







ಕಾಣಿಯೂರು – ಪ್ರಗತಿ ವಿದ್ಯಾ ಸಂಸ್ಥೆಯ ಅಂಗಮಾಧ್ಯಮ ವಿಭಾಗದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶ್ರಾವ್ಯ ರೈ 617 ಅಂಕಗಳೊಂದಿಗೆ ತರಗತಿಗೆ ಪ್ರಥಮ, ಕೆ ಪ್ರಣಮ್ಯ ರೈ 612 ತರಗತಿಗೆ ದ್ವಿತೀಯ ಸ್ಥಾನ, ಪೃಥ್ವಿ ಎಂ 610 ಅಂಕಗಳೊಂದಿಗೆ ತರಗತಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.


ಪ್ರಗತಿ ಕನ್ನಡ ಮಾಧ್ಯಮದಲ್ಲಿ ನಿರೀಕ್ಷಾ 608 ಅಂಕಗಳೊಂದಿಗೆ ತರಗತಿಗೆ ಪ್ರಥಮ, ರಿತಿಕಾ ಟಿ ಕೆ 597 ಅಂಕಗಳೊಂದಿಗೆ ದ್ವಿತೀಯ ಸ್ಥಾನ, ತ್ರಿಷಾ ಹೆಚ್ ವಿ 587 ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.



ಆಂಗ್ಲ ಮಾಧ್ಯಮದಲ್ಲಿ ಒಟ್ಟು 48 ವಿದ್ಯಾರ್ಥಿಗಳಲ್ಲಿ 27 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 21 ಪ್ರಥಮ ದರ್ಜೆ ಯಲ್ಲಿ ಉತ್ತೀರ್ಣರಾಗಿರುತ್ತಾರೆ. ಕನ್ನಡ ಮಾಧ್ಯಮದಲ್ಲಿ 23 ವಿದ್ಯಾರ್ಥಿಗಳಲ್ಲಿ 8 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 13 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಮತ್ತು 2 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಮತ್ತು ಸಹಕರಿಸಿದ ಶಿಕ್ಷಕ ವೃಂದದವರನ್ನು ಮಾನ್ಯ ಸಂಚಾಲಕರು ಮತ್ತು ಶಾಲಾಡಳಿತ ಮಂಡಳಿಯವರು ಅಭಿನಂದಿಸಿದರು.










