ಕಡಬ: ನಾಪತ್ತೆಯಾದ ಮಹಿಳೆ : ಮಾಹಿತಿಗಾಗಿ ಪೊಲೀಸ್ ಮನವಿ

0

ಪುತ್ತೂರು:ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ನೀರಾರಿ ನಿವಾಸಿ ಮಹಿಳೆಯೊಬ್ಬರು ನಾಪತ್ತೆಯಾಗಿದ್ದು, ಮಹಿಳೆಯ ಮಾಹಿತಿ ಲಭ್ಯವಾದಲ್ಲಿ ತಿಳಿಸುವಂತೆ ಕಡಬ ಪೊಲೀಸರು ಮನವಿ ಮಾಡಿದ್ದಾರೆ.


ಕಲ್ಲುಗುಡ್ಡೆ ನೀರಾರಿ ನಿವಾಸಿ ಮೊಹಮ್ಮದ್ ಆಶಿಕ್ ಎಂಬವರ ಪತ್ನಿ ಆರ್ ಪೈನ್ ಮೆಹತಾಬ್(18ವ) ಎಂಬವರು ನಾಪತ್ತೆಯಾದವರು.ಅವರು ಜೂ.7ರಂದು ಮನೆಯಿಂದ ಹೋದವರು ಮನೆಗೆ ಬಾರದೆ,ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದಾರೆ ಎಂದು ಕಡಬ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.ನಾಪತ್ತೆಯಾದ ಆರ್ ಪೈನ್ ಮೆಹತಾಬ್ ಅವರ ಮಾಹಿತಿ ಲಭ್ಯವಾದಲ್ಲಿ ಕಡಬ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08251-260044, ಮೊಬೈಲ್ ಸಂಖ್ಯೆ 9480805364ಗೆ ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here