






ಬೆಟ್ಟಂಪಾಡಿ: ಇಲ್ಲಿಯ ಹಯಾತ್‌ನಗರ ರೆಂಜ ಖುವ್ವತುಲ್ ಇಸ್ಲಾಂ ಸೆಕಂಡರಿ ಮದ್ರಸ ವಿದ್ಯಾರ್ಥಿಗಳ ಸಂಘಟನೆ ಸುನ್ನೀ ಬಾಲ ಸಂಘ (ಎಸ್‌ಬಿಎಸ್) ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.





ಮದ್ರಸದ ಮುಖ್ಯ ಅಧ್ಯಾಪಕರಾದ ಹನೀಫ್ ಸಖಾಫಿ ಪೇರಮೊಗರುರವರ ಅಧ್ಯಕ್ಷತೆಯಲ್ಲಿ ನಡೆಯಿತು. ಖತೀಬ್ ಹಾಗೂ ಮುದರ್ರಿಸ್ ಯಾಸಿರ್ ಹಿಕಮಿ ಅಲ್ ಅಫ್ಲಲಿ ಉದ್ಘಾಟಿಸಿ ವಿದ್ಯಾರ್ಥಿಗಳ ಪ್ರತಿಭೆ, ನಾಯಕತ್ವ ಗುಣದ ಬಗ್ಗೆ ತಿಳಿಸಿದರು.
ನಂತರ ನೂತನ ಸಮಿತಿಗೆ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ವಾಸಿಲ್ ಮುಬಾರಕ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುರ್ರಹೀಂ, ಕೋಶಾಧಿಕಾರಿಯಾಗಿ ಮುಹಮ್ಮದ್ ನವಾಲ್, ಉಪಾಧ್ಯಕ್ಷರಾಗಿ ಮುಹಮ್ಮದ್ ಶಮ್ಮಾಸ್, ಮುಹಮ್ಮದ್ ಅಯಾನ್ ಜತೆ ಕಾರ್ಯದರ್ಶಿಗಳಾಗಿ ಮುಹಮ್ಮದ್ ಅನೀಸ್, ಅಬ್ದುಲ್ ವಾರಿಸ್, ಕ್ಯಾಂಪಸ್ ನಾಯಕರಾಗಿ ಮುಹಮ್ಮದ್ ಕಾಮಿಲ್, ಮುಬಸ್ಸಿಲ್, ಫಾತಿಮಾ ಸನಾ, ಆಯಿಶಾ ’ಮುಹಾಳರ’ ನಿರ್ವಹಣೆಗಾಗಿ ಅನೀಸ್, ಶಮ್ಮಾಸ್, ಆಫಿಯಾ, ಸ್ವಾಲಿಹಾ ತಾಜುಲ್ ಉಲಮಾ ಗ್ರಂಥಾಲಯದ ನಿರ್ವಾಹಕರಾಗಿ ನೂಹಾ, ಆಸಿಯಾ, ಹಾಗೂ ಸ್ವಚ್ಛತಾ ಉಸ್ತುವಾರಿಗಳಾಗಿ ಮಿಸ್ಬಾಹ್, ನಿಬ್ರಾಸ್, ಅಲ್ಫಾ, ಹೈಬಾ ಆರೋಗ್ಯ ವಿಚಾರಣೆಗೆ ಮಾಜಿದಾ, ಇಶ್ಫಾರವರನ್ನು ಆಯ್ಕೆ ಮಾಡಲಾಯಿತು. ಅಧ್ಯಾಪಕ ಮುಜೀಬ್ ಸಅದಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ಅಬ್ದುರ್ರಹೀಂ ವಂದಿಸಿದರು.










