ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 2026-27ರ ಮಂತ್ರಿಮಂಡಲ ರಚನೆ

0

ಪುತ್ತೂರು : ಪುತ್ತೂರಿನ ಹೃದಯಭಾಗದ ಶ್ರೀ ಧರ್ಮಸ್ಥಳ ಕಟ್ಟಡದ ಎರಡನೇ ಮಹಡಿಯಲ್ಲಿ ಕಾರ‍್ಯ ನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್(ರಿ) ಪುತ್ತೂರು ಇಲ್ಲಿ 2026-27ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆಯನ್ನು ಜೂನ್ 02 ರಂದು ಸಂಸ್ಥೆಯ ಮುಖ್ಯೋಪಾಧ್ಯಯರಾದ ಪ್ರಮೀಳಾ.ಎನ್.ಡಿ ಇವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.

ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಮತ ಚಲಾಯಿಸುವ ಮೂಲಕ ಆರಿಸಲಾಯಿತು.ಮುಖ್ಯ ಮಂತ್ರಿಯಾಗಿ ಅಶ್ವಿನ್ ಸೆಬಾಸ್ಟಿಯನ್ (ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗ),ಉಪಮುಖ್ಯ ಮಂತ್ರಿಯಾಗಿ ಮಾನಸ ಮುತ್ತಮ್ಮ (ದ್ವೀತಿಯ ಪಿಯುಸಿ ವಾಣಿಜ್ಯ ವಿಭಾಗ),ಉಪಮುಖ್ಯ ಮಂತ್ರಿಯಾಗಿ ಫಾತಿಮತ್ ಫಿಝ (ದ್ವೀತಿಯ ಪಿಯುಸಿ ವಾಣಿಜ್ಯ ವಿಭಾಗ), ವಿದ್ಯಾಮಂತ್ರಿಯಾಗಿ ಶಾರ್ವರಿ(ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗ),ಹಣಕಾಸು ಮಂತ್ರಿಯಾಗಿ ನಮೃತ್ (ದ್ವೀತಿಯ ಪಿಯುಸಿ ವಾಣಿಜ್ಯ ವಿಭಾಗ),ಸಾಂಸ್ಮ್ಕತಿಕ ಮಂತ್ರಿಯಾಗಿ ಆರ್ಯ ಆರ್ (10ನೇ ತರಗತಿ) ಮತ್ತು ಎ. ಸಿ. ಕೃತಿ(10ನೇ ತರಗತಿ),ಕ್ರೀಡಾ ಮಂತ್ರಿಯಾಗಿ ಲೋಕೆಶ್(ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗ),ಆಹಾರ ಆರೋಗ್ಯ ಮತ್ತು ಶಿಸ್ತು ಮಂತ್ರಿಯಾಗಿ ಅಖಿಲೇಶ್ (ದ್ವೀತಿಯ ಪಿಯುಸಿ ವಾಣಿಜ್ಯ ವಿಭಾಗ) , ವಿದಿತಾ ವಿ (ದ್ವೀತಿಯ ಪಿಯುಸಿ ವಾಣಿಜ್ಯ ವಿಭಾಗ),ವಿರೋಧ ಪಕ್ಷದ ನಾಯಕನಾಗಿ ಮುಹಮ್ಮದ್ ಫಝಲ್ (ದ್ವೀತಿಯ ಪಿಯುಸಿ ವಾಣಿಜ್ಯ ವಿಭಾಗ), ಅಸ್ಪಕ್, ರಾಯೀಸ್, ಸ್ವಾಬೀರ್, ಸಮೃದ್ದಿ, ಮೇಘನಾ, ರಕ್ಷಿತ್, ರಶಾನ್, ಲಕ್ಷಿತ್, ಇವರು ಸದಸ್ಯರಾಗಿ ಆಯ್ಕೆಗೊಂಡರು. ಸಂಸ್ಥೆಯ ಸಂಚಾಲಕ ಗೋಕುಲ್ ನಾಥ್ ಪಿ.ವಿ ಹಾಗೂ ಪ್ರಾಂಶುಪಾಲರಾದ ಹೇಮಲತಾ ಗೋಕುಲ್ ನಾಥ್ , ಉಪನ್ಯಾಸಕವೃಂದ , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here