ಸುದಾನ ಪದವಿ ಪೂರ್ವ ಕಾಲೇಜಿನಲ್ಲಿ ” ಸ್ವಾಗತ್ ”  ಪ್ರಾರಂಭೋತ್ಸವ, ಮಾಹಿತಿ ಕಾರ್ಯಗಾರ

0

*ವ್ಯಕ್ತಿತ್ವ ವಿಕಾಸ, ಆತ್ಮವಿಶ್ವಾಸ, ಸಾಮಾಜಿಕ ಕೌಶಲ್ಯ, ಜೀವನ ಮೌಲ್ಯ ಬೆಳೆಸಿ-ಸತೀಶ್ ಭಟ್

*ಮಕ್ಕಳ ಕಲಿಕೆಯಲ್ಲಿ ಪೋಷಕರ ಜವಾಬ್ದಾರಿಯೂ ಮಹತ್ತರವಾಗಿದೆ-ಡಾ|ಪೀಟರ್ ಪ್ರಭಾಕರ್

 ಪುತ್ತೂರು : ಸುದಾನ ಸಮೂಹ ಶಿಕ್ಷಣ ಸಂಸ್ಥೆಗಳ ಸುದಾನ ಪದವಿ‌ ಪೂರ್ವ ಕಾಲೇಜಿನ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪ್ರಾರಂಭೋತ್ಸವ “ಸ್ವಾಗತ್” ಹಾಗೂ ಮಾಹಿತಿ ಕಾರ್ಯಗಾರವು ಮೇ 20 ರಂದು ಕಾಲೇಜಿನ ಎಡ್ವರ್ಡ್ ಹಾಲ್ ನಲ್ಲಿ ನಡೆಯಿತು.

ವ್ಯಕ್ತಿತ್ವ ವಿಕಾಸ, ಆತ್ಮವಿಶ್ವಾಸ, ಸಾಮಾಜಿಕ ಕೌಶಲ್ಯ, ಜೀವನ ಮೌಲ್ಯ ಬೆಳೆಸಿ-ಸತೀಶ್ ಭಟ್:
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಮಕುಂಜ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸತೀಶ್ ಭಟ್ ಬಿಳಿನೆಲೆಯವರು ದೀಪ ಬೆಳಗಿಸಿ ಉದ್ಘಾಟಿಸಿ,   ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ವ್ಯಕ್ತಿತ್ವ ವಿಕಾಸ, ಆತ್ಮವಿಶ್ವಾಸ, ಭಾವನಾತ್ಮಕ ಸಮತೋಲನ, ಸಾಮಾಜಿಕ ಕೌಶಲ್ಯಗಳು ಹಾಗೂ ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪರಿಶ್ರಮ, ಆಸಕ್ತಿ, ಗುರಿ ಸಾಧನೆಗೆ ಇರುವ ಬದ್ಧತೆ ಹಾಗೂ ಪೋಷಕರೊಂದಿಗೆ ಉತ್ತಮ ಒಡನಾಟ ಯಶಸ್ಸಿನ ಪ್ರಮುಖ ಅಂಶಗಳಾಗಿವೆ ಎಂದರು. 

ಮಕ್ಕಳ ಕಲಿಕೆಯಲ್ಲಿ ಪೋಷಕರ ಜವಾಬ್ದಾರಿಯೂ ಮಹತ್ತರವಾಗಿದೆ-ಡಾ|ಪೀಟರ್ ಪ್ರಭಾಕರ್:
ಸಂಸ್ಥೆಯ ಸಂಚಾಲಕರಾದ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಶಿಕ್ಷಣದ ಮುಖ್ಯ ಉದ್ದೇಶ ಕೇವಲ ಅಂಕ ಗಳಿಕೆಯಾಗಿರದೆ, ಉತ್ತಮ ವ್ಯಕ್ತಿತ್ವ ಮತ್ತು ಮೌಲ್ಯಯುತ ಜೀವನ ನಿರ್ಮಾಣವಾಗಿರಬೇಕು. ವಿದ್ಯಾರ್ಥಿಗಳು ತಿಳುವಳಿಕೆ, ಶಿಸ್ತು, ಪರಿಶ್ರಮ ಮತ್ತು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಶಿಕ್ಷಣ ಸಾರ್ಥಕವಾಗುತ್ತದೆ. ಮಕ್ಕಳ ಕಲಿಕೆಯಲ್ಲಿ ಪೋಷಕರ ಜವಾಬ್ದಾರಿಯೂ ಮಹತ್ತರವಾಗಿದೆ ಎಂದರು. 

ಆಡಳಿತ ಮಂಡಳಿಯ ಸದಸ್ಯರಾದ ಶರ್ಮಿಳಾ ಗ್ಲಾಡಿಸ್,   ಸುಶಾಂತ್ ಹಾರ್ವಿನ್  ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜಿನ ಕೋಶಾಧಿಕಾರಿ  ಆಸ್ಕರ್ ಆನಂದ್  ಉಪಸ್ಥಿತರಿದ್ದರು. ಪ್ರಾಂಶುಪಾಲ ಸುಪ್ರೀತ್ ಕೆ.ಸಿ. ಸ್ವಾಗತಿಸಿದರು. ಉಪನ್ಯಾಸಕಿ ಲತಾಶ್ರೀ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ನವ್ಯ ವಂದಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥನೆ ನೆರವೇರಿಸಿದರು.

LEAVE A REPLY

Please enter your comment!
Please enter your name here