ವರ್ನಡ್ಕ ಶ್ರೀ ದೇವಿ ಭಜನಾಮಂದಿರದ ವಾರ್ಷಿಕೋತ್ಸವ

0

ರಾಮಕುಂಜ: ಗ್ರಾಮದ ವರ್ನಡ್ಕ ಶ್ರೀದೇವಿ ಭಜನಾಮಂದಿರದ ೨೨ನೇ ವರ್ಷದ ವಾರ್ಷಿಕೋತ್ಸವ ಮತ್ತು ನಗರ ಭಜನಾ ಮಂಗಳೋತ್ಸವ ಕಾರ್ಯಕ್ರಮ ಏ.28ರಂದು ನಡೆಯಿತು.


ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಉಷಾ ಬಿ. ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಭಜನಾ ಮಂದಿರದ ಅಧ್ಯಕ್ಷ ಶಿವರಾಂ ಕುಲಾಲ್ ಪಾದೆ ಅಧ್ಯಕ್ಷತೆ ವಹಿಸಿದ್ದರು. ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಗುರುಪ್ರಸಾದ ರಾಮಕುಂಜ, ರಾಮಕುಂಜ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಮುರಳಿಕೃಷ್ಣ ಕೆ.ಬಡಿಲ, ರಾಷ್ಟ್ರಸೇವಿಕಾ ಸಮಿತಿಯ ಪುತ್ತೂರು ಜಿಲ್ಲಾ ಸಂಚಾಲಕಿ ಸವಿತಾ ಪಿ.ಜಿ ಭಟ್, ಮಾಡ ಮಹಾಕಾಳಿ ಪರಿವಾರ ದೈವಸ್ಥಾನದ ಅಧ್ಯಕ್ಷರಾದ ಯೋಗೀಶ್ ಅಜ್ಜಿಕುಮೇರು ಶುಭಹಾರೈಸಿದರು. ಕುಣಿತ ಭಜನೆ ಪ್ರಾರಂಭಿಸಿ, ಮಕ್ಕಳನ್ನು ಒಗ್ಗೂಡಿಸಿ ಸತತ ನಾಲ್ಕು ವರ್ಷದಿಂದ ಕುಣಿತ ಭಜನೆ ಸೇವೆ ನೀಡುತ್ತಿರುವ ಜಯಪ್ರಸಾದ್ ಕಂಪ ಇವರನ್ನು ಸನ್ಮಾನಿಸಲಾಯಿತು. 18 ದಿನ ನಿರಂತರವಾಗಿ ನಡೆದ ನಗರ ಭಜನೆಯಲ್ಲಿ ಭಾಗವಹಿಸಿದ ಭಜಕರನ್ನು ಗೌರವಿಸಲಾಯಿತು.


ವೇದಿಕೆಯಲ್ಲಿ ಭಜನಾ ಮಂದಿರದ ಗೌರವಾಧ್ಯಕ್ಷ ಕೆ.ವಿ.ಕುಲಾಲ್, ಮಾಜಿ ಅಧ್ಯಕ್ಷರಾದ ಬಾಬು ಕುಲಾಲ್ ಪಾದೆ, ಪೂವಪ್ಪ ಕುಲಾಲ್ ಕಂಪ, ಗಂಗಾಧರ ಗೌಡ ಬರೆಂಬಾಡಿ, ಚಿತ್ತರಂಜನ್ ಶೆಟ್ಟಿ ಬರೆಂಬಾಡಿ, ರಾಕೇಶ ಕುಲಾಲ್ ಕಂಪ ಉಪಸ್ಥಿತರಿದ್ದರು. ನಾಗರಾಜ್ ಪಾದೆ ಸ್ವಾಗತಿಸಿ, ಶ್ವೇತಾದಿನೇಶ್ ಬದೆಂಜ ವಂದಿಸಿದರು. ಶಶಿಕಲಾ ನಯನಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಭಜನಾ ಮಂದಿರದ ಪದಾಧಿಕಾರಿಗಳು, ಉತ್ಸವ ಸಮಿತಿ ಪದಾಧಿಕಾರಿಗಳು ಸಹಕರಿಸಿದರು. ರಾತ್ರಿ ಊರ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಶ್ರೀ ಸುಬ್ರಹ್ಮಣ್ಯ ದೇವ ಪೂಜಿತ್ತಾಯರ ನೇತೃತ್ವದಲ್ಲಿ ಬೆಳಿಗ್ಗೆ ಗಣ ಹೋಮ, ಸತ್ಯನಾರಾಯಣ ಪೂಜೆ, ಸಾಯಂಕಾಲ ದುರ್ಗಾ ಪೂಜೆ, ಸಪ್ತಸತಿ ಪಾರಾಯಣ, ಮುತ್ತೈದೆ ಆರಾಧನೆ, ಮಹಿಳಾ, ಪುರುಷ ಮಕ್ಕಳ ತಂಡದಿಂದ ಭಜನೆ ನಡೆಯಿತು.

LEAVE A REPLY

Please enter your comment!
Please enter your name here