ಎಸ್‌ಎಸ್‌ಎಲ್‌ಸಿ: ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ ಕಾಲೇಜಿಗೆ ಶೇ.100 ಫಲಿತಾಂಶ

0

ನೆಲ್ಯಾಡಿ: ಕಳೆದ ಮಾರ್ಚ್/ಎಪ್ರಿಲ್ ತಿಂಗಳಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ ನೆಲ್ಯಾಡಿ ಜ್ಞಾನೋದಯ ಬೆಥನಿ ಆಂಗ್ಲಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ.


ಸಂಸ್ಥೆಯಿಂದ ಪರೀಕ್ಷೆಗೆ ಹಾಜರಾದ 26 ಬಾಲಕರು ಹಾಗೂ 36 ಬಾಲಕಿಯರ ಸಹಿತ ಎಲ್ಲಾ 62 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶಾಲೆಯು ಹಲವಾರು ವರ್ಷಗಳಿಂದ ಸತತವಾಗಿ ಶೇ. 100 ಫಲಿತಾಂಶ ಪಡೆಯುತ್ತಿದೆ. 4 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರುತ್ತಾರೆ. 25 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 35 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಅಗ್ನೆಸ್ ಮರಿಯ 616, ಶ್ರೇಯ ಕೆ. 616, ಅಲೀನ ಬಿಜು ಜೋನ್ 604, ಕ್ಷಿತಿ ಜೈನ್ 601, ನಿಹಾರಿಕ 598, ಸಾಕ್ಷಿ 596, ಶ್ರೀವಿದ್ಯಾ ಜಿ. 588, ಜೆಸ್ಮಾ ಮಾರ್ಟಿನ್ 585, ಪ್ರೀತಮ್ 583, ಆಶಿಕ ಕೆ.ಎನ್. 583, ಆವನಿ ಹೆಚ್. 569, ಪ್ರಜೋಷ್ ಕೆ.ಜೆ. 567, ಏಂಜಲಿನ್ ಆನ್ ಜೋಸೆಫ್ 558, ಜೈನಾಬ್ ಲುಬ್ನ 549, ಸಮನ್ವಿತ್ ಜೆ.ಹೆಚ್. 548, ಸುಧೀಕ್ಷಾ ಎ.ಯು. 547, ಫಾತಿಮತ್ ಮಿಸ್ವಾನ 545, ದೃತಿ ಎಲ್. 543, ಮಾನಸ 542, ಅಂಜನಾ ಪಿ.ಎಸ್. 537, ಇಸಾ ಮರಿಯ 536, ಅಫಿಸಾ 536, ಆಲ್ಬಿನ್ ಎಂ.ಬಿ. 533, ಕೆವಿನ್ ಜೊ.ಕೆ.ರಂಜನ್ 532, ಸಾನ್ವಿಕ ಎಸ್.ಎ. 531 ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ.

LEAVE A REPLY

Please enter your comment!
Please enter your name here