







ಪುತ್ತೂರು: ಮಚ್ಚಿಮಲೆ ಅಂಗನವಾಡಿಗೆ ರೋಟರಿ ಕ್ಲಬ್ ಪುತ್ತೂರು ಸಿಟಿ ವತಿಯಿಂದ ನೀರಿನ ಟ್ಯಾಂಕ್ ಕೊಡುಗೆಯಾಗಿ ನೀಡಲಾಯಿತು.



ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ ಹಾಗೂ ಸಹಾಯಕಿ ತ್ರಿವೇಣಿ ಅವರ ಬೇಡಿಕೆಗೆ ಸ್ಪಂದಿಸಿದ ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಉಲ್ಲಾಸ ಪೈ ಅವರು ನೀರಿನ ಟ್ಯಾಂಕ್ ಹಸ್ತಾಂತರಿಸಿದರು.



ಈ ಸಂದರ್ಭದಲ್ಲಿ ಪೋಷಕರು ಗುಲಾಬಿ ಹೂ ನೀಡಿ ಗಣ್ಯರಿಗೆ ಧನ್ಯವಾದ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸದಸ್ಯರಾದ ಜಾನ್ ಕುತ್ತಿನ, ಜೋ ಡಿಸೋಜ, ಪದ್ಮನಾಭ ಶೆಟ್ಟಿ ಹಾಗೂ ಸಾಹಸ ಸಂಸ್ಥೆ ಬೆಂಗಳೂರು ತಂಡದ ಮುಖ್ಯಸ್ಥ ಅನಂತ ಉಪಸ್ಥಿತರಿದ್ದರು.










