






ಪುತ್ತೂರು: ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಕೊರಗಜ್ಜ ಮತ್ತು ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಮೇ 30 ರಂದು ರಾತ್ರಿ ಶ್ರೀ ಕ್ಷೇತ್ರದಲ್ಲಿ ಬೆಂಗಳೂರು ವಿದ್ಯಾರಣ್ಯಾಪುರ ಕಾನ್ಶಿರಾಮ್ ನಗರದ ಕೃಷ್ಣ ನಿಲಯದ ಗೌತಮ ಬುದ್ಧ ರಸ್ತೆಯ ಸೋಮಸುಂದರ ಹರಿದಾಸ್ ಮತ್ತು ಶ್ರೀಮತಿ ಸಪ್ನಾ ಹರಿದಾಸ್, ಪುತ್ರಿ ಸಂಹಿತಾ ಹರಿದಾಸ್ ಹಾಗೂ ನಾಗೇಶ್ ಮಣ್ಣಾಪು, ಶ್ರೀಮತಿ ಪವಿತ್ರಾ ನಾಗೇಶ್ ಮತ್ತು ಮಕ್ಕಳು, ಅನ್ವಿತಾ, ಅದ್ವಿತಾ, ಅಶ್ವಿತಾ ಇವರ ಸೇವಾರ್ಥವಾಗಿ ಶ್ರೀ ಸ್ವಾಮಿ ಕೊರಗಜ್ಜ ದೈವದ ಹರಕೆಯ ನೇಮೋತ್ಸವ ನಡೆಯಿತು.


ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಅಧ್ಯಕ್ಷ ವಿಶ್ವನಾಥ ಮಣ್ಣಾಪು, ಅರ್ಚಕರಾದ ಕುಂಡ ಮೊಗೇರ, ಅಣ್ಣು ಮಣ್ಣಾಪು, ರವಿ ಮಣ್ಣಾಪು, ಮಧ್ಯಸ್ತರಾದ ಗಣೇಶ್ ಪೂಜಾರಿ ಕೆಮ್ಮಿಂಜೆ ಸಹಿತ ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಗಳು ಉಪಸ್ಥಿತರಿದ್ದರು. ಹೆಚ್ಚಿನ ವಿವರಗಳಿಗೆ ಶ್ರೀ ಕ್ಷೇತ್ರ ಮಣ್ಣಾಪು ಆಡಳಿತ ಸಮಿತಿ(ಮೊ:7760580714, 9901636848, 7349237945, 9591306593)ಯನ್ನು ಸಂಪರ್ಕಿಸಬಹುದು ಎಂದು ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.













