






ನಾಳೆಯ ನೆಮ್ಮದಿಗಾಗಿ ಸಜ್ಜನರಾಗಿ: ಪುತ್ತೂರು ತಂಙಳ್
ಸಮುದಾಯದ ಬಡವರ ಕಣ್ಣೀರೊರೆಸುವ ಕೆಲಸ ಸಾಮೂಹಿಕವಾಗಿ ನಡೆಯಲಿ; ಶಾಸಕ ಅಶೋಕ್ ರೈ


ಪುತ್ತೂರು: ಪಮ್ಮಲೆ( ಪಡುಮಲೆ) ಜುಮಾ ಮಸೀದಿ ವಠಾರದಲ್ಲಿ ಅಂತ್ಯವಿಶ್ರಾಂತಿ ಹೊಂದುತ್ತಿರುವ ವಲಿಯುಲ್ಲಾಯಿಯವರ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುವ ಆಂಡ್ ನೇರ್ಚೆ( ಉರೂಸ್) ಕಾರ್ಯಕ್ರಮವು ಎ.24ರಿಂದ 26 ತನಕ ನಡೆಯಿತು.



ಎ.24ರಂದು ಕಾರ್ಯಕ್ರಮವನ್ನು ಎನ್‌ಪಿಎಂ ಜಮಾಲುದ್ದೀನ್ ತಂಙಳ್ ಅಲ್ ಬುಖಾರಿ ಕುನ್ನುಂಗೈ ಉದ್ಘಾಟಿಸಿ ಮಹಾತ್ಮ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮ ಬಗ್ಗೆ ವಿವರಣೆಯನ್ನು ನಮ್ಮನ್ನಗಲಿದ ಮಹಾನುಭಾವರನ್ನು ನೆನಪಿಸಿಕೊಳ್ಳುವ ಮೂಲಕ ಅವರ ಜೀವನ ಚಿರಿತ್ರೆಯನ್ನು ನಮ್ಮ ಮಕ್ಕಳಿಗೂ ತಿಳಿಹೇಳಬೇಕಾಗಿರುವು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು. ಪಮ್ಮಲ ಖತೀಬರಾದ ಯೂಸುಫ್ ಸವಾದ್ ಫೈಝಿ ಅಲ್ ಮಹಬರಿ ಧಾರ್ಮಿಕ ಉಪನ್ಯಾಸ ನೀಡಿದರು. ಎ.25ರಂದು ಅಬ್ದುಲ್ ಖಾದರ್ ಸಖಾಫಿ ಮುದುಗಡ ಮುಖ್ಯ ಪ್ರಭಾಷಣಗೈದರು.

ನಾಳೆಯ ನೆಮ್ಮದಿಗಾಗಿ ಸಜ್ಜನರಾಗಿ: ಪುತ್ತೂರು ತಂಙಳ್
ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ಹಾಗೂ ದುವಾಶೀರ್ವಚನ ನೀಡಿದ ಪುತ್ತೂರು ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಸಯ್ಯದ್ ಅಹ್ಮದ್ ಪೂಕೋಯ ತಂಙಳ್‌ರವರು ಮನುಷ್ಯನ ಕನಿಷ್ಠ ಆಯುಷ್ಯದಲ್ಲಿ ನಾವು ಅಲ್ಲಾಹನ ಬಗ್ಗೆ ಭಯ ಭಕ್ತಿಯುಳ್ಳ ಸಜ್ಜನರಾಗಿ ಬಾಳಬೇಕು, ನಾವು ಈ ಭೂಮಿ ಮೇಲೆ ಖಾಯಂ ಆಗಿ ವಾಸ ಮಾಡುವವರಲ್ಲ, ಪರಲೋಕ ಎಂಬ ಜೀವನ ನಮಗೆ ಶಾಸ್ವತವಾಗಿದ್ದು ಅದರ ಮೇಲೆ ಪ್ರತೀಯೊಬ್ಬ ಮುಸ್ಲಿಮನೂ ವಿಶ್ವಾಸ ಇರಿಸಿದ್ದಾನೆ. ನಾಳೆಯ ಜೀವನ ನೆಮ್ಮದಿಯಾಗಿರಬೇಕಾದಲ್ಲಿ ನಾವು ಉತ್ತಮರಾಗಿ ಬಾಳಬೇಕು. ಸಮಾಜದಲ್ಲಿ ಎಲ್ಲಾ ಧರ್ಮದವರ ಜೊತೆ ಉತ್ತಮ ಭಾಂದವ್ಯವನ್ನು ಹೊಂದುವ ಮೂಲಕ ಪ್ರವಾದಿಯವರ ನೈಜ ಅನುಯಾಯಿಯಾಗಿ ಜೀವಿಸಬೇಕು ಎಂದು ಹೇಳಿದ ಅವರು ಸಮಾಜದಲ್ಲಿ ನೊಂದವರ ಕಣ್ಣೀರು ಒರೆಸುವ ಕೆಲಸವನ್ನು ಮಾಡುವ ಮನಸ್ಸು ನಮ್ಮದಾಗಬೇಕು ಎಂದು ಹೇಳಿದರು.
ಜಿಲ್ಲಾ ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಸಂಶುದ್ದೀನ್ ದಾರಿಮಿ ಪ್ರಸ್ತಾವಿಕ ಭಾಷಣ ಮಾಡಿದರು. ಹಾಫಿಳ್ ಶಮೀಸ್‌ಖಾನ್ ನಾಫಿ ಇಡುಕ್ಕಿ ಮುಖ್ಯ ಧಾರ್ಮಿಕ ಪ್ರವಚನ ನೀಡಿದರು.
ಬಡವರ ಪರ ಕಾಳಜಿವಹಿಸಿ: ಶಾಸಕ ಅಶೋಕ್ ರೈ
ಎಲ್ಲಾ ಸಮಾಜದಲ್ಲೂ ಬಡವರಿದ್ದಾರೆ ಅವರ ಬಗ್ಗೆ ನಮಗೆ ಕಾಳಜಿ ಇರಬೇಕು. ಬಡವರಾದವರು ಸಾಯುವವರೆಗೂ ಬಡವನಾಗಿಯೇ ಇದ್ದು ಕಷ್ಟದಲ್ಲಿಯೇ ಜೀವನ ನಡೆಸುವ ಕುಟುಂಬವನ್ನು ಹುಡುಕಿ ಅವರಿಗೆ ಸಹಾಯ ಮಾಡುವ ಮನಸ್ಸು ನಮ್ಮದಾಗಬೇಕು ಎಂದು ಶಾಸಕ ಅಶೋಕ್ ರೈ ಹೇಳಿದರು.
ನಾನು ಹಾಗೆ ಮಾಡಿದ್ದೇನೆ ಹೀಗೆ ಮಾಡಿದ್ದೇನೆ ಎಂದು ಸಾಮಾಜಿಕ ತಾಣದಲ್ಲಿ ಗೀಚುವ ಮಂದಿ ನಮ್ಮಲ್ಲಿ ಅನೇಕರಿದ್ದಾರೆ ಅಂಥವರಿಗೆ ಬಡವನಿಗೆ ಒಂದು ಹೊತ್ತಿನ ಊಟ ಕೊಡುವ ಒಳ್ಳೆಯ ಮನಸ್ಸು ಕೂಡಾ ಇರುವುದಿಲ್ಲ, ಸಮಾಜದಲ್ಲಿ ನೊಂದವರಿದ್ದರೆ ಅದರ ಬಗ್ಗೆ ನಾವು ತಿಳಿದು ಅವರಿಗೆ ಸಹಾಯ ಮಾಡುವ ಪೃವೃತ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಪಡುಮಲೆ ಈ ಪುಣ್ಯ ಭೂಮಿ ಸೌಹಾರ್ಧತೆಯ ನಾಡು ಇಲ್ಲಿಎಲ್ಲಾ ಧರ್ಮದವರೂ ಪರಸ್ಪರ ಸಾಹೋದರ್ಯತೆಯಿಂದ ಬಾಳುತ್ತಿರುವುದು ಸಂತೋಷದ ವಿಚಾರವಾಗಿದೆ. ಎಲ್ಲಾ ಧರ್ಮಗಳ ಧರ್ಮ ಗುರುಗಳು ಶಾಂತ ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡಬೇಕು. ಪುತ್ತೂರಿನ ಅಭಿವೃದ್ದಿಗೆ ಪಣ ತೊಟ್ಟಿದ್ದು ಜಾತಿ, ಮತ ಬೇಧವಿಲ್ಲದೆ ಎಲ್ಲಾ ಧರ್ಮದ ಧಾರ್ಮಿಕ ಕೇಂದ್ರಗಳ ಅಭಿವೃದ್ದಿಗೆ ಅನುದಾನವನ್ನು ಸರಕಾರದ ವತಿಯಿಂದ ನೀಡಲಾಗುತ್ತಿದ್ದು ಪಡುಮಲೆ ಮಸೀದಿಗೂ 10 ಲಕ್ಷ ಅನುದಾನವನ್ನು ಒದಗಿಸಲಾಗಿದೆ ಎಂದು ಶಾಸಕರು ಹೇಳಿದರು.
ವೇದಿಕೆಯಲ್ಲಿ ಜಮಾತ್ ಕಮಿಟಿ ಉಪಾಧ್ಯಕ್ಷ ಫಕ್ರುದ್ದೀನ್ ಹಾಜಿ, ಪ್ರ. ಕಾರ್ಯದರ್ಶಿ ಆಲಿಕುಂಞಿ ಕಾವುಂಜ, ಕೋಶಾಧಿಕಾರಿ, ಕಾರ್ಯದರ್ಶಿ ಆಲಿಹಾಜಿ ಪಿಲಿಪುಡೆ, ರಫೀಕ್ ಫೈಝಿ ಕನ್ಯಾನ, ಅಬೂಬಕ್ಕರ್ ಹಾಜಿ ಕುಕ್ಕಾಜೆ, ಉಮ್ಮರ್ ಮುಸ್ಲಿಯಾರ್, ಆಸಿಫ್ ಫೈಝಿ ಕೊಯಿಲ, ಇಬ್ರಾಹಿಂ ಮುಸ್ಲಿಯಾರ್ ಮಿನಾವು, ನವಾಝ್ ಸುಪ್ರಿಂ ಪರ್ಪುಂಜ, ಮಹಮ್ಮದ್ ಕುಂಞಿ ಹಾಜಿ ಕೂಟತ್ತಾನ, ಎಸ್ ಎ ಹಮೀದ್ ಹಾಜಿ ಸುಳ್ಯ, ಅಬ್ದುಲ್ ಲತೀಫ್ ಫೈಝಿ, ಮುನೀರ್ ಅಬ್ರೋಡ್, ಅಮಾನ್ ತಿಂಗಳಾಡಿ ಉಪಸ್ಥಿತರಿದ್ದರು.
ಸೌಹಾರ್ದ ಸಂಗಮ
ಸಂಜೆ ಮಸೀದಿ ವಠಾರದಲ್ಲಿ ಸೌಹಾರ್ಧ ಸಂಗಮ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಪ್ರಸಾದ್‌ಕೌಶಲ್ ಶೆಟ್ಟಿಎಂ. ಬಿ ವಿಶ್ವನಾಥ ರೈ, ಡಾ. ರಾಜಾರಾಂ ಕೆ ಬಿ, ಎಚ್ ಮಹಮ್ಮದಾಲಿ, ಉಮಾನಾಥ ಶೆಟ್ಟಿ ಪೆರ್ನೆ, ಕೃಷ್ಣಪ್ರಸಾದ್ ಆಳ್ವ, ಕುಂಬ್ರ ದುರ್ಗಾಪ್ರಸಾದ್ ರೈ, ಶಿವರಾಮ ಆಳ್ವ, ಉಮೇಶ್ ನಾಡಾಜೆ, ಚಂದ್ರಹಾಸ ಶೆಟ್ಟಿ, ಈಶ್ವರಭಟ್ ಪಂಜಿಗುಡ್ಡೆ, ಫಾರೂಕ್ ಪೆರ್ನೆ, ಫಾರೂಕ್ ಬಾಯಬ್ಬೆ, ರಾಮಣ್ಣ ಪಿಲಿಂಜ, ಮುರಳೀಧರ್ ರೈ, ಸತೀಶ್ ರೈ ಕಟ್ಟಾವು, ಜಯಂತ ರೈ ಕುದ್ಕಾಡಿ, ಕೃಷ್ಣ ರೈ ಕುದ್ಕಾಡಿ ರವಿರಾಜ ರೈ ಸಜಂಕಾಡಿ, ಶ್ರೀನಿವಾಸ ಗೌಡ ಕನ್ನಯ, ರೋಶನ್ ರೈ ಬನ್ನೂರು, ಸಂತೋಷ್ ರೈ ಇಳಂತಾಜೆ, ಸಂತೋಷ್ ಆಳ್ವ, ಸುಧಾಕರ ಶೆಟ್ಟಿ, ಆಲಿಕುಂಞಿ ಹಾಜಿ, ಕೃಷ್ಣಪ್ರಸಾದ್ ಪಡುಮಲೆ, ರಫೀಕ್ ಮೊಟ್ಟೆತ್ತಡ್ಕ, ಡಾ.ರವೀಶ್ ಪಡುಮಲೆ, ವಲೇರಿಯನ್ ಡಯಾಸ್, ಮೌರಿಸ್ ಮಸ್ಕರೇನಸ್, ರಂಜಿತ್ ಬಂಗೇರ, ಅಶೋಕ್ ಪೂಜಾರಿ ಬೊಳ್ಳಾಡಿ, ರಾಕೇಶ್ ರೈ ಕುದ್ಕಾಡಿ, ರವಿರಾಜ್ ಶೆಟ್ಟಿ ಅಣಿಲೆ, ಅಬ್ದುಲ್ ಸಲಾಂ ಮೇನಾಲ, ಮಹಾಲಿಂಗ ನಾಯ್ಕ, ಸಮೀರ್ ಸುಳ್ಯ, ಗಂಗಾಧರ್ ರೈ, ಅಧ್ಯಾಪಕ ರಾಮಣ್ಣ ಗೌಡ, ಕೆ ಪಿ ಸುಬ್ಬಯ್ಯ, ಮೋಹನ್ ದಾಸ್ ರೈ ಕುಂಬವ್ರ, ಸುರೇಶ್ ರೈ, ಹರೀಶ್ ಪೂಜಾರಿ, ಶ್ರೀಧರ ಪೂಜಾರಿ, ಗಿರೀಶ್ ಗೌಡ, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಬಡಗನ್ನೂರು ಸೌಹಾರ್ದತೆಯ ನಾಡು, ಇಲ್ಲಿ ಪುರಾತನ ಪುರುಷರ ಮಖಾಂ ಇದೆ, ಕೋಟಿ ಚೆನ್ನಯರ ಪವಿತ್ರ ಕ್ಷೇತ್ರಗಳು ಸೇರಿದಂತೆ ವಿವಿಧ ಧರ್ಮಗಳ ಧಾರ್ಮಿಕ ಕೇಂದ್ರಗಳ ಸಂಗಮ ಕ್ಷೇತ್ರದಂತೆ ಕಂಗೊಳಿಸುತ್ತಿದೆ. ಪಡುಮಲೆ ಮಸೀದಿಯಲ್ಲಿ ನಡೆಯುವ ವಾರ್ಷಿಕ ಉರೂಸ್ ಕಾರ್ಯಕ್ರಮಕ್ಕೆ ಜಾತಿ, ಮತ, ಧರ್ಮಗಳ ಬೇಧವಿಲ್ಲದೆ ಎಲ್ಲರೂ ಭಾಗವಹಿಸುತ್ತಾರೆ. ಮನುಷ್ಯ ಮನಸ್ಸುಗಳ ಸಂಗಮವೂ ಇಲ್ಲಿ ನಡೆಯುತ್ತಿದೆ. ವಾರ್ಷಿಕ ಉರೂಸ್ ಕಾರ್ಯಕ್ರಮದಂದು ಅನ್ನದಾನ ನಡೆಯುತ್ತದೆ, ಈ ಬಾರಿಯೂ ಸಾವಿರಕ್ಕೂ ಮಿಕ್ಕಿ ಮಂದಿ ಅನ್ನದಾನದಲ್ಲಿ ಭಾಗಿಯಾಗಿದ್ದಾರೆ. ಮಸೀದಿಯ ಶೌಚಾಲಯ ನಿರ್ಮಾಣಕ್ಕೆ ಶಾಸಕ ಅಶೋಕ್ ರೈ ಅವರು ಹತ್ತು ಲಕ್ಷ ಅನುದಾನವನ್ನು ಕೊಡಿಸಿದ್ದಾರೆ ಇದಕ್ಕಾಗಿ ನಾವು ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇವೆ, ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ.
ಮಹಮ್ಮದ್ ಬಡಗನ್ನೂರು,
ಅಧ್ಯಕ್ಷರು ಜಮಾತ್ ಕಮಿಟಿ, ಪಮ್ಮಲೆ










