ಶ್ರೀ ಸತ್ಯಸಾಯಿ ಸೇವಾ ಮಂದಿರದಲ್ಲಿ 63ನೇ ಉಚಿತ ನೇತ್ರ ಚಿಕಿತ್ಸಾ ಶಿಬಿರ

0

ಪುತ್ತೂರು: ಶ್ರೀಸತ್ಯಸಾಯಿ ಸೇವಾ ಸಮಿತಿ ಪುತ್ತೂರು ಮತ್ತು ಅಶ್ವಿನ್ ನೇತ್ರ ಚಿಕಿತ್ಸಾಲಯದ ಸಹಯೋಗದಲ್ಲಿ 63ನೇ ಉಚಿತ ನೇತ್ರ ಚಿಕಿತ್ಸಾ ಶಿಬಿರವು ಮೇ.24ರಂದು ಕೋರ್ಟ್‌ರಸ್ತೆಯ ಶ್ರೀ ಸತ್ಯಸಾಯಿ ಮಂದಿರದಲ್ಲಿ ನಡೆಯಿತು. ಅಶ್ವಿನ್ ನೇತ್ರ ಚಿಕಿತ್ಸಾಲಯ ಹಾಗೂ ಅಪ್ಟಿಕಲ್ಸ್‌ನ ತಜ್ಞ ವೈದ್ಯ ಡಾ.ಅಶ್ವಿನ್ ದಂಪತಿ ದೀಪ ಬೆಳಗಿಸಿ ಉದ್ಘಾಟಿಸಿದರು.


ಎಲ್ಲದಕ್ಕೂ ಕನ್ನಡ ಪರಿಹಾರವಲ್ಲ:

ಡಾ. ಅಶ್ವಿನ್ ಅವರು ಮಾತನಾಡಿ ದೃಷ್ಟಿಯ ಸಮಸ್ಯೆ ಸಾಮಾನ್ಯವಾಗಿ 40 ವರ್ಷದ ನಂತರ ಬರುತ್ತದೆ. ದೇಹದ ವಯಸ್ಸು ಹೆಚ್ಚಾದಂತೆ ಕಣ್ಣಿನಲ್ಲಿ ಪೊರೆ ಬರುತ್ತದೆ. ಇದಕ್ಕೆ ಔಷಧಿ ಇಲ್ಲ. ಶಸ್ತ್ರಚಿಕಿತ್ಸೆ ಮಾಡಬೇಕು. ಕೆಲವೊಂದು ವಿಷಯದಲ್ಲಿ ಎಲ್ಲದಕ್ಕೂ ಕನ್ನಡಕ ಪರಿಹಾರವಲ್ಲ ಎಂದ ಅವರು ಕಣ್ಣಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ವಿವರಿಸಿದ ಅವರು ಶಿಬಿರದಲ್ಲಿ ಪಾಲ್ಗೊಂಡು ಕಣ್ಣನ್ ಕಾಂಪ್ಲೆಕ್ಸ್‌ನಲ್ಲಿರುವ ಅಶ್ವಿನ್ ಕ್ಲಿನಿಕ್‌ಗೆ ಬಂದವರಿಗೆ ಶುಲ್ಕವಿಲ್ಲ ಎಂದು ಹೇಳಿದರು.


ಸೇವೆಯ ಜೊತೆ ಭಗವಂತನ ಅನುಗ್ರಹ:
ಸತ್ಯ ಸಾಯಿ ಸಮಿತಿ ಜಿಲ್ಲಾಧ್ಯಕ್ಷ ಪ್ರಸನ್ನ ಭಟ್ ಅವರು ಮಾತನಾಡಿ ಸತ್ಯಸಾಯಿ ಸೇವಾ ಸಂಸ್ಥೆ 100ಕ್ಕೂ ಅಧಿಕ ದೇಶಗಳಲ್ಲಿದ್ದು ಸೇವೆ ನೀಡುತ್ತಿದೆ. ಇದು ಆಧ್ಯಾತ್ಮಿಕ ಸೇವಾ ಸಂಸ್ಥೆ. ಇಲ್ಲಿ ಸೇವೆಯ ಜೊತೆಗೆ ಭಗವಂನತ ಅನುಗ್ರಹವೂ ಸಿಗಲಿದೆ ಎಂದರು.


ಸೇವೆ ಇಲ್ಲದೆ ಬೇರೆನು ಬೇಡ:
ಬೈಂದೂರು ಡಾ.ಪ್ರಭಾಕರ ರಾವ್ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ಸತ್ಯಸುಂದರ ರಾವ್ ಸ್ವಾಗತಿಸಿ ಮಾತನಾಡಿ ಈ ಸೃಷ್ಟಿ ಸರಿ ಇದೆ. ದೃಷ್ಟಿ ಸರಿ ಇಲ್ಲ. ಕನ್ನಡಕ ಹಾಕಿದಾಗ ಎಲ್ಲಾ ಸರಿ ಹೋಗುತ್ತದೆ. ಭಗವಂತನು ಹೇಳಿದಂತೆ ಸೇವೆ ಇಲ್ಲದೆ ಬೇರೆನು ಬೇಡ ಎಂದರು. ನಿವೃತ್ತ ನೇತ್ರಾಧಿಕಾರಿ ಶಾಂತರಾಜ್ ಶಿಬಿರದ ಮಾಹಿತಿ ನೀಡಿದರು. ಕೆಲವರಿಗೆ ಇವತ್ತು ಕನ್ನಡ ಕೊಡುತ್ತೇವೆ ಇನ್ನು ಕೆಲವರಿಗೆ ಮಾಡಿ ಕೊಡಬೇಕಾಗಿದೆ. ಅವರಿಗೆ ಜೂ.7ಕ್ಕೆ ಕನ್ನಡ ಕೊಡುತ್ತೇವೆ. ಪೊರೆ ಬಂದವರಿಗೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಅದೇ ರೀತಿ ಮಂಗಳೂರಿಗೆ ಹೋಗಲು ಬಯಸದವರಿದ್ದು, ಅವರಿಗೆ ವಿಮಾಸೌಲಭ್ಯವಿದ್ದರೆ ಪುತ್ತೂರು ಅರುಣಾ ಕಲಾ ಮಂದಿರದ ಬಳಿಯ ಅಶ್ವಿನ್ ಕಣ್ಣಿನ ಚಿಕಿತ್ಸಾ ಕೇಂದ್ರದಲ್ಲಿ ಶಸ್ತ್ರಚಿಕಿತ್ಸೆ ಮಾಡಬಹುದು ಎಂದವರು ಮಾಹಿತಿ ನೀಡಿದರು. ಅಶ್ವಿನ್ ಕಣ್ಣಿನ ಚಿಕಿತ್ಸಾಲಯದ ಆಡಳಿತ ವೈದ್ಯ ಡಾ.ವಿಕಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಶಾಂತಿ ಬಿ ಅವರು ಪ್ರಾರ್ಥಿಸಿದರು. ಬೈಂದೂರು ಮೆಮೋರಿಯಲ್ ಟ್ರಸ್ಟ್ ನ ಅಧ್ಯಕ್ಷ ಡಾ.ಸತ್ಯಸುಂದರ ರಾವ್ ಸ್ವಾಗತಿಸಿದರು. ಮಹಿಳಾ ಆದ್ಯಾತ್ಮಿಕ ಸಂಯೋಜಕಿ ಚಿತ್ರಾ ಆರ್ ರೈ ವಂದಿಸಿದರು. ಸಂಚಾಲಕ ದಯಾನಂದ ಕೆ ಎಸ್ ಕಾರ್ಯಕ್ರಮ ನಿರೂಪಿಸಿದರು. ಹಿರಿಯರಾದ ಪದ್ಮನಾಭ ನಾಯಕ್ ಸಹಕರಿಸಿದರು.

LEAVE A REPLY

Please enter your comment!
Please enter your name here