ಐತಿಹಾಸಿಕ ಫಲಿತಾಂಶ ದಾಖಲಿಸಿದ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ : ಎಸ್.ಎಸ್.ಎಲ್.ಸಿಯಲ್ಲಿ 12 ಬಾರಿ 100 % : ಅಭಿನಂದನೆ ಸಲ್ಲಿಸಿದ ಶಾಲಾ ಸಂಚಾಲಕ ಕೆ.ಎಂ. ಮುಸ್ತಫ

0

ಪುತ್ತೂರು: ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಎಸ್ ಎಸ್ ಎಲ್ ಸಿ ಯಲ್ಲಿ 12 ಬಾರಿ 100% ಫಲಿತಾಂಶ ದಾಖಲಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.

ಅನ್ಸಾರಿಯಾ ಎಜುಕೇಶನ್ ಟ್ರಸ್ಟ್ ನ ಅಧೀನದಲ್ಲಿರುವ ಸುಳ್ಯ ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಈವರೆಗಿನ 18 ಬ್ಯಾಚ್ ಗಳಲ್ಲಿ 12 ಬ್ಯಾಚ್ ಗಳು ಶೇಕಡಾ 100 ಫಲಿತಾಂಶ ದಾಖಲಿಸಿಕೊಂಡು ಬಂದಿರುತ್ತದೆ. ಈ ಬಾರಿಯ ಎಸ್ ಎಸ್ ಎಲ್ ಸಿ ಫಲಿತಾಂಶ ವಿಶಿಷ್ಟ ರೀತಿಯಲ್ಲಿ ಗಮನ ಸೆಳೆದಿದೆ.

ಆಸಿಯ ಸನ( 607),ರಿಝ ಟಿ. ಎಸ್ (603) ಅಂಕದೊಂದಿಗೆ ಆಗ್ರ ಸ್ಥಾನಿಯಾದರೆ ಪರೀಕ್ಷೆಗೆ ಹಾಜರಾದ 24 ವಿದ್ಯಾರ್ಥಿ ಗಳಲ್ಲಿ 10 ಉನ್ನತ ಶ್ರೇಣಿ, 14 ಪ್ರಥಮ ಶ್ರೇಣಿ ಯಲ್ಲಿ ತೇರ್ಗಡೆ ಗೊಂಡಿರುತ್ತಾರೆ.
ಯಾವುದೇ ದ್ವಿತೀಯ ಶ್ರೇಣಿ ಮತ್ತು ಜಸ್ಟ್ ಪಾಸ್ ಇಲ್ಲದೇ ಗ್ರೀನ್ ವ್ಯೂ ನ ಕೀರ್ತಿ ಪತಾಕೆಯನ್ನು ಹಾರಿಸಿರುತ್ತಾರೆ. ಇದಕ್ಕೆ ಶ್ರಮಿಸಿದ ಶಿಕ್ಷಕ ವೃಂದ, ಪೋಷಕರುಗಳು, ನಿರಂತರ ನಿಗಾ ವಹಿಸಿದ ಆಡಳಿತ ಮಂಡಳಿಯ ಎಲ್ಲಾ ಸದಸ್ಯರನ್ನು ಶಾಲಾ ಸಂಚಾಲಕ, ಸುಳ್ಯ ಸೂಡ ಅಧ್ಯಕ್ಷ ಕೆ.ಎಂ. ಮುಸ್ತಫ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here