







ಪುತ್ತೂರು: ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ‘ವಿಪತ್ತು ನಿರ್ವಹಣ ಮಾಹಿತಿ’ ಕಾರ್ಯಕ್ರಮ ಬೆಂಗಳೂರು National Disaster Response Force (NDRF) ತಂಡದ ವತಿಯಿಂದ ಆಯೋಜಿಸಲಾಗಿತ್ತು.


ತಂಡದ ಸಹಾಯಕ ಸಬ್ಇನ್ಸ್ಪೆಕ್ಟರ್ ಸುಭಾಷ್ ಶಿಂಧೆ ಮಾತನಾಡಿ ಇತ್ತೀಚಿನ ವರ್ಷಗಳಿಲ್ಲಿ ಹವಮಾನದ ಬದಲಾವಣೆಯು ಪ್ರಕೃತಿಯ ಮೇಲೆ ಭೀಕರ ಪರಿಣಾಮ ಬೀರಿ ವಿಕೋಪ ಎದುರಾಗುತ್ತದೆ. ಇದಕ್ಕೆ ದೃತಿಗೆಡದೆ ವ್ಯವಸ್ಥಿತವಾಗಿ ಪರಿಹಾರ ಕ್ರಮಗಳನ್ನು ಕೈಗೊಂಡು ಮಾನವ ಮತ್ತು ಪ್ರಕೃತಿ ನಡುವಿನ ಸಮತೋಲನವನ್ನು ಕಾಪಾಡಿ ವಿಪತ್ತಿನಿಂದ ಪಾರಾಗುವ ವಿವಿಧ ಮಾರ್ಗಗಳ ಬಗ್ಗೆ ಪ್ರಾತ್ಯಕ್ಷಿಕೆಗಳ ಮೂಲಕ ಮಾಹಿತಿ ನೀಡಿದರು. ಹೃದಯಘಾತವಾದಾಗ, ಪ್ರಜ್ಞೆ ಕಳೆದುಕೊಂಡಾಗ ನೀಡುವ ಪ್ರಥಮ ಚಿಕಿತ್ಸೆಯನ್ನು CPR ಮೂಲಕ ಹೇಗೆ ಮಾಡುವುದು ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. ಸೇನಾ ತಂಡದ ಕಮಾಂಡರ್ ಶಾಂತಿ ಲಾಲ್ ಜಟಿಯಾರವರು “ ವಿಪತ್ತು ನಿರ್ವಾಹಣೆಯ ಕುರಿತು ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುವುದರ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖೋಪಾದ್ಯಾಯಿನಿ ರೋಸಲಿನ್ ಫ್ಲೇವಿ ಲೋಬೊ ಅಧ್ಯಕ್ಷತೆ ವಹಿಸಿ ಮಾತನಾಡಿ ಓಆಖಈ ತಂಡವು ನೀಡಿರುವ ಮಾಹಿತಿಯನ್ನು ತಮ್ಮ ಮನೆಯಲ್ಲಿ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಹಂಚಿಕೊಳ್ಳುವಂತೆ ತಿಳಿಸಿದರು. National Disaster Response Force ತಂಡದ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೂಪ ಮರಿಯ ಡಿಕೋಸ್ಟ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.













