






ವಿಟ್ಲ: ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಶ್ರೀ ಮಲರಾಯಿ, ಪಿಲಿಚಾಮುಂಡಿ, ಧರ್ಮದೈವ ರುದ್ರಚಾಮುಂಡಿ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಜಾತ್ರಾ ಮಹೋತ್ಸವವು ಏ.29ರಿಂದ ಮೇ.4ರ ವರೆಗೆ ವಿವಿಧ ಧಾರ್ಮಿಕ ವೈದ್ಧಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.


ಏ.19ರಂದು ಸಾಯಂಕಾಲ ಕಡಂಬು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.



ಏ.೩೦ರಂದು ಬೆಳಗ್ಗೆ ಗಂಟೆ 8:00 ರಿಂದ ದೇವತಾ ಪ್ರಾರ್ಥನೆ, ಶಿಲ್ಪಿ, ಆಚಾರಿ, ಮೇಸ್ತ್ರಿಗಳಿಂದ ನೂತನ ಗುಡಿಗಳ ಪರಿಗ್ರಹ, ಸ್ವಸ್ತಿ ಪುಣ್ಯಾಹವಾಚನ, ಸ್ಥಳ ಶುದ್ಧಿ, ಗಣಪತಿ ಹೋಮ, ನೂತನ ಮೊಗ ಆಯುಧಗಳ ಜಲಾಧಿವಾಸ ಪ್ರಾಯಶ್ಚಿತ್ತ ಹೋಮ ಮಧ್ಯಾಹ್ನ ಗಂಟೆ 1 ರಿಂದ ಅನ್ನಸಂತರ್ಪಣೆ ನಡೆಯಲಿದೆ.
ಸಾಯಂಕಾಲ 5 ಗಂಟೆಯಿಂದ ಸ್ವಸ್ತಿ ಪುಣ್ಯಾಹವಾಚನ, ಪ್ರಾಸಾದ ಶುದ್ದಿ, ಧ್ಯಾನಾಧಿವಾಸ, ರಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಪ್ರಾಸಾದ ಪೂಜೆ, ಪ್ರಾಕಾರ ಬಲಿ ನಡೆದು ರಾತ್ರಿ ಗಂಟೆ 8:30 ರಿಂದ ಅನ್ನಸಂತರ್ಪಣೆ ನಡೆಯಲಿದೆ.
ಮೇ.1ರಂದು ಬೆಳಗ್ಗೆ ಗಂಟೆ 6:30 ರಿಂದ ಮಹಾಗಣಪತಿ ಹೋಮ, ಸುಮುಹೂರ್ತಕ್ಕೆ ದೈವಗಳ ಪ್ರತಿಷ್ಠೆ ಪ್ರತಿಷ್ಠಾ ಹೋಮ, ಕಲಶಾಭಿಷೇಕ, ತಂಬಿಲ ಸೇವೆ, ನಿತ್ಯ ನೈಮಿತ್ತಿಗಳ ನಿರ್ಣಯ, ಪ್ರಾರ್ಥನೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ಗಂಟೆ 1ರಿಂದ ಅನ್ನಸಂತರ್ಪಣೆ ನಡೆಯಲಿದೆ.
ಸಾಯಂಕಾಲ 5 ಗಂಟೆಗೆ ಕಾಪುಮಜಲುವಿನಿಂದ ಶ್ರೀ ಮಲರಾಯಿ ದೈವದ ಭಂಡಾರ ಬರುವುದು.
ರಾತ್ರಿ ಗಂಟೆ 8:30 ಅನ್ನಸಂತರ್ಪಣೆ ನಡೆಯಲಿದೆ.
ಮೇ.2ರಂದು ಬೆಳಗ್ಗೆ ಶ್ರೀ ಮಲರಾಯಿ ದೈವ ಹಾಗೂ ಪಿಲಿಚಾಮುಂಡಿ ದೈವಗಳ ನೇಮ ನಡೆಯಲಿದೆ. ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ ಗಂಟೆ 3 ಕ್ಕೆ ಶ್ರೀ ಮಲರಾಯ ದೈವದ ಭಂಡಾರ ಕಾಪುವಿಗೆ ಹೊರಡುವುದು.
ಸಾಯಂಕಾಲ 5 ಗಂಟೆಯಿಂದ ಧರ್ಮದೈವ ರುದ್ರಚಾಮುಂಡಿ, ಕಲ್ಲುರ್ಟಿ, ಪಂಜುರ್ಲಿದೈವ ಹಾಗೂ ಸಪರಿವಾರ ದೈವಗಳ ಭಂಡಾರ ತೆಗೆಯುವುದು ನೇಮೋತ್ಸವ ನಡೆಯಲಿದೆ. ರಾತ್ರಿ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.









