







ಪುತ್ತೂರು: ಕುಂಬ್ರದಲ್ಲಿ ‘ಅಮೃತ ಕ್ಲಿನಿಕ್’ ಮೂಲಕ ಕುಟುಂಬ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ವಿಘ್ನೇಶ್ವರ ಭಟ್ ಅವರು ತೀವ್ರತರದ ರಕ್ತದ ಕ್ಯಾನ್ಸರ್ T-Cell Lymphoma ನಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಆರ್ಥಿಕ ಸಹಾಯದ ಅಗತ್ಯವಿದೆ.ಕಳೆದ 2-3 ತಿಂಗಳಿನಿಂದ ಆರೋಗ್ಯದಲ್ಲಿ ಏರುಪೇರಾಗಿ ನಡೆಸಿದ ಪರೀಕ್ಷೆಗಳಿಂದ ಕ್ಯಾನ್ಸರ್ ದೃಢಪಟ್ಟಿದೆ.


ಸದ್ಯ ಮಂಗಳೂರಿನ MIO – Mangalore Institute Of Oncology ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈಗಾಗಲೇ ಸುಮಾರು ₹20 ಲಕ್ಷ ವೆಚ್ಚವಾಗಿದೆ. ಮುಂದಿನ ಅಸ್ಥಿ ಮಜ್ಜೆ ಕಸಿ (Bone Marrow Transplant) ಹಾಗೂ ಇತರ ಚಿಕಿತ್ಸೆಗಳಿಗೆ ಇನ್ನೂ ಅಂದಾಜು ₹20 ಲಕ್ಷ ಅಗತ್ಯವಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.



ವೈದ್ಯಕೀಯ ವೃತ್ತಿಯನ್ನೇ ನಂಬಿರುವ ಡಾ. ವಿಘ್ನೇಶ್ವರ ಭಟ್ ಅವರಿಗೆ ಇಷ್ಟೊಂದು ದೊಡ್ಡ ಮೊತ್ತವನ್ನು ಹೊಂದಿಸುವುದು ಕಷ್ಟವಾಗಿದೆ. ಆದ್ದರಿಂದ ದಾನಿಗಳು, ಸಾರ್ವಜನಿಕರು ಕೈಲಾದ ಆರ್ಥಿಕ ನೆರವು ನೀಡಿ ಜೀವ ಉಳಿಸಲು ಸಹಕರಿಸಬೇಕಾಗಿ ಕುಟುಂಬದವರು ಮನವಿ ಮಾಡಿದ್ದಾರೆ.
ಧನಸಹಾಯ ಕಳುಹಿಸಲು ಬ್ಯಾಂಕ್ ವಿವರ:
ಕರ್ನಾಟಕ ಬ್ಯಾಂಕ್, ದರ್ಬೆ – ಪುತ್ತೂರು
A/c Name: Vighneshwara Bhat
A/c No: 1023202500000601
IFSC: KARB0001023
GPay / PhonePe: 9611637848










