ಹೊಸಮಜಲು: ಎಸ್‌ಜೆಎಂ ಉಪ್ಪಿನಂಗಡಿ ರೇಂಜ್ ಕಾನ್ಫರೆನ್ಸ್

0

ನೆಲ್ಯಾಡಿ: ಸುನ್ನೀ ಜಂ-ಇಯ್ಯತುಲ್ ಮುಅಲ್ಲಿಮೀನ್ (ಎಸ್‌ಜೆಎಂ) ಉಪ್ಪಿನಂಗಡಿ ರೇಂಜ್ 140ರ ಆಶ್ರಯದಲ್ಲಿ ರೇಂಜ್ ಕಾನ್ಫರೆನ್ಸ್ ಜೂ.17ರಂದು ಹೊಸಮಜಲು ಹಿಮಾಯತುಲ್ ಇಸ್ಲಾಂ ಮದ್ರಸದಲ್ಲಿ ನಡೆಯಿತು.


ಎಸ್‌ಜೆಎಂ ಉಪ್ಪಿನಂಗಡಿ ರೇಂಜ್ ಅಧ್ಯಕ್ಷರಾದ ಡಿ.ಹೆಚ್. ಇಬ್ರಾಹಿಂ ಸಅದಿ ನೆಕ್ಕಿಲಾಡಿ ಅಧ್ಯಕ್ಷತೆ ವಹಿಸಿದ್ದರು. ಸತ್ತಾರ್ ಹಿಶಾಮಿ ಉಸ್ತಾದ್ ಖಿರಾಅತ್ ನೆರವೇರಿಸಿದರು. ಹೊಸಮಜಲು ಖತೀಬರಾದ ಮುಹಮ್ಮದ್ ಶಂಸೀರ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು.


ಮುಹಮ್ಮದ್ ರಫೀಖ್ ಅಹ್ಸನಿ ನೆಕ್ಕಿಲಾಡಿ ಅವರು ೬ನೇ ತರಗತಿಯ ತಝ್ಕಿಯಾ ಪಾಠ-5ರ ಕುರಿತ ಮಾದರಿ ತರಗತಿ ನಡೆಸಿಕೊಟ್ಟರು. ಇಸ್ಮಾಯಿಲ್ ಸಅದಿ ನೆಲ್ಯಾಡಿ ಅವರು 8ನೇ ತರಗತಿ ತಝ್ಕಿಯಾ ಪಾಠ-4ರ ಕುರಿತು ಚರ್ಚೆ ನಡೆಸಿದರು. 9ನೇ ತರಗತಿ ದುರೂಸ್ 1, 2 ಹಾಗೂ 3ನೇ ತರಗತಿಯ ಪಾಠಗಳನ್ನು ಆಧರಿಸಿ ಕ್ವಿಝ್ ಸ್ಪರ್ಧೆಯನ್ನು ಶರೀಫ್ ಸಅದಿ ನೆಕ್ಕಿಲಾಡಿ ನಡೆಸಿಕೊಟ್ಟರು. ಮುಹಮ್ಮದ್, ಎಂ.ಕೆ.ಇಬ್ರಾಹಿಂ, ಇಬ್ರಾಹಿಂ ಖಲೀಲ್ ಉಸ್ತಾದ್ ಶುಭಹಾರೈಸಿದರು. ಅಬ್ದುಲ್ ಲತೀಫ್ ಸಖಾಫಿ ಕರ್ವೇಲ್ ಅವರು ‘ಹೊಸ ವರ್ಷ-ಹೊಸ ಹರುಷ ‘ ವಿಷಯದ ಕುರಿತು ಪ್ರಬಂಧ ಮಂಡಿಸಿದರು.

ಮುಹಮ್ಮದ್ ರಾಶೀದ್ ಮದನಿ ನೆಲ್ಯಾಡಿ ನ್ಯೂಸ್ ರೀಡಿಂಗ್ ನಡೆಸಿದರೆ, ಅನ್ಸಿಫ್ ಸಅದಿ ಮೊರಂಕಳ ಆಲಾಪಣೆ ನಡೆಸಿದರು. ಹೊಸಮಜಲು ಎಸ್‌ಬಿಎಸ್ ವತಿಯಿಂದ ಉಸ್ತಾದರಿಗೆ ಸ್ಮರಣಿಕೆಯಾಗಿ ಗಿಫ್ಟ್‌ಗಳನ್ನು ನೀಡಿ ಗೌರವಿಸಲಾಯಿತು. ಫಿರೋಝ್ ಸಅದಿ ಸ್ವಾಗತಿಸಿದರು. ಅಬ್ದುಲ್ ಜಬ್ಬಾರ್ ಝೈನಿ ಕರ್ವೇಲು ವಂದಿಸಿದರು. ರೇಂಜ್ ವ್ಯಾಪ್ತಿಯ ಮುಅಲ್ಲಿಮರು ಮತ್ತು ಸಂಬಂಧಿತ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here