







ಪುತ್ತೂರು: ದಕ್ಷಿಣ ಕನ್ನಡದ ಅಯ್ಯಪ್ಪ ವೃತಧಾರಿಗಳು ಶಬರಿಮಲೆ ಯಾತ್ರೆಗೈಯುವ ಸಂದರ್ಭ ಭೇಟಿ ನೀಡುವ ’ಬಡಗು ಶಬರಿಮಲೆ’ ಯೆಂದೇ ಪ್ರಸಿದ್ಧಿ ಪಡೆದಿರುವ ಕಾಸರಗೋಡು ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದಲ್ಲಿ ಮೇ.11ಕ್ಕೆ 101 ಚೆಂಡೆ ವಾದ್ಯಗಳೊಂದಿಗೆ ಹಿತ್ತಾಳೆ ಕವಚದ 18 ಮೆಟ್ಟಲುಗಳ ಲೋಕಾರ್ಪಣೆ ಮತ್ತು ಶ್ರೀ ದೇವರ ಭವ್ಯ ಮಹೋತ್ಸವ ನಡೆಯಲಿದೆ ಎಂದು ಕ್ಷೇತ್ರ ಅಘೋಷ ಸಮಿತಿ ಅಧ್ಯಕ್ಷ ಹರಿನಾರಾಯಣ ಮಾಸ್ಟರ್ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ಮೇ.11ರಂದು ನಡೆಯುವ ಕಾರ್ಯಕ್ರಮದಲ್ಲಿ ಹಿತ್ತಾಳೆಯ ಮೆಟ್ಟಿಲುಗಳನ್ನು ಶೃಂಗೇರಿ ಶ್ರೀ ಶಾರದಾ ಪೀಠಾಧೀಶ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಯವರು ಮತ್ತು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ್ ತಂತ್ರಿ, ಕ್ಷೇತ್ರದ ಗೌರವ ಸಲಹೆಗಾರ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ಶಬರಿಮಲೆಯ ನಾರಾಯಣ ವರ್ಮ ಪಂದಳಂ ಸಹಿತ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ರಾಜೇಶ್ ಮಾಸ್ಟರ್ ಅಗಲ್ಪಾಡಿ, ಸ್ವಾಗತ ಸಮಿತಿಯ ಗೋವಿಂದರಾಜ್ ಮೈಲ್ತೊಟ್ಟು, ರಾಜೇಶ್ ಪಂಜರಿಕೆ, ಸತೀಶ್ ಉಪಸ್ಥಿತರಿದ್ದರು.













