ವರ್ಗಾವಣೆಗೊಂಡ ಸಂತ ಫಿಲೋಮಿನಾ ಪ್ರೌಢಶಾಲಾ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರಿಗೆ ಶಾಲಾ ಹಿರಿಯ ವಿದ್ಯಾರ್ಥಿ ಸಂಘದಿಂದ ಶುಭವಿದಾಯ

0

ಪುತ್ತೂರು: ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲಾ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ವಾಮಂಜೂರ್ ಚರ್ಚ್‌ಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರನ್ನು ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಹೂಗುಚ್ಚ ನೀಡಿ ಶುಭ ಹಾರೈಸಿ ವಿದಾಯ ಕೋರಲಾಯಿತು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಜಯಕುಮಾರ್ ರೈ, ಮುಖ್ಯಗುರುಗಳಾದ ವಂ| ಮ್ಯಾಕ್ಸಿಂ ಡಿಸೋಜಾ, ಉಪಾಧ್ಯಕ್ಷರಾದ ಜಾನ್‌ಕುಟಿನಾ, ಮಾಜಿ ಅಧ್ಯಕ್ಷರಾದ ಎನ್. ಕೆ. ಜಗನ್ನಿವಾಸ್ ರಾವ್, ಕಾರ್ಯದರ್ಶಿ ಬೆನೆಟ್ ಮೊಂತೇರೊ, ಸದಸ್ಯರುಗಳಾಗಿರುವ ಲಾರೆನ್ಸ್ ಗೊನ್ಸಲ್ವಿಸ್, ಸೋಮಶೇಖರ್ ರೈ, ಡಾ|ಅಮೃತ ಮಲ್ಲ, ದಿಕ್ಸನ್ ತಾವ್ರೋ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here