






ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷರಾಗಿರುವ ಬೆಳಿಯೂರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು, ಪ್ರಭಾರ ಪ್ರಾಂಶುಪಾಲರಾಗಿರುವ ಹರಿಪ್ರಕಾಶ್ ಬೈಲಾಡಿಯವರು ಪುನರಾಯ್ಕೆಯಾಗಿದ್ದಾರೆ.


ಸಂಘದ ಐದು ವರ್ಷಗಳ ಅವದಿಗೆ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷರಾಗಿರುವ ಬೆಳಿಯೂರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹರಿಪ್ರಕಾಶ್ ಬೈಲಾಡಿ ಹಾಗೂ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಮೇಶ್ ಹೆಚ್.ಜಿ ಕಣದಲ್ಲಿದ್ದರು. ಜೂ.7ರಂದು ಮಂಗಳೂರು ಬಲ್ಮಠದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ಪ್ರಕ್ರಿಯೆಗಳು ನಡೆದಿತ್ತು. ಚುನಾವಣೆಯಲ್ಲಿ 229 ಮತಗಳನ್ನು ಪಡೆದುಕೊಂಡ ಹರಿಪ್ರಕಾಶ್ ಬೈಲಾಡಿಯವರು ಎರಡನೇ ಬಾರಿಗೆ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಪ್ರತಿಸ್ಪರ್ಧಿ ರಮೇಶ್ ಹೆಚ್.ಜಿ 49 ಮತಗಳನ್ನು ಪಡೆದುಕೊಂಡಿದ್ದರು.



ಸಂಘದ ಇತರ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು ಕಾರ್ಯಾಧ್ಯಕ್ಷರಾಗಿ ಚಂದ್ರನಾಥ ಎಂ., ಉಪಾಧ್ಯಕ್ಷರಾಗಿ ಇಂದಿರಾ, ಖಜಾಂಚಿಯಾಗಿ ಸಚೇತ್ ಸುವರ್ಣ, ಪ್ರಧಾನ ಕಾರ್ಯದರ್ಶಿಯಾಗಿ ಶೀನಪ್ಪ ಎನ್., ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಆರ್., ಕಾರ್ಯದರ್ಶಿಯಾಗಿ ಶೀನಾ ನಾಡೋಳಿ, ಜಂಟೀ ಕಾರ್ಯದರ್ಶಿಯಾಗಿ ಡಾ|ಮಧಕೇಶ್ವರ ಶಾಸ್ತ್ರಿ ಆಯ್ಕೆಯಾಗಿದ್ದಾರೆ.










