ಬೆಳ್ಳಿಪ್ಪಾಡಿ ನಿವಾಸಿಗೆ ಅರುಣ ಸಾರಥಿ ಸಂಘಟನೆಯ ಮಾನವೀಯ ಸ್ಪಂದನೆ

0

ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿರುವ ಬೆಳ್ಳಿಪ್ಪಾಡಿ ನಿವಾಸಿ ಗಣೇಶ್ ಭಂಡಾರಿ ಅವರಿಗೆ “ಅರುಣ ಸಾರಥಿ” ಸಂಘಟನೆಯ ವತಿಯಿಂದ 10,000 ರೂ. ಧನಸಹಾಯವನ್ನು ವಿತರಿಸಲಾಯಿತು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರ ಉಪಸ್ಥಿತಿಯಲ್ಲಿ “ಹಿಂದವಿ” ಕಚೇರಿಯಲ್ಲಿ ಧನಸಹಾಯದ ಚೆಕ್ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಸಂದೇಶ್ ನಾಯ್ಕ್ ಕೆಯ್ಯೂರು, ಶಿವಪ್ರಸಾದ್ ಪುತ್ತೂರು, ಜಯಂತ್ ಆರ್ಲಪದವು, ಬಾಲಕೃಷ್ಣ ಕೊಲ್ಲಾಜೆ ಮೊದಲಾದವರು ಉಪಸ್ಥಿತರಿದ್ದರು.

2.10 ಲಕ್ಷ ರೂ. ನೆರವು:
“ಅರುಣ ಸಾರಥಿ” ಸಂಘಟನೆ ವತಿಯಿಂದ ಈವರೆಗೆ ಅನಾರೋಗ್ಯದಿಂದ ಬಳಲುತ್ತಿರುವ ಹಲವು ಮಂದಿಗೆ ಒಟ್ಟು 2,10,000 ರೂ. ಧನಸಹಾಯ ನೀಡಲಾಗಿದೆ. ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಸಂಘಟನೆಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here