ಪುತ್ತೂರು: ವಿದ್ಯಾರ್ಥಿನಿ ವೈಷ್ಣವಿ ಕೆಗೆ ಸಿಸಿಆರ್‌ಟಿ ಭರತನಾಟ್ಯ ವಿದ್ಯಾರ್ಥಿ ವೇತನ

0

ಪುತ್ತೂರು: ನಾಟ್ಯರಂಗದ ನೃತ್ಯಗುರು ವಿದುಷಿ ಮಂಜುಳಾ ಸುಬ್ರಹ್ಮಣ್ಯ ಇವರ ಶಿಷ್ಯೆಯಾದ ವೈಷ್ಣವಿ ಕೆ ಇವರು ಪ್ರಸಕ್ತ ಸಾಲಿನ ಸಾಂಸ್ಕೃತಿಕ ಸಂಪನ್ಮೂಲಗಳು ಮತ್ತು ತರಬೇತಿ ಕೇಂದ್ರ (CCRT) ನೀಡುವ ಭರತನಾಟ್ಯ ವಿಭಾಗದ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿರುತ್ತಾರೆ.


ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯವು ನೀಡುವ ಸ್ಕಾಲರ್ ಶಿಪ್ ಇದಾಗಿದೆ. ವೈಷ್ಣವಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ. ನೃತ್ಯದೊಂದಿಗೆ ಸಂಗೀತ ಹಾಗೂ ವೀಣೆಯನ್ನು ಅಭ್ಯಾಸ ಮಾಡುತ್ತಿರುವ ಈಕೆ ಪುತ್ತೂರು ಕೃಷ್ಣ ಕುಮಾರ್ ಕೆ ಹಾಗೂ ಮಧುರ ದಂಪತಿಗಳ ಪುತ್ರಿ

LEAVE A REPLY

Please enter your comment!
Please enter your name here