






ಉಪ್ಪಿನಂಗಡಿ: ನಕ್ಸಲ್ ಸಂಬಂಧಿತ ಪ್ರಕರಣಗಳ ಕುರಿತು ವಿಚಾರಣಾ ಮತ್ತು ಜಿಲ್ಲಾ ಸತ್ರ ನ್ಯಾಯಾಲಯಗಳಲ್ಲಿ ವಾದ ಮಂಡಿಸಲು ವಿಶೇಷ ಸರಕಾರಿ ಅಭಿಯೋಜಕರನ್ನಾಗಿ ಕಡಬ ತಾಲೂಕಿನ ಕೊೖಲದ ಪೆರ್ಜಿ ನಿವಾಸಿ ಖಲಂದರ್ ಜೆ.ಎಸ್. ಅವರನ್ನು ಸರಕಾರ ನೇಮಕಗೊಳಿಸಿ ಆದೇಶಿಸಿದೆ.


ಖಲಂದರ್ ಬೆಂಗಳೂರಿನಲ್ಲಿ ಹೈಕೋರ್ಟು ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದು, ಉಪ್ಪಿನಂಗಡಿಯ ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ.













