ಎಸೆಸ್ಸೆಲ್ಸಿ ಪರೀಕ್ಷೆ:ಮರು ಮೌಲ್ಯಮಾಪನ, ಪರೀಕ್ಷೆ-2 ನಲ್ಲಿ ಹೆಚ್ಚುವರಿ ಅಂಕ ಪಡೆದ ಸುದಾನ ಶಾಲೆಯ ವಿದ್ಯಾರ್ಥಿಗಳು

0

ಪುತ್ತೂರು:2025-26ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯ ಮರು ಮೌಲ್ಯಮಾಪನ ಹಾಗೂ ಪರೀಕ್ಷೆ-2 ಇದರಲ್ಲಿ 22 ಮಂದಿ ಸುದಾನ ವಸತಿಯುತ ಶಾಲೆಯ ವಿದ್ಯಾರ್ಥಿಗಳು ಹೆಚ್ಚುವರಿ ಅಂಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಹಾಗೂ ಶಾಲೆಯ ಸ್ವೀಕೃತಿ ಎಸ್ ರವರು 618 ಅಂಕಗಳೊಂದಿಗೆ ಶಾಲೆಯಲ್ಲಿ ಪ್ರಥಮ, ರಾಜ್ಯಕ್ಕೆ ಎಂಟನೇ ರ‍್ಯಾಂಕ್‌ ಗಳಿಸಿರುತ್ತಾರೆ.


ಅದ್ವಿಜ್ ಸಜೇಶ್(609, 97.44%), ಪಲ್ಲವಿ ಜಿ(607,97.12%), ಮೊಹಮ್ಮದ್ ಆದಿಲ್(603,96.48%), ಫಾತಿಮ ಶನುಮ್(602,96.32%), ಅಭಿಜ್ಞಾ ಎ(599,95.84%), ಯಕ್ಷಿತ್ ಬಿ(599,95.84%), ಸಮನ್ವಿಕ ಶರ್ಮ ಪಿ(597,95.52%), ಪ್ರಥ್ವಿ ಪಿ(593,94.88%), ಮಿಥುನ್ ಪಿ.ಪಿ(592,94.72%), ಹಿಶಾಮ್ ಶೇಖ್(589,94.24%), ವಿಸ್ಮಯ್ ಬಿ.ವಿ(588,94.08%), ವಂಶಿ ಎ.ಪಿ(578,92.42%), ನಿಹಾರಿಕಾ ಎಸ್.ಎಚ್(571,91.36%), ಸುಲೈಮಾನ್ ಆದಿನ್(568,90.88%), ಪ್ರಿಯದರ್ಶಿನಿ ಬಿ(561,89.76%), ಗಗನ್ ಎ.ಜಿ(555,88.8%), ಮುಹಮ್ಮದ್ ಫೈಜ್(550,88%), ಸಮನ್ವಿ ರೈ(550, 88%), ಮನ್ವಿತ್ ಎನ್(539, 86.24%), ಸೌಮ್ಯ ಎಸ್(534, 85.44%), ಮೊಹಮ್ಮದ್ ಅಫ್ನಾನ್ ಕೆ(527, 84.32%), ಫ್ರ್ಯಾಂಕ್ಲಿನ್ ಬೆನ್ಸನ್ ಬಿ(523, 83.68%)ರವರು ಮರು ಮೌಲ್ಯಮಾಪನ ಹಾಗೂ ಪರೀಕ್ಷೆ-2 ಇದರಲ್ಲಿ ಹೆಚ್ಚುವರಿ ಅಂಕ ಗಳಿಸಿದವರಾಗಿದ್ದಾರೆ.


ಪರೀಕ್ಷೆಗೆ 130 ವಿದ್ಯಾರ್ಥಿಗಳು ಹಾಜರಾಗಿದ್ದು, 600 ಅಂಕಕ್ಕಿಂತ ಮೇಲೆ ಪಡೆದ ವಿದ್ಯಾರ್ಥಿಗಳು 11 ಮಂದಿ, ವಿಶಿಷ್ಟ ಶ್ರೇಣಿ 72, ಪ್ರಥಮ ಶ್ರೇಣಿ 55, ದ್ವಿತೀಯ ಶ್ರೇಣಿ 2, ಉತ್ತೀರ್ಣ 1, ಹೀಗೆ ಸಂಸ್ಥೆಯು ಶೇ.ನೂರು ಫಲಿತಾಂಶ ಪಡೆದಿರುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here