ಕೆಮ್ಮಿಂಜೆ: ಪಿಎಂ ಶ್ರೀ ಶಾಲೆಯಲ್ಲಿ ಮಂತ್ರಿಮಂಡಲ ರಚನೆ

0

ಪುತ್ತೂರು: 2026-27ನೇ ಸಾಲಿನ ಶಾಲಾ ಮಂತ್ರಿಮಂಡಲವನ್ನು ಜೂ.6ರಂದು ಪಿಎಂ ಶ್ರೀ ಸ.ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಿಂಜೆ ಇಲ್ಲಿ ನಡೆಯಿತು.

ಮುಖ್ಯ ಗುರುಗಳ ಅಧ್ಯಕ್ಷತೆಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 8ನೇ ತರಗತಿಯ ಜೀವಿತಾ ಕೆ. ಶಾಲಾ ನಾಯಕಿಯಾಗಿ, 7ನೇ ತರಗತಿಯ ರಚನಾ ಉಪನಾಯಕಿಯಾಗಿ ಆಯ್ಕೆಯಾದರು.

ವಿರೋಧ ಪಕ್ಷದ ನಾಯಕನಾಗಿ 8ನೇ ತರಗತಿಯ ಹರ್ಷಿತ್, ಗೃಹಮಂತ್ರಿಗಳಾಗಿ ಪವನ್ ಮತ್ತು ವೃಷಬ್, ಶಿಕ್ಷಣ ಮಂತ್ರಿಗಳಾಗಿ ಚೈತ್ರ ಮತ್ತು ಸಹಿಫ ಫಾತಿಮಾ ಆಯ್ಕೆಯಾಗಿದ್ದಾರೆ.ಸ್ವಚ್ಛತಾ ಮಂತ್ರಿಗಳಾಗಿ ಹಂಶಿಕ್, ಅಭಿಷೇಕ್ ಮತ್ತು ನಿಧಿಶಾ, ಆರೋಗ್ಯ ಮಂತ್ರಿಗಳಾಗಿ ಜೀವಿಕಾ ಮತ್ತು ರಕ್ಷಾ, ಕ್ರೀಡಾ ಮಂತ್ರಿಗಳಾಗಿ ಚರಣ್, ಪರ್ಹಾ ಮತ್ತು ಮೊಹಮ್ಮದ್ ಅಫ್ಫಾನ್ ಆಯ್ಕೆಯಾದರು.ಕೃಷಿ ಮಂತ್ರಿಗಳಾಗಿ ಸುಶಾಂತ್, ತನ್ಮಯ್ ಮತ್ತು ವಿಘ್ನೇಶ್, ನೀರಾವರಿ ಮಂತ್ರಿಗಳಾಗಿ ಹರ್ಷಿತ್, ಶ್ರೀನಿವಾಸ್ ಮತ್ತು ಸತೀಶ್, ಆಹಾರ ಮಂತ್ರಿಗಳಾಗಿ ಧನ್ವಿನ್, ಯುವರಾಜ್ ಮತ್ತು ಕೀರ್ತೇಶ್ ಆಯ್ಕೆಯಾಗಿದ್ದಾರೆ. ಗ್ರಂಥಾಲಯ ಮಂತ್ರಿಗಳಾಗಿ ಧನ್ವಿತ್, ಕಾರ್ತಿಕಾ ಮತ್ತು ಅಮೃತ, ಸಾಂಸ್ಕೃತಿಕ ಮಂತ್ರಿಗಳಾಗಿ ಪ್ರತೀಕ್ಷ, ಜೀವಿತ ಮತ್ತು ಕೃತಿ ಆಯ್ಕೆಯಾದರು. ಈ ಪ್ರಕ್ರಿಯೆಯಲ್ಲಿ ಶಾಲಾ ಶಿಕ್ಷಕ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here