







ಪುತ್ತೂರು: ಕುರಿಯ ಗ್ರಾಮದ ಅಮ್ಮುಂಜ ಪಾಲಿಂಜೆ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ದುರ್ಗಾಪೂಜೆ, ರಂಗಪೂಜೆ ಹಾಗೂ ಭಜನಾ ಕಾರ್ಯಕ್ರಮ ಮೇ 23 ರಂದು ನೆರವೇರಿತು.



ಶ್ರೀ ಕ್ಷೇತ್ರದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ಬೆಳಿಗ್ಗೆ ಗಣಪತಿ ಹವನ, ನಾಗತಂಬಿಲ, ದೈವಗಳಿಗೆ ತಂಬಿಲ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ದೇವರಿಗೆ ಕಲಶಾಭಿಷೇಕ ನಡೆಯಲಿರುವುದು. ಶ್ರೀ ಮಹಾವಿಷ್ಣುಮೂರ್ತಿ ಮಹಿಳಾ ಭಜನಾ ಮಂಡಳಿ ಪಾಲಿಂಜೆ ಇವರಿಂದ ಭಜನಾ ಕಾರ್ಯಕ್ರಮ ನೆರವೇರಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಾಯಂಕಾಲ ಕುಣಿತ ಭಜನಾ ಕಾರ್ಯಕ್ರಮ (ಶ್ರೀ ಮಹಮ್ಮಾಯಿ ಕುಣಿತ ಭಜನಾ ಮಂಡಳಿ ಮಾಲೆತ್ತೋಡಿ ಕೆಯ್ಯೂರು ಹಾಗೂ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಉದಯಗಿರಿ, ಮುಂಡೂರು) ಇವರಿಂದ ನಡೆಯಿತು.




ಸಂಪೂರ್ಣ ಸಹಕಾರ
ಈ ಧಾರ್ಮಿಕ ಕಾರ್ಯದಲ್ಲಿ ಅಮ್ಮುಂಜ ಶ್ರೀ ಮಹಾ ವಿಷ್ಣುಮೂರ್ತಿ ನವೋದಯ ಸ್ವ-ಸಹಾಯ ಗುಂಪು ಪಾಲಿಂಜೆ, ಅಮ್ಮುಂಜ ಶ್ರೀ ತುಳಸಿ ನವೋದಯ ಸ್ವ-ಸಹಾಯ ಗುಂಪು ಪಾಲಿಂಜೆ, ಅಮ್ಮುಂಜ ಶ್ರೀ ಸರಸ್ವತಿ ನವೋದಯ ಸ್ವ-ಸಹಾಯ ಗುಂಪು ಪಾಲಿಂಜೆ, ಅಮ್ಮುಂಜ ಶ್ರೀ ಮೈತ್ರೇಯಿ ಸ್ವ-ಸಹಾಯ ಸಂಘ, ಪಾಲಿಂಜೆ ಶ್ರೀ ಶನ್ಯೇಶ್ವರ ಪೂಜಾ ಸಮಿತಿ, ಪಾಲಿಂಜೆ ಶ್ರೀ ಮಹಾ ವಿಷ್ಣುಮೂರ್ತಿ ಮಹಿಳಾ ಭಜನಾ ಮಂಡಳಿ, ಪಾಲಿಂಜೆ ಶ್ರೀ ವಿಷ್ಣುಸಂಜೀವಿನಿ ಸಂಘ, ಪಂಜಳ ಜೈ ಶ್ರೀರಾಮ್ ಗೆಳೆಯರ ಬಳಗ, ಪಂಜಳ ಶ್ರೀ ಷಣ್ಮುಖ ಗೆಳೆಯರ ಬಳಗದವರ ಸಂಪೂರ್ಣ ಸಹಕಾರವಿತ್ತು.ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಅರ್ಚಕರಾದ ಶ್ರವಣ್ ಭಟ್ ಸಹಕರಿಸಿದರು.

ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವಜಿತ್ ಪೂಜಾರಿ ಅಮ್ಮುಂಜ, ಪ್ರಧಾನ ಅರ್ಚಕ ಸೂರ್ಯಪ್ರಕಾಶ ಅಂಗಿತ್ತಾಯ, ಸದಸ್ಯರಾದ ರಮೇಶ್ ಅಂಗಿತ್ತಾಯ, ಗುರುಪ್ರಸಾದ್ ಮಾದೇರಿ, ಹೊನ್ನಪ್ಪ ನಾಯ್ಕ, ನಿರಂಜನ್ ಶೆಟ್ಟಿ, ನಾರಾಯಣ ಮಣಿಯಾಣಿ ಇಡಬೆಟ್ಡು, ಶ್ರೀಮತಿ ನಳಿನಾಕ್ಷಿ ಇಡಬೆಟ್ಟು, ಶ್ರೀಮತಿ ಪೂರ್ಣಿಮಾ ಇಡಬೆಟ್ಟು ಸಹಿತ ನೂರಾರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.










