ಸವಣೂರು : ಆರೇಲ್ತಡಿ ದೈವಸ್ಥಾನದಲ್ಲಿ ನೇಮೋತ್ಸವ ಸಂಪನ್ನ

0


ಪುತ್ತೂರು: ಸವಣೂರು ಗ್ರಾಮದ ಆರೇಲ್ತಡಿಯಲ್ಲಿ ಏ. 22 ರಂದು ಆರಂಭಗೊಂಡ ನೇಮೋತ್ಸವ ಏ.24 ರತನಕ ನಡೆಯಿತು.

ಏ.22ರಂದು ರಾತ್ರಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಹರಕೆಯ ಕೆಡೆಂಜೋಡಿತ್ತಾಯ ದೈವದ ನೇಮ ನಡೆಯಿತು. ಏ. 23 ರಂದು ದೈವಸ್ಥಾನದ ವಾರ್ಷಿಕ ನೇಮೋತ್ಸವ ದಲ್ಲಿ ಉಳ್ಳಾಕುಲು, ಕೆಡೆಂಜೋಡಿತ್ತಾಯ ಹಾಗೂ ಪರಿವಾರ ದೈವಗಳ ನೇಮೋತ್ಸವ ಹಾಗೂ ಏ.24ರಂದು ಸಂಜೆ ಮುಗೇರುಗುತ್ತಿನಿಂದ ಗುಳಿಗ ಮಾರಿ ಹೊರಟು ಮಾಂತೂರಿನಲ್ಲಿ ಶಿರಾಡಿ ದೈವದ ನೇಮವಾಗಿ ಸರ್ವೆಯಲ್ಲಿ ಮಾರಿ ಬಿಡುವ ಕಾರ್‍ಯಕ್ರಮ ನಡೆಯುವುದರೊಂದಿಗೆ ನೇಮೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಸಂಪನ್ನಗೊಂಡಿತು.

ಮಾಜಿ ಸಚಿವ ಹಾಗೂ ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಕು| ಭಾಗೀರಥಿ ಮುರುಳ್ಯ, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಸಹಕಾರ ರತ್ನ ಸವಣೂರು ಸೀತಾರಾಮ ರೈ, ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಜನಾರ್ದನ ರೆಡ್ಡಿ, ರಾಜ್ಯ ಬಿಜೆಪಿ ಮಾಧ್ಯಮ ವಿಭಾಗದ ಪ್ರಮುಖ್ ಪ್ರಶಾಂತ್ ಕೆಡೆಂಜಿ, ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷರಾದ ಸುಮನ ಮುರಳಿಮೋಹನ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ ಕಿನಾರ, ಅಧ್ಯಕ್ಷ ದಿನೇಶ್ ಮೆದು, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಪಟ್ಟೆ, ದೈವಸ್ಥಾನದ ಸೇವಾ ಟ್ರಸ್ಟ್‌ನ ಕಾರ್‍ಯದರ್ಶಿ ಪ್ರಕಾಶ್ ಕುದ್ಮನಮಜಲು, ಗೌರವ ಸಲಹೆಗಾರರಾದ ನವೀನ್ ಕುಮಾರ್ ಶೆಟ್ಟಿ ಮುಗೇರುಗುತ್ತು, ರಾಜೇಂದ್ರ ರೈ ಮಿಜಾರುಗುತ್ತು, ದ.ಕ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಜಿ.ಪಂ, ಮಾಜಿ ಸದಸ್ಯರಾದ ಶಿವಣ್ಣ ಗೌಡ ಇಡ್ಯಾಡಿ, ಹರೀಶ್ ಕಂಜಿಪಿಲಿ, ಬಾಲಕೃಷ್ಣ ಬಾಣಜಾಲು, ಪುತ್ತೂರು ಕಂಬಳ ಸಮಿತಿಯ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ , ಉದ್ಯಮಿ ಎನ್.ಸುಜಿತ್ ಕುಮಾರ್ ಶೆಟ್ಟಿ ನಡುಬೈಲು, ಪ್ರಭಾಕರ್ ಶೆಟ್ಟಿ ನಡುಬೈಲು, ಇಂದಿರಾ ಬಿ.ಕೆ, ರಾಜೀವಿ ವಿ.ಶೆಟ್ಟಿ ಕೆಡೆಂಜಿ, ಮಾಜಿ ಸದಸ್ಯರುಗಳಾದ ತೀರ್ಥರಾಮ್ ಕೆಡೆಂಜಿ, ಸತೀಶ್ ಬಲ್ಯಾಯ, ಚಂದ್ರಶೇಖರ್ ಪಿ, ಚೇತನ್ ಕುಮಾರ್ ಕೋಡಿಬೈಲು, ಗಂಗಾಧರ್ ಪೆರಿಯಡ್ಕ, ಸಂತೋಷ್ ಪಟ್ಟೆ, ಸತೀಶ್ ಶೆಟ್ಟಿ ಕಿನಾರ, ಜತ್ತಪ್ಪ ಗೌಡ ಆರೇಲ್ತಡಿ, ಮೋನಪ್ಪ ಗೌಡ ಆರೇಲ್ತಡಿ, ಸಂಜೀವ ಪೂಜಾರಿ ಅಗರಿ, ರತ್ನಾಕರ ಪೂಜಾರಿ ಅಗರಿ, ರಾಜೇಂದ್ರ ಇಡ್ಯಾಡಿ, ಗಿರೀಶ್ ಮೆದು, ಕುಶಾಲಪ್ಪ ಗೌಡ ಇಡ್ಪಾಡಿ, ಚಂದಪ್ಪ ಪೂಜಾರಿ ಊರುಸಾಗು, ವಿಠಲ ಶೆಟ್ಟಿ ಕೆಡೆಂಜಿ, ಮೋಹನ್ ರೈ ಕೆರೆಕ್ಕೋಡಿ, ಶ್ರೀಧರ್ ಇಡ್ಯಾಡಿ, ವಾಸುದೇವ ಇಡ್ಯಾಡಿ, ಪುಷ್ಪರಾಜ್ ಆರೇಲ್ತಡಿ, ಬಾಲಚಂದ್ರ ರೈ ಕೆರೆಕ್ಕೋಡಿ, ರಾಜೇಶ್ ಇಡ್ಯಾಡಿ, ಅಕ್ಷಯ್ ಕುಮಾರ್ ಏರ್ತಿಲ, ಸುರೇಶ್ ರೈ ಸೂಡಿಮುಳ್ಳು, ಜಯಪ್ರಕಾಶ್ ಊರುಸಾಗು, ಪ್ರೇಮಚಂದ್ರ ಮೆದು, ದಿವಾಕರ ಬಸ್ತಿ, ಸುಪ್ರೀತ್ ರೈ ಖಂಡಿಗ, ಸುರೇಶ್ ಕುಂಡಡ್ಕ, ಮಹೇಶ್ ಕೆ.ಸವಣೂರು, ಪಿ.ಪಿ.ಜೋಯಿ ದುರ್ಗಿಮಜಲು, ಸುಪ್ರೀತ್ ರೈ ಕೊಯಿಲ, ಸಂದೇಶ್ ಉಪ್ಪಿನಂಗಡಿ, ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here