ಬೆಟ್ಟಂಪಾಡಿ ಗ್ರಾ.ಪಂ. ಗ್ರಂಥಾಲಯ ಸಲಹಾ ಸಮಿತಿ ಸಭೆ : ಮೇ.16ರಿಂದ ಬೆಟ್ಟಂಪಾಡಿಯಲ್ಲಿ ಗ್ರಾಮೀಣ ಬೇಸಿಗೆ ಶಿಬಿರ

0

ಬೆಟ್ಟಂಪಾಡಿ: ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಗ್ರಂಥಾಲಯ ಸಲಹಾ ಸಮಿತಿ ಸಭೆಯು ಪಂಚಾಯತ್ ಆಡಳಿತಾಧಿಕಾರಿ ಡಾ. ಧರ್ಮಪಾಲ ರವರ ಅಧ್ಯಕ್ಷತೆಯಲ್ಲಿ ಮೇ.13 ರಂದು ನಡೆಯಿತು.

ಪ್ರತಿವರ್ಷದಂತೆ  ಗ್ರಂಥಾಲಯದಲ್ಲಿ ನಡೆಸಲಾಗುವ ಗ್ರಾಮೀಣ ಬೇಸಿಗೆ ಶಿಬಿರದ  ಬಗ್ಗೆ ಚರ್ಚಿಸಲಾಯಿತು. ಮೇ.16ರಿಂದ ಶಿಬಿರ ಪ್ರಾರಂಭಿಸುವುದೆಂದು ತೀರ್ಮಾನಿಸಲಾಯಿತು. ಸಭೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೌಮ್ಯ ಎಂ.ಎಸ್, ಗ್ರಂಥಾಲಯ ಸಲಹಾ ಸಮಿತಿ ಸದಸ್ಯರುಗಳಾದ ವೆಂಕಟರಮಣ ಭಟ್ ಮಂಜುಳಗಿರಿ, ಉಮೇಶ್ ಮಿತ್ತಡ್ಕ, ಉಮಾವತಿ ಗುಮ್ಮಟೆಗದ್ದೆ, ಗ್ರಂಥಾಲಯ ಮೇಲ್ವಿಚಾರಕಿ ಪ್ರೇಮಲತಾ, ಶಕುಂತಳಾ, ಚೈತ್ರಾ , ಸೌಮ್ಯ,  ಕು. ದೀಕ್ಷಾ ಎ. ಉಪಸ್ಥಿತರಿದ್ದರು.

ಗ್ರಾಮೀಣ ಬೇಸಿಗೆ ಶಿಬಿರ
ಗ್ರಾಮೀಣ ಭಾಗದ ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನ, ಸಾಮಾನ್ಯ ಜ್ಞಾನ ಹಾಗೂ ಸಂಗೀತ, ಚಿತ್ರಕಲೆ, ಕ್ರಾಫ್ಟಿಂಗ್‌ ನಲ್ಲಿ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿನ ಬೇಸಿಗೆ ಶಿಬಿರವನ್ನು ಆಯೋಜಿಸಲಾಗುತ್ತಿದೆ. ವಿವಿಧ ಸಂಪನ್ಮೂಲ ವ್ಯಕ್ತಿಗಳು ಶಿಬಿರದ ವಿವಿಧ ದಿನಗಳಲ್ಲಿ ತರಗತಿಗಳನ್ನು ನಡೆಸಿಕೊಡಲಿದ್ದಾರೆ.

ಮೇ.16ರಿಂದ ಗ್ರಾಮೀಣ ಬೇಸಿಗೆ ಶಿಬಿರ
ಪಂಚಾಯತ್‌ ಗ್ರಂಥಾಲಯ ʻಅರಿವುʼ ಕೇಂದ್ರದ ಮೂಲಕ ಪ್ರತೀ ವರ್ಷ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸಲಾಗುತ್ತಿದ್ದು, ಈ ವರ್ಷ ಮೇ.16 ರಿಂದ ಶಿಬಿರ ನಡೆಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಶಿಬಿರದಲ್ಲಿ ಭಾಗವಹಿಸುವ ಮಕ್ಕಳು ಮುಂಚಿತವಾಗಿ ಗ್ರಂಥಾಲಯದಲ್ಲಿ ಮೇಲ್ವಿಚಾರಕರ ಮೂಲಕ ನೋಂದಣಿ ಮಾಡಿಕೊಂಡು ಮೇ.16 ರಂದು ಬೆಳಿಗ್ಗೆ ೮.೩೦ ಕ್ಕೆ ಗ್ರಾ.ಪಂ. ಸಭಾಂಗಣದಲ್ಲಿ ಹಾಜರಿರಲು ಈ ಮೂಲಕ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here