ಪ್ರಗತಿ ಸ್ಟಡಿ ಸೆಂಟರ್‌ಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.97.14 ಫಲಿತಾಂಶ

0

“ಪರೀಕ್ಷೆಯ ಭಯದಿಂದ ತತ್ತರಿಸುತ್ತಿರುವ ವಿದ್ಯಾರ್ಥಿಗಳು ನೀಡಿದ ಸಾಧನೆ ಇದು -ಹೇಮಲತಾ ಗೋಕುಲ್‌ನಾಥ್”


ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಿಂದ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ 97.14 ಫಲಿತಾಂಶ ದಾಖಲಾಗಿರುತ್ತದೆ. ಖಾಸಗಿಯಾಗಿ ಹಾಗೂ ಟ್ಯೂಷನ್ ತರಗತಿಗಳಲ್ಲಿ ದಾಖಲಾಗಿರುವ ಒಟ್ಟು 6 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 10 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, 20 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ .

ಸತತ 19 ವರ್ಷಗಳಿಂದ ಮಿಷನ್ 100 ತರಬೇತಿಯು ಪರೀಕ್ಷೆಯ ಭಯದಿಂದ ತತ್ತರಿಸುತ್ತಿರುವ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ. ಈ ವಿಶೇಷ ಪರೀಕ್ಷಾ ತಯಾರಿಯ ಮೂಲಕ ಎಸ್.ಎಸ್.ಎಲ್.ಸಿ ಖಾಸಗಿ ವಿದ್ಯಾರ್ಥಿಗಳು ಹಾಗೂ ಟ್ಯೂಷನ್ ವಿದ್ಯಾರ್ಥಿಗಳಲ್ಲಿ ಅತ್ಯುತ್ತಮ ಫಲಿತಾಂಶಕ್ಕೆ ಕಾರಣವಾದ ಹೆಗ್ಗಳಿಕೆ ಪ್ರಗತಿ ಸಂಸ್ಥೆಯಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಕೆ. ಹೇಮಲತಾ ಗೋಕುಲ್‌ನಾಥ್ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here