್ಕೆ ನಾನೇ ನಿದರ್ಶನ. ನಿಮ್ಮೆಲ್ಲರ ಬದುಕು ಹಸನಾಗಲಿ ಎಂದು ಶುಭ ಹಾರೈಸಿದರು.

LEAVE A REPLY

Please enter your comment!
Please enter your name here