






ಪುತ್ತೂರು: ವೀರಮಂಗಲ-ಸಾರಕೂಟೇಲು ಪರಿಸರದ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ ಬಸ್ ಸಂಚಾರ ವಿಸ್ತರಿಸುವ ಕುರಿತು ಪುತ್ತೂರು ವಿಭಾಗೀಯ ಡಿಪೋ ಮ್ಯಾನೇಜರ್ ಮಾರ್ಗ ಪರಿಶೀಲನೆ ನಡೆಸಿದರು.



ಶಾಸಕರ ಸೂಚನೆಯಂತೆ ಡಿಪೋ ಮ್ಯಾನೇಜರ್ ಶಾಲಾ ಮುಖ್ಯಗುರುಗಳೊಂದಿಗೆ ವೀರಮಂಗಲ-ಸಾರಕೂಟೇಲು ಮಾರ್ಗದ ಸ್ಥಳ ಪರಿಶೀಲನೆ ನಡೆಸಿದರು. ವೀರಮಂಗಲ ಶಾಲಾ ಮಕ್ಕಳಿಗೆ ಹಾಗೂ ಊರವರಿಗೆ ಸಾರಿಗೆ ಸೌಲಭ್ಯ ಕಲ್ಪಿಸಲು ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಮಾಡುವಂತೆ ಈ ಹಿಂದೆ ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು. ವೀರಮಂಗಲ ದೇವಸ್ಥಾನ ಅಭಿವೃದ್ಧಿ ರೂಪುರೇಷೆ ಪರಿಶೀಲನೆಗೆ ಆಗಮಿಸಿದ್ದ ಶಾಸಕರನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು, ಮುಖ್ಯಗುರುಗಳು, ಶಿಕ್ಷಕ ವೃಂದ ಹಾಗೂ ಊರವರು ಭೇಟಿ ಮಾಡಿ ಬಸ್ ಸೌಕರ್ಯದ ಅಗತ್ಯವನ್ನು ಮನವರಿಕೆ ಮಾಡಿದ್ದರು. ಶಾಸಕರ ಸೂಚನೆ ಮೇರೆಗೆ ಇಂದು ಡಿಪೋ ಮ್ಯಾನೇಜರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.



ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಸದಸ್ಯರು, ಊರ ಪ್ರಮುಖರು ಮಕ್ಕಳು ಸೇರಿದಂತೆ ನೂರಾರು ಮಂದಿ ಆಗಮಿಸಿದ್ದರು. ಬಸ್ ಅಗತ್ಯ ಬರುವಂತೆ ಮ್ಯಾನೇಜರ್ ರವರಿಗೆ ಮನವಿ ಮಾಡಿದರು. ಡಿಪೋ ಮ್ಯಾನೇಜರ್ ಪರಿಶೀಲನೆ ಮಾಡಿ ಊರವರಿಗೆ ಸಕಾರಾತ್ಮಕ ವಾಗಿ ಭರವಸೆ ನೀಡಿದರು.









