






ಹಿರೇಬಂಡಾಡಿ: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆಗೆ ಶೇ.100 ತೇರ್ಗಡೆ ಫಲಿತಾಂಶ ಬಂದಿದೆ. ಈ ಮೂಲಕ ಶಾಲೆ ಸತತ ಆರನೇ ಬಾರಿಗೆ ಶೇ.100 ಫಲಿತಾಂಶ ದಾಖಲಿಸಿದೆ.
ಈ ಬಾರಿ ಪರೀಕ್ಷೆಗೆ ಹಾಜರಾದ 49 ವಿದ್ಯಾರ್ಥಿಗಳೂ ತೇರ್ಗಡೆಗೊಂಡು ಶೇ. 100 ಫಲಿತಾಂಶ ಬಂದಿದೆ. 11 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 30 ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ ಹಾಗೂ ಎಂಟು ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿ ತೇರ್ಗಡೆ ಹೊಂದಿರುತ್ತಾರೆ.
ನಿಧಿ 592 ಅಂಕಗಳಿಸಿ ಪ್ರಥಮ ಸ್ಥಾನ, ಯಕ್ಷಿತಾ ಜೆ.ಎಚ್. 572 ಅಂಕಗಳಿಸಿ ದ್ವಿತೀಯ ಸ್ಥಾನ ಹಾಗೂ ಫಾತಿಮತ್ ರಿಫಾನ 562 ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ. ಫಿದಾ ಫಾತಿಮಾ 559, ತನುಶ್ರೀ 554, ಸಂಪತ್ ಕುಮಾರ್ ಜಿ.ಎಚ್.551, ಅಂಜಲಿ ಎ. 550, ಲಿಖಿತ ಪಿ.549, ಮೌಲ್ಯಶ್ರೀ 545, ನಿಶಾ 545, ಪ್ರೀತಂ 539 ಅಂಕಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.











