ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದಡಿಯಲ್ಲಿ ವಿಶೇಷ ಅಂಚೆ ಪತ್ರ ಬಿಡುಗಡೆ

0


ಪುತ್ತೂರು: ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗದಡಿಯಲ್ಲಿ ನಂದಳಿಕೆ ಬಾಲಚಂದ್ರ ರಾವ್ ಅವರ ಮೊದಲ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ವಿಶೇಷ ಅಂಚೆ ಪತ್ರ( ಲಕೋಟೆ) ಬಿಡುಗಡೆಯ ಕಾರ್ಯಕ್ರಮವನ್ನು ಮಂಗಳೂರು ಆರ್.ಎಂ.ಎಸ್. ವಿಭಾಗೀಯ ಕಛೇರಿಯಲ್ಲಿ ಮೇ.14ರಂದು ನಡೆಯಿತು.


ಬಾಲಚಂದ್ರ ರಾವ್ ಅವರು ಸಾಧಿಸಿದ ವಿವಿಧ ಸಾಮಾಜಿಕ ಅಭಿವೃದ್ಧಿ ಹಾಗೂ ಕನ್ನಡ ಸಾಹಿತ್ಯ ಕಣ್ಮಣಿ ಕವಿ ಮುದ್ದಣ್ಣನ ನೆನಪಲ್ಲಿ ಮಾಡಿದ ಸಾರಸ್ವತ ಸೇವೆಯ ನೆನಪಿನಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಅವರ ಪತ್ನಿ ವಿಜಯಲಕ್ಷ್ಮಿಯವರ ಪ್ರಾಯೋಜಕತ್ವದಲ್ಲಿ ಪುತ್ತೂರು ಅಂಚೆ ವಿಭಾಗದ ಸಹಯೋಗದೊಂದಿಗೆ ಬಿಡುಗಡೆಗೊಳಿಸಲಾಯಿತು. ಡಾ. ಬಿ .ಎ. ವಿವೇಕ್ ರೈ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹಾಗೂ ಯಕ್ಷಗಾನ ಕಲಾ ತಜ್ಞ ಪ್ರೊ.ಪ್ರಭಾಕರ ಜೋಶಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಂಗಳೂರು ಆರ್.ಎಂ.ಎಸ್ (ಕ್ಯೂ) ವಿಭಾಗದ ಸಹಾಯಕ ಅಧೀಕ್ಷಕ ಮೆಲ್ವಿನ್ ಅರುಣ್ ಲೋಬೋ ಅತಿಥಿಯಾಗಿ ಮತ್ತು ಪುತ್ತೂರು ವಿಭಾಗೀಯ ಸಹಾಯಕ ಅಂಚೆ ಅಧೀಕ್ಷಕ ಚಂದ್ರ ನಾಯ್ಕ ಎಂ ಅಧ್ಯಕ್ಷರಾಗಿ ಭಾಗವಹಿಸಿ, ಫಿಲಾಟೆಲಿಯ ಮಹತ್ವವನ್ನು ಸಭಾಸದರಿಗೆ ವಿವರಿಸಿದರು. ಬಾಲಚಂದ್ರ ರಾವ್ ಅವರ ಪುತ್ರಿ ಸೌಜನ್ಯ ರಾವ್ ಇವರ ಪ್ರಾರ್ಥಿಸಿದರು. ಪುತ್ತೂರು ಅಂಚೆ ಇಲಾಖೆಯ ಕಾರ್ಯಾಲಯ ಸಹಾಯಕ ಉದಯೇಶ್ ಕೆದಿಲಾಯ ಕಾರ್ಯಕ್ರಮ ನಿರೂಪಿಸಿದರು. ವಿಜಯಲಕ್ಷ್ಮಿ ವಂದಿಸಿದರು. ಮಂಗಳೂರು ಪ್ರಧಾನ ಅಂಚೆ ಕಛೇರಿಯ ಸಹಾಯಕ ಅಂಚೆ ಪಾಲಕರು, ಪುತ್ತೂರು ವಿಭಾಗದ ನೌಕರರು, ಆರ್ ಎಂ ಎಸ್ ನೌಕರರು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here