ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 8ನೇ ರ್‍ಯಾಂಕ್: ಶ್ರೀ ವಿದ್ಯಾ ಜೆಡ್ಡುಗೆ ಸನ್ಮಾನ

0

ಪೆರ್ನಾಜೆ: ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 8ನೇ ಸ್ಥಾನ ಪಡೆದ ಬಂಟ್ವಾಳ ತಾಲೂಕಿನ ಬಸವನಗುಡಿ ನಿವಾಸಿ ಶ್ರೀ ವಿದ್ಯಾ ಜೆಡ್ಡು ಅವರಿಗೆ ಗೌರವಾರ್ಪಣೆ ಕಾರ್ಯಕ್ರಮ ಮೇ 11ರಂದು ನಡೆಯಿತು.

ಶ್ರೀ ಗೋಪಾಲಕೃಷ್ಣ ಸಭಾಭವನ ಮುಡಿಪಿನಲ್ಲಿ, ಪಟಿಕ್ಕಲ್ ಕೃಷ್ಣಪ್ರಸಾದ ಅವರ ಪುತ್ರ ಚಿನ್ಮಯ ರಾಮನ ಉಪನಯನ ಸಂದರ್ಭದಲ್ಲಿ ಈ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸ್ವರ ಸಿಂಚನ ಸಂಗೀತ ಕಲಾ ವಿದ್ಯಾರ್ಥಿನಿ, ಭರತನಾಟ್ಯ ಕಲಾವಿದೆ ಹಾಗೂ ಬಹುಮುಖ ಕಲಾ ಪ್ರತಿಭೆಯಾದ ಶ್ರೀ ವಿದ್ಯಾ ಜೆಡ್ಡು ಅವರನ್ನು ಅಭಿನಂದಿಸಲಾಯಿತು.ವಿದ್ಯಾರ್ಥಿನಿಯ ಅಜ್ಜ-ಅಜ್ಜಿ ಪಟಿಕ್ಕಲ್ ರಾಮಚಂದ್ರ ಭಟ್ ಮತ್ತು ದೇವಕಿ ಶಾಲು, ಪೇಟ ತೊಡಿಸಿದರು. ಶಾರದಮ್ಮ ಪೆರ್ನಾಜೆ ಹಾರ ಹಾಕಿದರು. ಗೌರಿ ಅಮ್ಮ ಜೆಡ್ಡು ಪುಸ್ತಕ ಮತ್ತು ಸ್ಮರಣಿಕೆ ನೀಡಿದರು.

ಕುಮಾರ ಪೆರ್ನಾಜೆ ಅವರ ಪರಿಕಲ್ಪನೆಯಲ್ಲಿ ನಡೆದ ವಿಶೇಷ ಸನ್ಮಾನದಲ್ಲಿ ಜೇನುತುಪ್ಪ ನೀಡಿ ಶುಭ ಹಾರೈಸಿದರು. ಸೌಮ್ಯ ಪೆರ್ನಾಜೆ ತಾಂಬೂಲ ನೀಡಿದರು.ವಿದ್ಯಾರ್ಥಿನಿಯ ತಂದೆ-ತಾಯಿ ನ್ಯಾಯವಾದಿ ಪ್ರಕಾಶ್ ನಾರಾಯಣ ಜೆಡ್ಡು, ರಮ್ಯ ಜೆಡ್ಡು, ಕೃಷ್ಣಪ್ರಸಾದ್ ಪಟಿಕ್ಕಲ್, ಸ್ವರ್ಣ ಗೌರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಅದೇ ದಿನ ತೆಂಕುತಿಟ್ಟಿನ ಪ್ರಖ್ಯಾತ ಕಲಾವಿದರಿಂದ ಯಕ್ಷಗಾನ ವೈಭವ ನಡೆಯಿತು.

LEAVE A REPLY

Please enter your comment!
Please enter your name here