







ಕಡಬ: ಕುಂತೂರು ಪದವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2026-27ನೇ ಶೈಕ್ಷಣಿಕ ವರ್ಷದ ಮಂತ್ರಿಮಂಡಲವನ್ನು ಇವಿಎಂ ಮತದಾನದ ಮೂಲಕ ರಚಿಸಲಾಯಿತು.


ಶಾಲಾ ನಾಯಕನಾಗಿ 7ನೇ ತರಗತಿಯ ಪೂರ್ಣೇಶ್ ಎಚ್., ಉಪನಾಯಕನಾಗಿ 6ನೇ ತರಗತಿಯ ಶೃತನ್ ಪಿ.ಆಯ್ಕೆಗೊಂಡರು. ಗೃಹ ಮಂತ್ರಿಯಾಗಿ ಮಹಮ್ಮದ್ ಹಫೀಝ್ (7ನೇ), ಉಪಗೃಹಮಂತ್ರಿಯಾಗಿ ಸಾತ್ವಿಕ್ ಎ.ಎ. (6ನೇ), ಶಿಕ್ಷಣಮಂತ್ರಿಯಾಗಿ ವಿದ್ಯಾಂತ್ ಗೌಡ(7ನೇ), ಉಪ ಶಿಕ್ಷಣಮಂತ್ರಿಯಾಗಿ ಆಕರ್ಷ್ (6ನೇ), ಸಾಂಸ್ಕೃತಿಕ ಮಂತ್ರಿಯಾಗಿ ಚಾರ್ವಿ ಕೆ.ಆರ್.(7ನೇ), ಉಪಸಾಂಸ್ಕೃತಿಕ ಮಂತ್ರಿಯಾಗಿ ಕುಶಿಕಾ ಜಿ.ಕೆ.(5ನೇ), ಸ್ವಚ್ಛತಾಮಂತ್ರಿಯಾಗಿ ಚಿಂತನ್ ಜೆ.(7ನೇ), ಉಪಸ್ವಚ್ಛತಾ ಮಂತ್ರಿಯಾಗಿ ಪ್ರಣಾಮ್ ಕೆ.ಎಚ್. (6ನೇ), ಆರೋಗ್ಯ ಮಂತ್ರಿಯಾಗಿ ತನಿಕ್ಷಾ (7ನೇ), ಉಪಆರೋಗ್ಯ ಮಂತ್ರಿಯಾಗಿ ಜಯಶ್ರೀ (6ನೇ), ತೋಟಗಾರಿಕಾ ಮಂತ್ರಿಯಾಗಿ ಯಶಸ್ ಎ.ಕೆ. (7ನೇ), ಉಪತೋಟಗಾರಿಕಾ ಮಂತ್ರಿಯಾಗಿ ರಕ್ಷಣ್ (6ನೇ), ರಕ್ಷಣಾ ಮಂತ್ರಿಯಾಗಿ ಝೊಯಾನ್ ಶರೀಫ್ (6ನೇ), ಉಪರಕ್ಷಣಾ ಮಂತ್ರಿಯಾಗಿ ಪೃಥ್ವಿನ್ (5ನೇ), ನೀರಾವರಿ ಮಂತ್ರಿಯಾಗಿ ಹೇಮಂತ್ (6ನೇ), ಉಪನೀರಾವರಿ ಮಂತ್ರಿಯಾಗಿ ಮಿಥುನ್ (6ನೇ), ವಾರ್ತಾ ಮಂತ್ರಿಯಾಗಿ ಚೈತನ್ಯ (7ನೇ), ಉಪವಾರ್ತಾ ಮಂತ್ರಿಯಾಗಿ ವರ್ಷಿಕ್ ಕೆ.ಆರ್.(5ನೇ), ಕ್ರೀಡಾಮಂತ್ರಿಯಾಗಿ ಅದ್ವಿಕ್ ಎಂ.ಎಸ್. (5ನೇ), ಉಪಕ್ರೀಡಾಮಂತ್ರಿಯಾಗಿ ಸಾನ್ವಿತ್ ಎಂ.ವಿ. (5ನೇ), ಆಹಾರ ಮಂತ್ರಿಯಾಗಿ ಯತಿಕ್ಷ (5ನೇ), ಉಪಆಹಾರ ಮಂತ್ರಿಯಾಗಿ ಕುಲಭೂಷಣ್ ಬಿ.ಗೌಡ (5ನೇ), ಶಿಸ್ತು, ಸಮಯಪಾಲನಾ ಮಂತ್ರಿಯಾಗಿ ಮೀಕ್ಷ್ಯಾ ಕೆ.ಎನ್. (5ನೇ), ಉಪಶಿಸ್ತು ಸಮಯಪಾಲನಾ ಮಂತ್ರಿಯಾಗಿ ಧನುಷ್ (5ನೇ), ವಿರೋಧ ಪಕ್ಷದ ಮಂತ್ರಿಯಾಗಿ ತನೀಕ್ಷಾ (7ನೇ) ಹಾಗೂ ಸಭಾಪತಿಯಾಗಿ ವಿಜೇಶ್ ಐ.(7ನೇ)ಆಯ್ಕೆಯಾದರು.




ಶಾಲಾ ಮುಖ್ಯಗುರು ಗಿರಿಜ ವಿ. ಪ್ರಮಾಣ ವಚನ ಬೋಧಿಸಿದರು. ಸಹಶಿಕ್ಷಕರಾದ ಕೇಶವ ಕೆ., ಶಿವಣ್ಣ, ಕುಸುಮ, ಗೌರವ ಶಿಕ್ಷಕಿಯರಾದ ಸುಮಲತಾ ಪಿ., ಗಾಯತ್ರಿ ಕೆ. ಮತಗಟ್ಟೆ ಅಧಿಕಾರಿಗಳಾಗಿ ಮತದಾನ ಕಾರ್ಯನಡೆಸಿಕೊಟ್ಟರು.









