






ಪುತ್ತೂರು: ಭಾರತದ 9 ವಿವಿಧ ರಾಜ್ಯಗಳ ತೋಟಗಾರಿಕಾ ಇಲಾಖೆಯ ವಿಜ್ಞಾನಿಗಳು ಮತ್ತು ಅಧಿಕಾರಿಗಳ ಕೃಷಿ ಅಧ್ಯಯನ ಸಂದರ್ಶನ ಹಾಗೂ ಮಾಹಿತಿ ಕಾರ್ಯಾಗಾರ ಮೇ.21ರಂದು ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ಜರಗಿತು.


ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಒಡಿಶಾ, ಛತ್ತೀಸ್ಗಢ, ಗುಜರಾತ್, ಜಾರ್ಖಂಡ್ ಹಾಗೂ ಕರ್ನಾಟಕದ ವಿವಿಧ ಕೃಷಿ ಮತ್ತು ತೋಟಗಾರಿಕಾ ಅಭಿವೃದ್ಧಿ ಇಲಾಖೆಗಳ ಹಾಗೂ ಸಂಶೋಧನಾ ಕೇಂದ್ರಗಳ 50ಕ್ಕೂ ಹೆಚ್ಚು ಮಂದಿ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ಪುತ್ತೂರಿನ ಐಸಿಎಆರ್ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ 3 ದಿನಗಳ ವಿಶೇಷ ತರಬೇತಿಯಲ್ಲಿ ಭಾಗವಹಿಸಿದ್ದರು. ವೈಜ್ಞಾನಿಕ ಗೇರು ತೋಟದಲ್ಲಿ ಪ್ರಾತ್ಯಕ್ಷಿಕೆ ಹಾಗೂ ಅನುಭವವನ್ನು ಪಡೆಯುವ ನಿಟ್ಟಿನಲ್ಲಿ ವೈಜ್ಞಾನಿಕ ಗೇರು ಕೃಷಿಕ ಕಡಮಜಲು ಸುಭಾಸ್ ರೈಯವರ ಗೇರು ತೋಟದ ಸಂದರ್ಶನ ನಡೆದಿದೆ.



ಇದೇ ವೇಳೆ ಕಡಮಜಲು ಸುಭಾಸ್ ರೈಯವರ ಜೊತೆ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಗೇರು ಕೃಷಿಯ ಬಗ್ಗೆ ಸಂವಾದ ನಡೆಸಿದರು. ಗೇರು ಕೃಷಿಯಲ್ಲಿ ವಿವಿಧ ಅಂತರದ ನಾಟಿ ಪದ್ಧತಿ, ಗೇರು ತೋಟದ ನಿರ್ವಹಣೆ, ತಳಿಗಳ ಅಳವಡಿಕೆ ಕುರಿತು ಅಧ್ಯಯನ ನಡೆಸಿದರು. ಸಮಗ್ರ ಕೃಷಿಕರಾದ ಸುಭಾಸ್ ರೈಯವರ ಇತರ ಬೆಳೆಗಳಾದ ಕೊಕ್ಕೋ, ರಬ್ಬರ್, ತೆಂಗು, ಅಡಿಕೆ ಕೃಷಿಗಳ ಬಗ್ಗೆ ಅವರು ಮಾಹಿತಿ ಪಡೆದುಕೊಂಡರು.
ಜಾರ್ಖಂಡ್ನ ಕೃಷಿ ವಿಶ್ವವಿದ್ಯಾನಿಲಯದ ತೋಟಗಾರಿಕಾ ವಿಭಾಗದ ಪ್ರಧಾನ ವಿಜ್ಞಾನಿ, ಸಹಪ್ರಾಧ್ಯಾಪಕ ಅಬ್ದುಲ್ ಮಜೀದ್ ಅನ್ಸಾರಿ, ಕೇರಳದ ನೆಡುಂಕಂಡೊಮ್ ಕೃಷಿ ಭವನದ ಕೃಷಿ ಅಧಿಕಾರಿ ಆದರ್ಶ್ ಪಿ.ವಿ., ಬೆಳಗಾವಿ ತೋಟಗಾರಿಕಾ ಇಲಾಖೆಯ ಸಹಾಯಕ ಅಧಿಕಾರಿ ಅಡಿವೆಪ್ಪ ಸಿದ್ದಣ್ಣವರ್, ಕೇರಳದ ಕಣ್ಣೂರಿನ ಕೃಷಿ ಸಹಾಯಕ ಅಜೇಶ್ಕುಮಾರ್, ಕಣಬರ್ಗಿಯ ತೋಟಗಾರಿಕಾ ಸಹಪ್ರಾಧ್ಯಾಪಕ ಅನಸೂಬಾಯಿ ಹೊಸಗೌಡರ್, ಪಡಣ್ಣಕಾಡ್ ಕೃಷಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅನೂಪ್ ಆರ್ಎಲ್, ಕಣ್ಣೂರಿನ ಅನುಪಮ ಚಂದ್ರನ್, ಕೇರಳದ ಪ್ಲಾಂಟೇಷನ್ ಕಾರ್ಪೋರೇಷನ್ನ ಅರುಣ್ ಕುಮಾರ್ ಜಿ., ಅಯನ ಪಿ.ವಿ., ಫಾತಿಮಾ ಶಿಂಜಿ, ಕೊಚ್ಚಿ ಡಿಸಿಸಿಡಿಯ ಕೃಷಿ ಸಹಾಯಕ ಗ್ರಿಸನ್ ಪೌಲ್, ರಾಜಪುರಂ ಕೃಷಿ ಭವನದ ಹನೀನಾ ಕೆ.ಎಂ., ಮಹಾರಾಷ್ಟ್ರ ತೋಟಗಾರಿಕಾ ಇಲಾಖೆಯ ಸಹಾಯಕ ಕೃಷಿ ಅಧಿಕಾರಿಗಳಾದ ರುಷಿಕೇಶ್ ವಾಘ್, ಸತೀಶ್ ಕುಂಬಾರ್, ಬಾರಾಮತಿ ಎನ್ಐಎಎಸ್ಎಂ ನ ಪ್ರಧಾನ ವಿಜ್ಞಾನಿಗಳಾದ ಜಿತೇಂದ್ರ ಕುಮಾರ್ ಎಚ್. ಕಡಂ, ಸಂಗ್ರಾಮ್ ಬಿ. ಚವನ್. ಕಲಬುರ್ಗಿಯ ಎಸ್ಎಡಿಎಚ್ನ ಸಹಾಯಕ ತೋಟಗಾರಿಕಾ ಅಧಿಕಾರಿಕಾರಿ ಖಾಂದಡೆ ಸುರೇಶ್, ರಾಯ್ಪುರ ಮಂಜುಲತಾ, ಬೆಳ್ತಂಗಡಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಮಂಜುನಾಥ್ ಎಚ್.ಎನ್., ಕುಂಟಾರು ಗೇರು ಅಭಿವೃದ್ದಿ ಅಧಿಕಾರಿ ಮನು ನರೇಂದ್ರನ್, ಮೀನಾ ಮಾಂಡವಿ, ಕೇರಳ ಪ್ಲಾಂಟೇಷನ್ ಕಾರ್ಪೋರೇಷನ್ನ ಮೊಹಮ್ಮದ್ ರಿಯಾಸ್, ಸಜೀವ್, ಬೆಳಗಾವಿ ಬಯೋಸೆಂಟರ್ನ ಸಹಾಯಕ ನಿರ್ದೇಶಕ ಮೋಹನ್ ಗಾಯಕ್ವಾಡ್, ಛತ್ತೀಸ್ಗರ್ನ ವಿಜ್ಞಾನಿ ಪಂಕಜ್ ಭಾರ್ಗವ್, ತಮಿಳುನಾಡಿನ ಆರ್. ನೀಲಾವತಿ, ಕುಂಡ್ಕೋಲ್ನ ರಾಜೇಶ್ ಚಂದರಗಿ, ಛತ್ತೀಸ್ಗರ್ನ ರಾಮ್ಚಂದ್ರ ರಾವ್, ಒಡಿಶಾದ ರಾಮಜಯಮ್ ದೇವರಾಜನ್, ರವೀಂದ್ರನಾಥ ನಾಯ್ಕ್, ಆಂಧ್ರಪ್ರದೇಶದ ನೆಲ್ಲೂರು ಕೆವಿಕೆಯ ಶ್ರೀನಿವಾಸ ರಾಜು, ಗುಜರಾತ್ನ ಸಂದೀಪ್ ಜಿ., ಬೀದರ್ನ ತೋಟಗಾರಿಕಾ ಅಧಿಕಾರಿಗಳಾದ ಶಿವಪ್ರಕಾಶ್ ಎಂ., ಶಿವಾನಂದ್, ಶಿವಪುತ್ರ ಪಾಟೀಲ್, ಮೈಸೂರಿನ ಸಿದ್ದಪ್ಪ ಆರ್., ವೈಎಸ್ಆರ್ ತೋಟಗಾರಿಕಾ ವಿವಿಯ ಸ್ರವಂತಿ ಗುಂಟುಪಲ್ಲಿ, ಕೇರಳದ ಕೃಷಿ ಅಧಿಕಾರಿ ಶ್ರೀಲಕ್ಷ್ಮಿ ಕೆ.ಬಿ., ದ.ಕ. ಕೃಷಿ ಸಹಾಯಕ ನಿರ್ದೇಶಕ ಶ್ರೀಕುಮಾರ್, ಚೆಂಗಳ ಕೃಷಿಭವನ ಅಧಿಕಾರಿ ಸುಮಾ ಮಾಧವನ್, ಸುಮೇಶ್ ಕೆ.ವಿ., ಕಣ್ಣೂರಿನ ಕೃಷಿ ಅಧಿಕಾರಿ ಸುನಿಲ್ ಕುಮಾರ್, ಒಡಿಶಾದ ವಿಜ್ಞಾನಿ ಸುಸಾಂತಾ ಕುಮಾರ್ ದಾಸ್, ವೈಎಸ್ಆರ್ ವಿವಿಯ ವಿಜ್ಞಾನಿ ಕೆ. ವೆಂಕಟೇಶ್ ಸುಬ್ಬಯ್ಯ, ದ.ಕ. ತೋಟಗಾರಿಕಾ ಸಹಾಯಕ ಅಧಿಕಾರಿ ವಿಜೇತ್ ಎಸ್., ಮಹಾರಾಷ್ಟ್ರ ಕೃಷಿ ಅಧಿಕಾರಿ ವಿಕಾಸ್ ಜೋಷಿಲ್ಕಾರ್, ತ್ರಿಶೂರ್ ಕೃಷಿ ಭವನ ಅಧಿಕಾರಿ ವಿವೇಕ್ ಎಂ.ಸಿ., ಕಾರ್ಕಳ ತೋಟಗಾರಿಕಾ ಅಧಿಕಾರಿ ಶ್ರೀನಿವಾಸ ಬಿ.ವಿ. ಅಧ್ಯಯನ ಪ್ರವಾಸದಲ್ಲಿದ್ದರು. ಪ್ರೀತಿ ಎಸ್. ರೈ ಕಡಮಜಲು ಸತ್ಕರಿಸಿದರು. ಕಾರ್ಯಕ್ರಮವನ್ನು ಗೇರು ಸಂಶೋಧನಾ ನಿರ್ದೇಶನಾಲಯದ ಪ್ರಧಾನ ವಿಜ್ಞಾನಿ ಈರದಾಸಪ್ಪ ಸಂಯೋಜಿಸಿದರು.
ಗೇರು ಕೃಷಿಯಿಂದ ಶೇ.50 ರಷ್ಟು ಲಾಭ – ಸುಭಾಸ್ ರೈ
ವಿಜ್ಞಾನಿಗಳು ಮತ್ತು ಅಧಿಕಾರಿಗಳ ಜೊತೆ ಸಂವಾದ ನಡೆಸಿದ ಕಡಮಜಲು ಸುಭಾಸ್ ರೈಯವರು ವೈಜ್ಞಾನಿಕ ಪದ್ದತಿಯ ಗೇರು ಕೃಷಿಯ ಮೂಲಕ ನಾನು ಅದರಿಂದ ಉತ್ತಮ ಮೌಲ್ಯವನ್ನು ಪಡೆಯುತ್ತಿದ್ದೇನೆ. ಈ ಸಲದ ಬೆಳೆಯಲ್ಲಿ ಶೇಕಡಾ 50 ರಷ್ಟು ಖರ್ಚು ತಗುಲಿದ್ದು, ಶೇಕಡಾ 50 ರಷ್ಟು ಲಾಭ ಪಡೆದಿದ್ದೇನೆʼ ಎಂದರು.
ವಿಜ್ಞಾನಿಗಳು, ಅಧಿಕಾರಿಗಳಿಂದ ಗೇರು ಬೆಳೆಯ ಬಗ್ಗೆ ಮೆಚ್ಚುಗೆ
ಸುಭಾಸ್ ರೈಯವರ ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ವರ್ಷದಲ್ಲಿ ಸಾಕಷ್ಟು ಅಧ್ಯಯನ ಪ್ರವಾಸ ತಂಡಗಳು ಬಂದು ಅವರ ಗೇರು ಮತ್ತು ಸಮಗ್ರ ಕೃಷಿಯ ಅಧ್ಯಯನ ಮಾಡಿಹೋಗುತ್ತಾರೆ. ಆದರೆ ಈ ಬಾರಿ 9 ರಾಜ್ಯಗಳಿಂದ ವಿವಿಧ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಬಂದಿರುವುದು ಬಹಳಷ್ಟು ವಿಶೇಷ ಭೇಟಿ ಇದಾಗಿದೆ. ಕಡಮಜಲು ರವರ ವೈಜ್ಞಾನಿಕ ಪದ್ದತಿಯ ಗೇರು ಕೃಷಿ ಮತ್ತು ಸಮಗ್ರ ಕೃಷಿ ವೀಕ್ಷಿಸಿದ ತಂಡವು ಮೆಚ್ಚುಗೆ ವ್ಯಕ್ತಪಡಿಸಿದೆ.










