







ನಾಯಕಿಯಾಗಿ ಯಶ್ವಿ ಡಿ ಎನ್, ಉಪನಾಯಕಿಯಾಗಿ ಸಿಂಚನ ಆಯ್ಕೆ


ಕಾಣಿಯೂರು : ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಕುದ್ಮಾರು 2026- 27 ನೇ ಸಾಲಿನ ಮಂತ್ರಿಮಂಡಲ ರಚನೆ ಚುನಾವಣೆ ಮೂಲಕ ನಡೆಯಿತು. ಶಾಲಾ ವಿದ್ಯಾರ್ಥಿ ನಾಯಕಿಯಾಗಿ ಯಶ್ವಿ .ಡಿ ಎನ್ .7ನೇ ತರಗತಿ, ಉಪನಾಯಕಿಯಾಗಿ ಸಿಂಚನ 6ನೇ ತರಗತಿ ಆಯ್ಕೆಯಾಗಿರುತ್ತಾರೆ. ವಿರೋಧ ಪಕ್ಷದ ನಾಯಕನಾಗಿ ಧ್ರುವನ್ 7ನೇ ತರಗತಿ, ಸಭಾಧ್ಯಕ್ಷರಾಗಿ ಅಹಮದ್ ಅಸ್ಲಾಂ 7ನೇ ತರಗತಿ ಆಯ್ಕೆಯಾದರು. ಗೃಹ ಮಂತ್ರಿ ಪ್ರತ್ಯುಶ್ .ಬಿ, ನೀರಾವರಿ ಮಂತ್ರಿ ತೇಜಸ್, ಕೃಷಿ ಮಂತ್ರಿ ಪೂರ್ವಿತ್ ಹೆಚ್ ಸಿ ,ಶಿಕ್ಷಣ ಮಂತ್ರಿ ಯಶಸ್ವಿ ಪಿ ಸಿ, ಆರೋಗ್ಯ ಮಂತ್ರಿ ಲೇಖನ ಪಿ ಎಚ್, ಸಾಂಸ್ಕೃತಿಕ ಮಂತ್ರಿ ಹೃತಿಕ್ ಎಸ್ ಕೆ ,ಕ್ರೀಡಾ ಮಂತ್ರಿ ಮೊಹಮ್ಮದ್ ಹಿಬತುಳ್ಳ ಗ್ರಂಥಾಲಯ ಮಂತ್ರಿ ಪೃಥ್ವಿ ಸ್ವಚ್ಛತಾ ಮಂತ್ರಿ ಮೊಹಮ್ಮದ್ಐಮಾನ್ ಆಹಾರ ಮಂತ್ರಿ ಕಿರಣ್ ಕುಮಾರ್ ರವರನ್ನು ಆಯ್ಕೆ ಮಾಡಲಾಯಿತು ಮುಖ್ಯ ಗುರುಗಳಾದ ಮಿನಿ ವರ್ಗಿಸ್ ಪ್ರಮಾಣ ವಚನ ಬೋಧಿಸಿದರು. ಚುನಾವಣಾ ಅಧಿಕಾರಿಯಾಗಿ ಮಿನಿ ವರ್ಗಿಸ್ ಮತಗಟ್ಟೆ ಅಧಿಕಾರಿಗಳಾಗಿ ವಿನುತಾ ಡಿ ಪ್ರೇಮಲತಾ ಕೆ ಎನ್, ಸರೋಜಾ ಕೆ ಭಾಗವಹಿಸಿದ್ದರು. ವೀಣಾ ಕೆ, ಸುಜಾತ ಬಿ, ಸುಜಾತ ಎ,ಭವ್ಯಾಕೆ,ಶ್ವೇತಾ ಎಸ್ ಎ, ಎಲ್ ಕೆ ಜಿ, ಯು ಕೆ ಜಿ ಶಿಕ್ಷಕಿಯರಾದ ಪೂರ್ಣಿಮಾ ಹವ್ಯಶ್ರೀ ಸಹಾಯಕಿಯಾದ ರಮ್ಯ ಸಹಕರಿಸಿದರು.ಶಾಲಾ ಮಂತ್ರಿಮಂಡಲ ರಚನೆಯ ಮೇಲುಸ್ತುವಾರಿಯನ್ನು ಶಿಕ್ಷಕಿ ಪ್ರಿಯಾಂಕ ಕೆ ಎಸ್ ನಿರ್ವಹಿಸಿದ್ದರು.













