ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 12ನೇ ವರ್ಷದ ವಿದ್ಯಾಗಣಪತಿ ಉತ್ಸವ ಸಮಿತಿ ರಚನೆ

0

ಪುತ್ತೂರು : ಪುತ್ತೂರಿನ ಹೃದಯಭಾಗದಲ್ಲಿ ಕಾರ‍್ಯ ನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 12ನೇ ವರ್ಷದ ವಿದ್ಯಾಗಣಪತಿ ಉತ್ಸವ ಸಮಿತಿಯ ಪೂರ್ವಭಾವಿ ಸಭೆ ಜೂನ್ 02 ರಂದು ನಡೆಯಿತು.

ಸಂಸ್ಥೆಯ ಸಂಚಾಲಕ ಗೋಕುಲ್ ನಾಥ್ ಪಿ.ವಿ ಇವರ ಮಾರ್ಗದರ್ಶನದಲ್ಲಿ ನೂತನ ಶೈಕ್ಷಣಿಕ ವರ್ಷದ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಗಣೇಶೋತ್ಸವ ಸಮಿತಿಯ ಗೌರವ ಅಧ್ಯಕ್ಷರಾಗಿ ಬುಡ್ಡಪ್ಪ (ಹಾಸ್ಟೆಲ್ ಮೇಲ್ವಿಚಾರಕರು), ಅಧ್ಯಕ್ಷರಾಗಿ ಯಜ್ಞಿಕ್ (ದ್ವೀತಿಯ ಪಿಯುಸಿ ವಾಣಿಜ್ಯ ವಿಭಾಗ) , ಉಪಾಧ್ಯಕ್ಷರಾಗಿ ಮನ್ವಿತ್(ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗ) , ಕಾರ್ಯದರ್ಶಿಯಾಗಿ ಶಶಾಂಕ್(10ನೇ ತರಗತಿ), ಜೊತೆ ಕಾರ್ಯದರ್ಶಿಯಾಗಿ ತೇಜಸ್ ಮುರಾರಿ (10ನೇ ತರಗತಿ) ಇವರನ್ನು ಆಯ್ಕೆ ಮಾಡಲಾಯಿತು.ಪ್ರಾಂಶುಪಾಲರಾದ ಹೇಮಲತಾ ಗೋಕುಲ್ ನಾಥ್ , ಉಪನ್ಯಾಸಕವೃಂದ , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here