






ಪುತ್ತೂರು: ಬಲ್ನಾಡು ಗ್ರಾಮದ ಉಜ್ರುಪಾದೆ ಕಾರಣಿಕದ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಶ್ರೀ ಕೊರಗಜ್ಜ ದೈವದ ವರ್ಷಾವಧಿ ಮತ್ತು ಎರಡು ಹರಕೆ ನೇಮೋತ್ಸವ ಮೇ.12ರಂದು ನಡೆಯಿತು.
ನೇಮೋತ್ಸವದಲ್ಲಿ ಊರ ಹಾಗೂ ಪರವೂರಿನ ಭಕ್ತಾದಿಗಳು ಭಾಗವಹಿಸಿದ್ದರು. ರಾತ್ರಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ಊರಿನ ಭಕ್ತಾದಿಗಳು ಹಾಗೂ ಯುವಕರು ಸಹಕರಿಸಿದರು.



ಶ್ರೀಕ್ಷೇತ್ರದಲ್ಲಿ ಪ್ರತಿ ತಿಂಗಳು ಅಗೇಲು ಸೇವೆ ನಡೆಯುತ್ತದೆ. ಪ್ರತೀ ದಿನ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಹಣ್ಣುಕಾಯಿ, ಊದುಬತ್ತಿ, ಕರ್ಪೂರ, ಸೀಯಾಳ, ಎಳ್ಳೆಣ್ಣೆ, ತೆಂಗಿನ ಎಣ್ಣೆ, ಅಮೃತ, ಕಲಶ, ಬೀಡ, ಚಕ್ಕುಲಿ, ಹೂವು, ಹಾಲು ಹಾಗೂ ಹರಕೆ ಸಂಬಂಧ ಚಿನ್ನ, ಬೆಳ್ಳಿ, ಇತರ ವಸ್ತುರೂಪದ ಕಾಣಿಕೆಗಳನ್ನು ಸ್ವೀಕರಿಸಲಾಗುತ್ತದೆ. ಕ್ಷೇತ್ರದಲ್ಲಿ ಹರಕೆ ಕೋಲಕ್ಕೆ ಅವಕಾಶವಿದ್ದು, ಪ್ರತಿದಿನ ಪ್ರಾರ್ಥನೆ (ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಸಂತಾನ ಭಾಗ್ಯ, ಕೃಷಿ, ವ್ಯಾಪಾರ, ದೂರ ಪ್ರಯಾಣ ಇತ್ಯಾದಿ) ಮತ್ತು ಇತರ ಸೇವೆಗಳು ನಡೆಯುತ್ತಿದ್ದು ಊರ ಪರವೂರ ಭಕ್ತಾಭಿಮಾನಿಗಳು ಪಾಲ್ಗೊಳ್ಳುವಂತೆ ಕ್ಷೇತ್ರದ ಆಡಳಿತ ಮೊಕ್ತೇಸರರಾಗಿರುವ ಮಾಜಿ ಸೈನಿಕ ಮತ್ತು ಡಿಸಿಆರ್ ಪುತ್ತೂರು ಇಲ್ಲಿನ ನಿವೃತ್ತ ಹಿರಿಯ ತಾಂತ್ರಿಕ ಸಹಾಯಕ ಕೆ.ಬಾಬು ಪೂಜಾರಿ ಬಲ್ನಾಡು (ಮೊಬೈಲ್: 9449895111, 8296577565) ತಿಳಿಸಿದ್ದಾರೆ.




ಭಕ್ತಾಭಿಮಾನಿಗಳಲ್ಲಿ ಮನವಿ
ಕ್ಷೇತ್ರದ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ದೈವಜ್ಞರಲ್ಲಿ ಮಾ. 14, 2026ರಂದು ಕ್ಷೇತ್ರದಲ್ಲಿ ತಾಂಬೂಲ ಚಿಂತನೆಯನ್ನು ಮಾಡಲಾಗಿದ್ದು, ಚಿಂತನೆಯಲ್ಲಿ ಕಂಡು ಬಂದಂತೆ ಕ್ಷೇತ್ರಕ್ಕೆ ಸಂಬಂಧಪಟ್ಟ ಗುಳಿಗ ದೈವದ ಸಾನಿಧ್ಯವನ್ನು ಪ್ರತಿಷ್ಠಾಪಿಸಲು ಮತ್ತು ಕೊರಗಜ್ಜ ದೈವದ ಸಾನಿಧ್ಯವನ್ನು ಜೀರ್ಣೋದ್ದಾರ ಮಾಡಲು ಕಂಡುಬಂದಿರುತ್ತದೆ. ಭಕ್ತರ ಅನುಕೂಲಕ್ಕಾಗಿ ಕ್ಷೇತ್ರದ ಸುತ್ತಲೂ ಸುತ್ತುಪೌಳಿ, ಪಾಕಶಾಲೆ ಮತ್ತು ಕಛೇರಿಯನ್ನು ನಿರ್ಮಿಸುವುದು ಹಾಗೂ ಕ್ಷೇತ್ರದ ಸುತ್ತಲೂ ಆವರಣ ಗೋಡೆಯನ್ನು ನಿರ್ಮಿಸಬೇಕೆಂದು ಕಂಡುಬಂದಿರುತ್ತದೆ. ಹಾಗೆಯೇ ಭಕ್ತರಿಗೆ ಬೇಕಾದ ಇತರ ಸೌಲಭ್ಯಗಳನ್ನು ನಿರ್ಮಿಸಲು ಸುಮಾರು 40 ಲಕ್ಷ ರೂ.ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯವನ್ನು ನಡೆಸಲು ತೀರ್ಮಾನಿಸಲಾಗಿದೆ. ಊರ ಪರವೂರ ಭಕ್ತಾಭಿಮಾನಿಗಳು ತನು-ಮನ-ಧನಗಳನ್ನು ನೀಡಿ ಸಹಕರಿಸಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕಾಗಿ ವಿನಂತಿ.
-ಬಾಬು ಪೂಜಾರಿ, ಆಡಳಿತ ಮೊಕ್ತೇಸರರು










