ಹೆಚ್ ಪಿ ಆರ್ ನರ್ಸಿಂಗ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ದಾದಿಯರ ದಿನಾಚರಣೆ ಸಂಭ್ರಮ-2026

0

ಪುತ್ತೂರು: ಹೆಚ್‌ಪಿಆರ್ ನರ್ಸಿಂಗ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ದಾದಿಯರ ದಿನವನ್ನು ಮೇ.13ರಂದು ಆಚರಿಸಲಾಯಿತು. ಈ ಆಚರಣೆಯಲ್ಲಿ ಜೂಲಿಯಾನಾ ಡಿಸೋಜಾ, ನರ್ಸಿಂಗ್ ಸೂಪರಿಡೆಂಟ್, ಮಹಾವೀರ ಆಸ್ಪತ್ರೆ ಪುತ್ತೂರು, ಇವರು ಉಪಸ್ಥಿತರಿದ್ದರು.

ಈ ದಿನವು ವಿಶ್ವಪ್ರಸಿದ್ಧ ನರ್ಸ್ ಹಾಗೂ ಆಧುನಿಕ ನರ್ಸಿಂಗ್ ವೃತ್ತಿಯ ಸಂಸ್ಥಾಪಕಿ ಪ್ಲೋರೆನ್ಸ್ ನೈಂಟಿಗೇಲ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುತ್ತದೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದಾದಿಯರ ಪಾತ್ರ ಅತ್ಯಂತ ಮಹತ್ವ ಎಂಬುದನ್ನು ಕಾಲೇಜು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಹಾಗೂ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ, ಉಪಪ್ರಾಂಶುಪಾಲೆ ಮತ್ತು ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಂಕಿತ ಸ್ವಾಗತಿಸಿ, ಲೋಚಿತಾ ಹಾಗೂ ತಂಡ ಪ್ರಾರ್ಥಿಸಿ, ಅಶ್ವಿತಾ ಡಿಸೋಜಾ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

LEAVE A REPLY

Please enter your comment!
Please enter your name here