






ಆಲಂಕಾರು: ಗಾನಸಿರಿ ಕಲಾ ಕೇಂದ್ರ (ರಿ), ಪುತ್ತೂರು ಇದರ ಆಲಂಕಾರು ಶಾಖೆಯು ಇತ್ತೀಚೆಗೆ ಲೋಕಾರ್ಪಣೆಗೊಂಡಿತು.



ಆಲಂಕಾರು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷೆ ಸುಶೀಲಾ ಅವರು ದೀಪ ಬೆಳಗಿಸುವ ಮೂಲಕ ಶಾಖೆಯನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ಹೊಸದಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ವಿದ್ಯಾರಂಭ ಹಾಗೂ ಗುರುವಂದನೆ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಗಾನಸಿರಿ ಕಲಾ ಕೇಂದ್ರದ ಮುಖ್ಯಸ್ಥ ಡಾ. ಕಿರಣ್ ಕುಮಾರ್ ಗಾನಸಿರಿ, ಗಾಯಕಿ ಲಿಖಿತ, ಸಂಸ್ಥೆಯ ಪೋಷಕರಾದ ಗಾಯತ್ರೀ ಹಾಗೂ ಸುಧಾಕರ್ ಉಪಸ್ಥಿತರಿದ್ದು ಶುಭ ಹಾರೈಸಿದರು.




ಆಲಂಕಾರು ಶಾಖೆಯಲ್ಲಿ ಸುಗಮ ಸಂಗೀತ ತರಬೇತಿಗೆ ಈಗಾಗಲೇ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ದೊರಕಿದ್ದು, ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅವಕಾಶವಿದೆ. “ಸಂಗೀತದ ಮೂಲಕ ವ್ಯಕ್ತಿತ್ವ ವಿಕಸನ” ಗಾನಸಿರಿಯ ಧ್ಯೇಯವಾಗಿದೆ. ಹೆಚ್ಚಿನ ಮಾಹಿತಿಗಾಗಿ 99015 55893 ಸಂಪರ್ಕಿಸಬಹುದಾಗಿದೆ.











