






ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿಯ ಕನಕ ವಿದ್ಯಾಪೀಠದಲ್ಲಿ ಮೇ 6ರಂದು ಜರಗಿದ 2025-26ನೇ ಸಾಲಿನ ‘ಕನಕ ಕೀರ್ತನ ಗಂಗೋತ್ರಿ’ ಕಾರ್ಯಕ್ರಮದಲ್ಲಿ ಪುತ್ತೂರಿನ ವಿದ್ಯಾರ್ಥಿನಿ ಪೂರ್ವಿ ಬಿ.ಎಸ್. ಬಂಬಿಲ ‘ಕನಕ ಪುರಸ್ಕಾರ’ಕ್ಕೆ ಭಾಜನರಾಗಿದ್ದಾರೆ.


ಪ್ರೊ. ಬಿ.ಎ. ವಿವೇಕ್ ರೈ ವಿಚಾರ ವೇದಿಕೆಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ನೀಡಿ ಗೌರವಿಸಲಾಯಿತು. ಪೂರ್ವಿ ಬಿ.ಎಸ್. ಬಂಬಿಲ ಅವರು ಕೂಡಿಯಾಲಬೈಲಿನ ಶಾರದಾ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ.



ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಬಿ. ಶೇಷಪ್ಪ ಬಂಬಿಲ ಮತ್ತು ನಾಗರತ್ನ ಕೆ.ಎಸ್. ದಂಪತಿಯ ಪುತ್ರಿಯಾಗಿರುವ ಪೂರ್ವಿ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ, ಮೈಸೂರು ವಿಶ್ವವಿದ್ಯಾನಿಲಯದ ಸಹ ನಿರ್ದೇಶಕ ಡಾ. ಬಿ.ಎಸ್. ಅನಿಲ್ ಕುಮಾರ್ ಬೊಮ್ಮಘಟ್ಟ, ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಡಾ. ನಾಗಪ್ಪ ಗೌಡ, ಮಂಗಳಗಂಗೋತ್ರಿ ಕುಲಸಚಿವ ಡಾ. ಗಣೇಶ್ ಸಂಜೀವ್, ಕನಕ ಸಂಶೋಧನಾ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಲೆ ಉಪಸ್ಥಿತರಿದ್ದರು.










