






ಪುತ್ತೂರು: ಇಂಡಿಯನ್ ಸ್ಕೂಲ್ ಉಪ್ಪಿನಂಗಡಿ ಶಾಲೆಯು 2025–26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸತತ 9ನೇ ಬಾರಿಗೆ ಎಸ್.ಎಸ್.ಎಲ್.ಸಿ ಶೇ.100 ಫಲಿತಾಂಶವನ್ನು ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 28 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 1 ವಿದ್ಯಾರ್ಥಿ
ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿರುತ್ತಾರೆ.


ಫಾತಿಮಾ ಸಪಾನಾ 592 (94.72%) ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ತನೀರ್ಪಂತ ಬೆಳ್ಳಾರೆ ಮಹಮ್ಮದ್ ಮತ್ತು ಸಕೀನ ದಂಪತಿಗಳ ಪುತ್ರಿ.
ಸುಹಾ 589 (94.24%) ಅಂಕಗಳೊಂದಿಗೆ ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ ಇವರು ಕೊಡಿಂಬಾಡಿ ಪುತ್ತೂರು ಕೆ. ಅಬ್ಬು ಮತ್ತು ಫಾತಿಮತ್ ಜೋಹಾರ ದಂಪತಿಗಳ ಪುತ್ರಿ.
ಮಹಮ್ಮದ್ ಸಮ್ಮಾಜ್ 588 (94.08%) ಅಂಕಗಳೊಂದಿಗೆ ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ. ಇವರು ಮುಕ್ವೆ ನರಿಮೊಗರು ಅಬ್ದುಲ್ ರಶೀದ್ ಹಾಗೂ ಶಾಹಿದ ದಂಪತಿಗಳ ಪುತ್ರ. ಫಾತಿಮಾ ಜುಲೈಫಾ (580), ಮಹಮ್ಮದ್ ಸಾಹಿಲ್ ಡಿ (573), ಜುಲೈಕಾ ಹಿಬಾ (568), ಆಯಿಷ ಮುನಾ (553), ಮಹಮ್ಮದ್ ಸುಹಾನ್ (550), ಮಹಮ್ಮದ್ ಸುಫಿಯನ್ (541) ಹಾಗೂ ವಫಾ ಪರ್ವೀನ್ (539) ಇವರೆಲ್ಲರೂ ವಿಶಿಷ್ಟ ಶ್ರೇಣಿಯಲ್ಲಿ ತೆರ್ಗಡೆ ಹೊಂದಿರುತ್ತಾರೆ.



ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ, ವೃಂದದವರು ಅಭಿನಂದನೆಗಳನ್ನು ತಿಳಿಸಿದ್ದಾರೆ.










