ಮೇ.9 ಬೊಳುವಾರಿನಲ್ಲಿ ಬಿಬಿಕ್ಯೂ ಮಾಫಿಯಾ ಫುಡ್ ಕೆಫೆ ಶುಭಾರಂಭ : ದಕ್ಷಿಣ ಭಾರತದ ಹೆಸರಾಂತ ಫುಡ್ ಕೆಫೆ

0

ಪುತ್ತೂರು: ದಕ್ಷಿಣ ಭಾರತದ ಹೆಸರಾಂತ ಫುಡ್ ಕೆಫೆ `ಬಿಬಿಕ್ಯೂ ಮಾಫಿಯಾ ಕೆಫೆ ರೆಸ್ಟೋರೆಂಟ್’ ಪುತ್ತೂರಿನ ಪ್ರಾಂಚೈಸಿ ಮೇ.9ರಂದು ಬೊಳುವಾರಿನ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಮುಂಭಾಗದ ಪಿ.ಎಸ್ ನಾಯಕ್ಸ್ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ.


ತಮಿಳುನಾಡು ರಾಜ್ಯದಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಿಬಿ ಕ್ಯೂ ಮಾಫಿಯಾ ಕೆಫೆ ರೆಸ್ಟೋರೆಂಟ್ ತನ್ನ ಶಾಖೆಗಳನ್ನು ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ವಿಸ್ತರಿಸಿದೆ. ಕರ್ಣಾಟಕದಲ್ಲಿ ಬೆಂಗಳೂರು, ಮೈಸೂರು ಹಾಸನ ಸೇರಿದಂತೆ 15ಕ್ಕೂ ಅಧಿಕ ಪ್ರಾಂಚೈಸಿಗಳನ್ನು ಹೊಂದಿದೆ. ದ.ಕ ಜಿಲ್ಲೆಯಲ್ಲಿ ಮಂಗಳೂರು ಹೊರೆತು ಪಡಿಸಿದರೆ ಪುತ್ತೂರಿನಲ್ಲಿ ಪ್ರಾಂಚೈಸಿ ಶುಭಾರಂಭಗೊಳ್ಳುತ್ತಿದೆ.


ಅರೇಬಿಯನ್ ಮತ್ತು ಚೈನೀಸ್ ಫುಡ್‌ಗಳನ್ನು ಹೊಂದಿರುವ ಮಳಿಗೆಯಲ್ಲಿ ಅರೇಬಿಯನ್ ಫುಡ್‌ಗಳಾದ ಶವರ್ಮ, ಟಿಕ್ಕಾ, ಆಲ್ಪಾಮ, ಚೈನೀಸ್ ಫುಡ್‌ಗಳಾದ ಬಿರಿಯಾನಿ, ಪ್ರೈಡ್‌ರೈಸ್, ನೂಡಲ್ಸ್, ಜೊತೆಗೆ ಐಸ್‌ಕ್ರೀಂ, ಜ್ಯೂಸ್, ಟೀ.ಕಾಫೀಗಳನ್ನು ಹೊಂದಿದೆ. ಹುಟ್ಟುಹಬ್ಬ, ವೈವಾಹಿಕ ವರ್ಷಾಚರಣೆ ಮೊದಲಾದ ಸಂಭ್ರಮಾಚರಣೆಗಳಿಗೆ ಪ್ರತ್ಯೇಕ ರೂಂಗಳ ಸೌಲಭ್ಯವಿದೆ. ಪ್ರತಿದಿನ ಮಧ್ಯಾಹ್ನ 12ಗಂಟೆಯಿಂದ ರಾತ್ರಿ 11 ಗಂಟೆಯ ತನಕ ಸೇವೆಗೆ ಲಭ್ಯವಿದೆ.


ಶುಭಾರಂಭದ ಆಫರ್
ಪ್ರಾಂಚೈಸಿಯ ಶುಭಾರಂಭದ ಅಂಗವಾಗಿ ಎರಡು ರೋಲ್ ಶವರ್ಮ ಖರೀದಿಗೆ ಒಂದು ಉಚಿತ ಹಾಗೂ ಎರಡು ಫುಲ್ ಬಿರಿಯಾನಿ ಖರೀದಿಗೆ ಒಂದು ಬಿರಿಯಾನಿ ಉಚಿತ ಹಾಗೂ ರೂ.200 ಗಡ್‌ಬಡ್ ಕೇವಲ ರೂ.80.ಕ್ಕೆ ದೊರೆಯಲಿದೆ. ಈ ಕೊಡುಗೆ ಶುಭಾರಂಭದ ಒಂದು ದಿನ ಮಾತ್ರವೇ ಲಭ್ಯವಿದ್ದು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here