ಮೇ.1,2 ಮತ್ತು 3: ಮಂಗಳೂರಿನ ಕರಾವಳಿ ಮೈದಾನದಲ್ಲಿ ಕೆನರಾ ಇಂಡಸ್ಟ್ರಿಯಲ್ ಎಕ್ಫೋ – 2026

0

ಪ್ರಥಮ ಬಾರಿಗೆ ಕರಾವಳಿ ಕರ್ನಾಟಕದ ಅತಿ ದೊಡ್ಡ ಇಂಜಿನಿಯರಿಂಗ್, ಇಂಡಸ್ಟ್ರಿಯಲ್, ಟೆಕ್ ಎಕ್ಫೋ

ಪುತ್ತೂರು: ಕೆನರಾ ಇಂಡಸ್ಟ್ರೀಸ್ ಅಸೋಸಿಯೇಶನ್, ಇಂಡಸ್ಟ್ರಿಯಲ್ ಏರಿಯಾ ಬೈಕಂಪಾಡಿ ಮಂಗಳೂರು ಇದರ ಸಾರಥ್ಯದಲ್ಲಿ ಕೆನರಾ ಇಂಜಿನಿಯರಿಂಗ್, ಇಂಡಸ್ಟ್ರಿಯಲ್ ಟೆಕ್ ಎಕ್ಫೋ ಮೇ. 1,2 ಮತ್ತು 3 ರಂದು ಮಂಗಳೂರಿನ ಕರಾವಳಿ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆಯಲಿದೆ.


ಮೇ. 1ರಂದು ಬೆಳಿಗ್ಗೆ 10.00 ಗಂಟೆಗೆ ಮಾನ್ಯ ವಿಧಾನಸಭಾ ಸದಸ್ಯ ಯು.ಟಿ. ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ದ.ಕ. ಸಂಸದ ಬ್ರಿಜೇಶ್ ಚೌಟ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೆನರಾ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷ ಎಂ.ಡಿ. ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಕರಾವಳಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾದ ಅತಿದೊಡ್ಡ ಇಂಡಸ್ಟ್ರಿಯಲ್ ವಸ್ತು ಪ್ರದರ್ಶನ ಇದಾಗಿದ್ದು, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 130ಕ್ಕೂ ಮಿಕ್ಕಿ ಕೈಗಾರಿಕಾ ಉತ್ಪನ್ನಗಳ ಸ್ಟಾಲ್ ಗಳು, ವಿವಿಧ ರೀತಿಯ ಖಾದ್ಯಗಳ ಮಾರಾಟ ನಡೆಯಲಿದೆ.

ಇಂಡಸ್ಟ್ರಿಯಲ್ ಎಕ್ಸ್ಫೋ ಕೈಗಾರಿಕಾ ವಲಯದಲ್ಲಿ ವಿಶೇಷ ಬದಲಾವಣೆಗಳನ್ನು, ಅಭಿವೃದ್ಧಿಯನ್ನು, ಮತ್ತು ಅವಕಾಶಗಳನ್ನು ಒದಗಿಸಲಿದೆ. ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ವಿದ್ಯಾರ್ಥಿಗಳಿಗಾಗಿಯೇ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಮತ್ತು ತರಬೇತಿ, ವಿವಿಧ ಕೈಗಾರಿಕೆಗಳಿಗೆ ಸ್ಥಳದಲ್ಲೇ ಉದ್ಯೋಗಾವಕಾಶ, ಮೆಷಿನರಿ‌ ಮೂಲಕ ಉತ್ಪಾದನಾ ಡೆಮೋ, ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಸಾಲಸೌಲಭ್ಯಗಳ ಬಗ್ಗೆ, ಉತ್ಪಾದನಾ ಘಟಕಗಳ ಸ್ಥಾಪನೆಯ ಬಗ್ಗೆ ಪೂರ್ಣ ಮಾಹಿತಿ, ಕೈಗಾರಿಕಾ ಉತ್ಪನ್ನಗಳ ಪ್ರದರ್ಶನ ನಡೆಯಲಿದೆ. ಪ್ರತೀ ದಿನ ಬೆಳಿಗ್ಗೆ 10.00ಗಂಟೆಯಿಂದ ಸಂಜೆ 7.00 ಗಂಟೆಯ ತನಕ ಎಕ್ಸ್ಫೋ ನಡೆಯಲಿದ್ದು ಪ್ರವೇಶ ಉಚಿತವಾಗಿರಲಿದೆ ಎಂದು ಕೆ.ಐ.ಎ ಅಧ್ಯಕ್ಷ ಎಂ.ಡಿ. ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here