






ಪುತ್ತೂರು: 2025-26ನೇ ಸಾಲಿನ ಸಮಸ್ತ ಪಬ್ಲಿಕ್ ಪರೀಕ್ಷೆಯಲ್ಲಿ ಇಪ್ಪತ್ತೊಂದು ಮದ್ರಸಗಳನ್ನೊಳಗೊಂಡ ಕುಂಬ್ರ ರೇಂಜ್‌ನಲ್ಲಿ ಶೇಕಮಲೆ ಮದ್ರಸದ ವಿದ್ಯಾರ್ಥಿಗಳು ಶ್ರೇಷ್ಠ ಮಟ್ಟದ ಸಾಧನೆ ಮಾಡಿದ್ದು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.


ಐದನೇ ತರಗತಿಯ ಹಾನಿಯಾ ಹನ್ನತ್(ಕುಂಬ್ರ ಹಸನ್ ಫಕ್ರುದ್ದೀನ್ ಮತ್ತು ಮಿಸ್ರಿಯ ದಂಪತಿಗಳ ಪುತ್ರಿ) 473 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಮುಹಮ್ಮದ್ ಹನಾನ್(ಕುಂಬ್ರ ಕೆ ಹೆಚ್ ಅಬ್ದುಸ್ಸಲಾಂ ದಾರಿಮಿ ಮತ್ತು ಫೌಝಿಯಾ ದಂಪತಿಗಳ ಪುತ್ರ) 460 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಆಯಿಷತ್ ಮಿನ್‌ಷಾ(ಕುಂಬ್ರ ಸತ್ತಾರ್ ಮತ್ತು ಝುಬೈದಾ ದಂಪತಿಗಳ ಪುತ್ರಿ) 457 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಹತ್ತನೇ ತರಗತಿಯಲ್ಲಿ ಹಯಾ ಫಾತಿಮಾ(ಕುಂಬ್ರ ಹಸನ್ ಫಕ್ರುದ್ದೀನ್ ಮತ್ತು ಮಿಸ್ರಿಯ ದಂಪತಿಗಳ ಪುತ್ರಿ) 320 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.













