ಗ್ರಾಹಕರಿಗೆ ಮತ್ತೆ ಶಾಕ್: ಇಂದಿನಿಂದ ಇಂಧನ ದರ ದಿಢೀರ್ ಏರಿಕೆ!

0

ಪುತ್ತೂರು: ವಾಹನ ಸವಾರರಿಗೆ ಹಾಗೂ ಜನಸಾಮಾನ್ಯರಿಗೆ ತೈಲ ಕಂಪನಿಗಳು ಮತ್ತೊಂದು ಶಾಕ್ ನೀಡಿವೆ. ಇಂದಿನಿಂದ ಜಾರಿಗೆ ಬರುವಂತೆ ಇಂಧನ (ಪೆಟ್ರೋಲ್ ಮತ್ತು ಡೀಸೆಲ್) ದರದಲ್ಲಿ ಮತ್ತೆ ಏರಿಕೆ ಮಾಡಲಾಗಿದೆ.ಪೆಟ್ರೋಲ್‌ 0.87 ಪೈಸೆ ಮತ್ತು ಡೀಸೆಲ್‌ ಬೆಲೆಯಲ್ಲಿ 0.97 ಪೈಸೆ ಲೀಟರ್‌ ಗೆ ಏರಿಕೆ ಕಂಡಿದೆ.


ಕಳೆದ 10 ದಿನಗಳಿಂದ ತೈಲ ಬೆಲೆಯಲ್ಲಿ 3ನೇ ಬಾರಿ ಏರಿಕೆ ಕಂಡುಬಂದಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆಯಲ್ಲಿ ಉಂಟಾಗಿರುವ ಏರಿಳಿತ ಹಾಗೂ ರೂಪಾಯಿ ಮೌಲ್ಯದ ಕುಸಿತವೇ ಈ ಬೆಲೆ ಏರಿಕೆಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.


ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ, ಇಂಧನ ದರ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಾರಿಗೆ ವೆಚ್ಚ ಹೆಚ್ಚಾಗುವುದರಿಂದ ಮುಂಬರುವ ದಿನಗಳಲ್ಲಿ ದಿನಸಿ ಹಾಗೂ ತರಕಾರಿ ಬೆಲೆಗಳೂ ಕೂಡ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.

LEAVE A REPLY

Please enter your comment!
Please enter your name here